ETV Bharat / bharat

ಈ ವರ್ಷ ಕರ್ಕಾಟಕ ರಾಶಿಯವರಿಗೆ ಸಿಹಿ ಸುದ್ದಿ: ಬದುಕಿನ ದಿಕ್ಕು ಬದಲಾಯಿಸುವ ನಿರ್ಧಾರ ಕೈಗೊಳ್ಳಿ

author img

By

Published : Dec 30, 2021, 8:06 PM IST

ನೂತನ ವರ್ಷ ಕರ್ಕಾಟಕ ರಾಶಿಯವರಿಗೆ ಶುಭ ಸುದ್ದಿ ನೀಡಲಿದೆ. ನೀವು ಕೈಗೊಳ್ಳುವ ನಿರ್ಧಾರ ನಿಮ್ಮ ಬದುಕಿನ ದಿಕ್ಕನ್ನು ಬದಲಾಯಿಸಲಿದೆ. ಆದರೆ, ಶನಿಯ ಸಂಕ್ರಮಣ ಉಂಟಾಗುವ ಕಾರಣ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನೀವು ಎದುರಿಸಬಹುದು.

Your 2022 Horoscope ; Good news for Cancer Horoscope

ಈ ವರ್ಷವು ಕರ್ಕಾಟಕ ರಾಶಿಯವರಿಗೆ ಅನೇಕ ಕ್ಷೇತ್ರಗಳಲ್ಲಿ ಅತ್ಯಂತ ಶುಭ ಸುದ್ದಿಯನ್ನು ತಂದುಕೊಡಲಿದೆ. ವ್ಯವಹಾರದಲ್ಲಿ ನೀವು ಸಾಕಷ್ಟು ಪ್ರಗತಿ ಸಾಧಿಸಲಿದ್ದೀರಿ. ನೀವು ಭಾವಿಸದೆ ಇದ್ದ ಕ್ಷೇತ್ರದಲ್ಲಿಯೂ ಉತ್ತಮ ಲಾಭ ಗಳಿಸಲಿದ್ದೀರಿ. ನೀವು ಉದ್ಯೋಗಿ ಆಗಿದ್ದರೆ, ಮೆಲ್ಲನೆ ಆದರೂ ಖಂಡಿತವಾಗಿಯೂ ಯಶಸ್ಸು ಸಾಧಿಸಲಿದ್ದು, ಪ್ರೋತ್ಸಾಹಕವನ್ನೂ ಪಡೆಯಲಿದ್ದೀರಿ.

ನೀವು ಸಾಕಷ್ಟು ಪ್ರಯಾಣವನ್ನು ಮಾಡಬಹುದು. ನಿಮ್ಮ ಕೆಲಸದ ಕುರಿತು ಪ್ರಶಂಸೆ ವ್ಯಕ್ತವಾಗಲಿದೆ. ಜನರ ಕಣ್ಣಿನಲ್ಲಿ ನಿಮ್ಮ ಕೆಲಸದ ಮೌಲ್ಯವು ವೃದ್ಧಿಸಲಿದೆ. ಕುಟುಂಬದ ವಾತಾವರಣವು, ಇಡೀ ವರ್ಷದಲ್ಲಿ ನೀವು ಮುಂದೆ ಹೆಜ್ಜೆ ಇಡಲು ಸಹಾಯ ಮಾಡಲಿದೆ. ವರ್ಷದ ಮಧ್ಯ ಭಾಗದಲ್ಲಿ ನಿಮ್ಮ ಕುಟುಂಬದ ಹಿರಿಯರ ಆರೋಗ್ಯದಲ್ಲಿ ಕುಸಿತ ಉಂಟಾಗುವ ಕಾರಣ ನೀವು ಚಿಂತೆಗೆ ಒಳಗಾಗಬಹುದು. ಆದರೆ, ಕೊನೆಯ ಮೂರು ತಿಂಗಳುಗಳ ಶುಭಕರವೆನಿಸಲಿವೆ. ಕುಟುಂಬದಲ್ಲಿ ಪರಸ್ಪರ ಸಾಮರಸ್ಯ ಇರಲಿದೆ. ಜನರು ಪರಸ್ಪರ ಕಾಳಜಿ ತೋರಲಿದ್ದಾರೆ. ಈ ವರ್ಷದಲ್ಲಿ ಏನಾದರೂ ಹೊಸತನ್ನು ಸಾಧಿಸಲು ನೀವು ಅವಕಾಶ ಪಡೆಯಲಿದ್ದೀರಿ. ಕೆಲವು ಹೊಸ ಕಾಮಗಾರಿಗಳು ಪ್ರಾರಂಭಗೊಳ್ಳಿವೆ.

ಇದು ನಿಮ್ಮ ಚಿಂತನಾ ಶೈಲಿಯನ್ನು ಬದಲಾಯಿಸಲಿದೆ. ನಿಮ್ಮ ವಿಚಾರಗಳು ಬದಲಾಗಲಿವೆ. ನೀವು ಬದುಕನ್ನು ವಿಶಾಲ ದೃಷ್ಟಿಕೋನದಿಂದ ನೋಡಲಿದ್ದೀರಿ. ನೀವು ಆತ್ಮಾವಲೋಕನ ಮಾಡಲಿದ್ದು, ಬದುಕಿನಲ್ಲಿ ಯಾವ ಸರಿ ತಪ್ಪುಗಳನ್ನು ಮಾಡಿದ್ದೀರಿ ಎಂದು ಯೋಚಿಸಲಿದ್ದೀರಿ.

ಏಪ್ರಿಲ್‌ ತಿಂಗಳಿನಲ್ಲಿ ನಾಲ್ಕು ಪ್ರಮುಖ ಗ್ರಹಗಳ ರಾಶಿಯಲ್ಲಿ ಬದಲಾವಣೆ ಉಂಟಾಗಲಿದ್ದು ಇದು ನಿಮಗೆ ಸರಾಸರಿಗಿಂತಲೂ ಉತ್ತಮ ಫಲಿತಾಂಶ ತಂದು ಕೊಡಲಿದೆ. ಆದರೂ ಎಂಟನೇ ಮನೆಯಲ್ಲಿ ಶನಿಯ ಸಂಕ್ರಮಣ ಉಂಟಾಗುವ ಕಾರಣ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನೀವು ಎದುರಿಸಬಹುದು. ಏಪ್ರಿಲ್‌ ನಂತರ ರಾಹು ಮತ್ತು ಕೇತುಗಳು ನಿಮ್ಮ ನಾಲ್ಕನೇ ಮತ್ತು ಹತ್ತನೇ ಮನೆಯನ್ನು ಹಾದು ಹೋಗುತ್ತವೆ.

ವರ್ಷದ ಮಧ್ಯ ಭಾಗದ ನಂತರ ಭೂಮಿಗೆ ಸಂಬಂಧಿಸಿದ ಕೆಲಸಗಳಲ್ಲಿ ನೀವು ಸಾಕಷ್ಟು ಜಾಗರೂಕತೆ ವಹಿಸಬೇಕು. ಆದರೂ, ಏಪ್ರಿಲ್‌ ನಂತರ ಉಂಟಾಗುವ ಗುರುವಿನ ಸಂಕ್ರಮಣವು ಉದ್ಯೋಗದಲ್ಲಿರುವವರಿಗೆ ಶುಭ ಸಮಯವನ್ನು ತಂದು ಕೊಡಲಿದೆ. ಈ ವರ್ಷದಲ್ಲಿ ನೀವು ಜ್ಯೋತಿಷ್ಯ ಶಾಸ್ತ್ರ ಅಥವಾ ಪುರಾತತ್ವಕ್ಕೆ ಸಂಬಂಧಿಸಿದ ವಿಷಯದಲ್ಲಿ ಆಸಕ್ತಿ ತೋರಲಿದ್ದೀರಿ.

ಅಧ್ಯಾತ್ಮಿಕ ವಿಚಾರಗಳಲ್ಲಿ ನೀವು ಸಕ್ರಿಯವಾಗಿ ಭಾಗವಹಿಸಲಿದ್ದೀರಿ ಹಾಗೂ ಅವುಗಳನ್ನು ಆನಂದಿಸಲಿದ್ದೀರಿ. ನಿಮ್ಮ ವರ್ಚಸ್ಸಿನಲ್ಲಿ ವೃದ್ಧಿಯಾಗಲಿದ್ದು, ನಿಮ್ಮ ಶುಭ ಕಾರ್ಯಗಳೊಂದಿಗೆ ಹೆಸರು ಗಳಿಸಲಿದ್ದೀರಿ. ಯಾರಾದರೂ ಗುರುಗಳು ಅಥವಾ ಅಧ್ಯಾತ್ಮಿಕ ವ್ಯಕ್ತಿಯ ಮಾರ್ಗದರ್ಶನವನ್ನು ನೀವು ಪಡೆಯಲಿದ್ದು ಇದು ನಿಮ್ಮ ಬದುಕಿನ ದಿಕ್ಕನ್ನು ಬದಲಾಯಿಸಲಿದೆ. ವರ್ಷದಲ್ಲಿ ನೀವು ವ್ಯಾವಹಾರಿಕ ಉದ್ದೇಶದಿಂದ ವಿದೇಶಕ್ಕೆ ಹೋಗುವ ಸಾಧ್ಯತೆ ಇದೆ.

ಇದನ್ನೂ ಓದಿ: Horoscope 2022: ಈ ರಾಶಿಯವರಿಗೆ ಹೊಸ ವರ್ಷ ತಂದುಕೊಡಲಿದೆ ಬಹುದೊಡ್ಡ ಬದಲಾವಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.