ETV Bharat / bharat

Horoscope -2022.. ಮಿಥುನ ರಾಶಿಯವರಿಗೆ ವರ್ಷಾರಂಭದಲ್ಲಿ ಶುಭ ಸುದ್ದಿ; ನಂತರ ಹೇಗಿರುತ್ತೆ?

author img

By

Published : Dec 30, 2021, 6:30 PM IST

ಮಿಥುನ ರಾಶಿಯವರಿಗೆ ವರ್ಷದ ಆರಂಭದಲ್ಲಿ ಅತ್ಯಂತ ಶುಭ ಸುದ್ದಿ ಕೇಳಲಿದ್ದೀರಿ. ವರ್ಷದ ಮಧ್ಯ ಭಾಗವು ಚೆನ್ನಾಗಿರಲಿದ್ದು, ನೀವು ಸಾಕಷ್ಟು ವಿರಾಮವನ್ನು ಪಡೆಯಲಿದ್ದೀರಿ. ಏಪ್ರಿಲ್‌ ನಂತರ ಶನಿಯ ಸಂಕ್ರಮಣವು ನಿಮಗೆ ಒಂದಷ್ಟು ಸಮಸ್ಯೆ ಉಂಟುಮಾಡುವ ಸಾಧ್ಯತೆಯಿದೆ.

ETV BHARAT YEARLY HOROSCOPE,Your 2022 horoscop,2022ರ ರಾಶಿ ಭವಿಷ್ಯ,ಹೊಸ ವರ್ಷದ ರಾಶಿ ಭವಿಷ್ಯ

2022ರ ಈ ವರ್ಷವು ಮಿಥುನ ರಾಶಿಯವರಿಗೆ ಅತ್ಯಂತ ಶುಭ ಸುದ್ದಿಯನ್ನು ತಂದುಕೊಡಲಿದೆ. ಈ ವರ್ಷದಲ್ಲಿ ನೀವು ಕೆಲವು ಹೊಸ ದಾಖಲೆಗಳನ್ನು ಮಾಡಲಿದ್ದೀರಿ. ನೀವು ವಿದ್ಯಾರ್ಥಿಯಾಗಿದ್ದರೆ, ಈ ವರ್ಷವು ನಿಮ್ಮ ವರ್ಷವೆನಿಸಲಿದೆ. ನಿಮ್ಮ ಕಠಿಣ ಶ್ರಮ ಹಾಗೂ ಏಕಾಗ್ರತೆಯಿಂದ ಕಲಿಯುವ ಪ್ರವೃತ್ತಿಯು ನಿಮಗೆ ಯಶಸ್ಸನ್ನು ತಂದು ಕೊಡಲಿದೆ.

ಈ ಮೂಲಕ ಜನರ ಹೃದಯವನ್ನು ಗೆಲ್ಲುವಲ್ಲಿ ನೀವು ಯಶಸ್ಸು ಗಳಿಸಲಿದ್ದೀರಿ. ನೀವು ವ್ಯಾಪಾರಿಯಾಗಿದ್ದರೆ ಸಾಕಷ್ಟು ಲಾಭವನ್ನು ಗಳಿಸಲಿದ್ದೀರಿ. ನೀವು ಉದ್ಯೋಗಿಯಾಗಿದ್ದರೆ ನಿಮ್ಮ ಬಾಸ್‌ನ ನಂಬಿಕೆ ಗಳಿಸಿದ್ದೀರಿ ಹಾಗೂ ನಿಮ್ಮ ಕಠಿಣ ಶ್ರಮದ ಮೂಲಕ ನಿಮ್ಮ ಸ್ಥಾನವನ್ನು ವೃದ್ಧಿಸಲಿದ್ದೀರಿ. ಆರೋಗ್ಯದ ಕುರಿತ ಅಸಡ್ಡೆಯು ನಿಮಗೆ ಸಮಸ್ಯೆಯುಂಟು ಮಾಡಬಹುದು.

ಹೀಗಾಗಿ ಆರೋಗ್ಯದ ಕುರಿತು ಈ ವರ್ಷದಲ್ಲಿ ನೀವು ಎಚ್ಚರಿಕೆಯಿಂದ ಇರಬೇಕು. ಇಲ್ಲದಿದ್ದರೆ ನೀವು ಸಮಸ್ಯೆಯನ್ನು ಎದುರಿಸಬೇಕಾದೀತು. ಏಪ್ರಿಲ್‌ನಿಂದ ಡಿಸೆಂಬರ್‌ ತನಕ ನಿಮ್ಮ ವೃತ್ತಿಯಲ್ಲಿ ನೀವು ಗುರು ಬಲವನ್ನು ಪಡೆಯಲಿದ್ದೀರಿ. ಆದರೂ ಖರ್ಚುವೆಚ್ಚಗಳ ನಿಯಂತ್ರಣವು ನಿಮ್ಮ ಪಾಲಿಗೆ ಅತ್ಯಂತ ದೊಡ್ಡ ಸವಾಲೆನಿಸಲಿದೆ.

ಹಣಕಾಸನ್ನು ಚೆನ್ನಾಗಿ ನಿಭಾಯಿಸದೆ ಹೋದರೆ ಈ ಸವಾಲುಗಳು ನಿಮಗೆ ಸಮಸ್ಯೆಯನ್ನುಂಟು ಮಾಡಬಹುದು. ನಿಮ್ಮ ಕುಟುಂಬದ ಸದಸ್ಯರ ಸಾಮರಸ್ಯವನ್ನು ಕಂಡು ಆಂತರಿಕ ಸಂತಸವನ್ನು ಪಡೆಯಲಿದ್ದೀರಿ. ವರ್ಷದ ಮಧ್ಯ ಭಾಗವು ಚೆನ್ನಾಗಿರಲಿದ್ದು, ನೀವು ಸಾಕಷ್ಟು ವಿರಾಮವನ್ನು ಪಡೆಯಲಿದ್ದೀರಿ. ಏಪ್ರಿಲ್‌ ನಂತರ ಶನಿಯ ಸಂಕ್ರಮಣವು ನಿಮಗೆ ಒಂದಷ್ಟು ಸಮಸ್ಯೆ ತಂದು ಕೊಡಲಿದೆ. ಎಷ್ಟು ಕಠಿಣವಾಗಿ ದುಡಿದರೂ ನಿರೀಕ್ಷಿತ ಯಶಸ್ಸನ್ನು ನೀವು ಪಡೆಯುತ್ತಿಲ್ಲ ಎಂದು ನೀವು ಭಾವಿಸಬಹುದು. ಆದರೆ ನೀವು ಭೀತಿಗೆ ಒಳಗಾಗುವ ಅಗತ್ಯವಿಲ್ಲ.

ಸ್ವಲ್ಪ ಸಮಯದ ನಂತರ ನೀವು ಯಶಸ್ಸನ್ನು ಗಳಿಸಲಿದ್ದೀರಿ. ನಿಮ್ಮ ಜೊತೆ ಕೆಲಸ ಮಾಡುವ ಜನರ ಮೇಲೆ ನೀವು ನಂಬಿಕೆ ಇಡಬೇಕು. ಈ ವರ್ಷವು ನಿಮಗೆ ಪ್ರಯಾಣದ ಅನೇಕ ಅವಕಾಶಗಳನ್ನು ತಂದು ಕೊಡಲಿದೆ. ಅಲ್ಲದೆ ನೀವು ಈ ವರ್ಷದಲ್ಲಿ ಅನೇಕ ಪುಣ್ಯಸ್ಥಳಗಳಿಗೂ ಭೇಟಿ ನೀಡಬಹುದು. ಧಾರ್ಮಿಕ ಭೇಟಿಗಳನ್ನು ಮಾಡುವ ಸಾಧ್ಯತೆ ಅಧಿಕವಾಗಿದೆ. ವರ್ಷದ ಆರಂಭದಲ್ಲಿ ನಿಮ್ಮ ವಿರೋಧಿಗಳು ನಿಮ್ಮ ವಿರುದ್ಧ ಷಡ್ಯಂತ್ರ ರೂಪಿಸುವ ಸಾಧ್ಯತೆ ಇರುವುದರಿಂದ ಈ ಕುರಿತು ವಿಶೇಷ ಗಮನ ವಹಿಸಬೇಕು.

ನೀವು ಅವರ ಕುರಿತು ಎಚ್ಚರ ವಹಿಸಿದರೆ ಬಚಾವ್‌ ಆಗುತ್ತೀರಿ. ವರ್ಷದ ಮಧ್ಯ ಭಾಗದಲ್ಲಿ ನೀವು ಅವರ ಮೇಲೆ ಪ್ರಾಬಲ್ಯ ಸಾಧಿಸಲಿದ್ದೀರಿ. ವರ್ಷದ ಕೊನೆಗೆ ಪರಿಸ್ಥಿತಿಯಲ್ಲಿ ಇನ್ನಷ್ಟು ಸುಧಾರಣೆ ಉಂಟಾಗಲಿದೆ. ನಿಮ್ಮ ಅನೇಕ ವಿರೋಧಿಗಳು ನಿಮ್ಮ ಗೆಳೆಯರಾಗಲೂ ಬಹುದು. ಇದು ನಿಮ್ಮಲ್ಲಿ ಸಂತಸ ಉಂಟು ಮಾಡಲಿದೆ. ಹೀಗಾದರೆ ಅವರ ಬಗ್ಗೆ ನೀವು ಚಿಂತಿಸಬೇಕಾದ ಅವಶ್ಯಕತೆ ಉಂಟಾಗುವುದಿಲ್ಲ. ಸಂಪೂರ್ಣ ಆತ್ಮವಿಶ್ವಾಸದ ಮೂಲಕ ಈ ವರ್ಷದಲ್ಲಿ ನೀವು ಉತ್ತಮ ಫಲಿತಾಂಶ ಪಡೆಯಲಿದ್ದೀರಿ ಹಾಗೂ ನಿಮ್ಮ ಬದುಕಿನಲ್ಲಿ ಯಶಸ್ಸನ್ನು ಪಡೆಯಲಿದ್ದೀರಿ. ನಿಮ್ಮ ಕುಟುಂಬದ ಸದಸ್ಯರ ಆರೋಗ್ಯದ ಕುರಿತು ಸಾಕಷ್ಟು ಕಾಳಜಿ ವಹಿಸಬೇಕು.

ಇದನ್ನೂ ಓದಿ: Horoscope-2022: ಹೊಸ ವರ್ಷ ಯಾವ ರಾಶಿಯವರಿಗೆ ಅದೃಷ್ಟ, ಹೇಗಿರಲಿದೆ ನಿಮ್ಮ ಭವಿಷ್ಯ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.