ಹೈದರಾಬಾದ್ (ತೆಲಂಗಾಣ) : ಆ್ಯಪ್ವೊಂದರ ಮೂಲಕ ಯುವಕನೊಬ್ಬ ಅಮೆರಿಕದಲ್ಲಿ ಓದುತ್ತಿದ್ದ ಯುವತಿ ಜತೆ ಸಂಪರ್ಕ ಬೆಳೆಸಿ ವಂಚಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ಯುವತಿ ಹೈದರಾಬಾದ್ ಪೊಲೀಸರಿಗೆ ದೂರು ನೀಡಿದ್ದಾಳೆ.
ಸಂತ್ರಸ್ತೆಯು ಅಮೆರಿಕದಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದು, ಆ್ಯಪ್ವೊಂದರ ಮೂಲಕ ಆದಿತ್ಯ ಎಂಬಾತನ ಪರಿಚಯವಾಗಿದೆ. ಈ ವೇಳೆ, ಯುವಕ ನನ್ನ ಬಳಿ ಒಂದು ಕೋಟಿ ರೂಪಾಯಿ ಮೌಲ್ಯದ ಆಸ್ತಿಯಿದೆ. ನಾನು ನಿನ್ನನ್ನು ಮದುವೆಯಾಗುತ್ತೇನೆ. ಹೈದರಾಬಾದ್ಗೆ ಬಾ ಎಂದು ಕರೆದಿದ್ದಾನೆ.
ಇದನ್ನು ನಂಬಿದ ಆಕೆ, ಹೈದರಾಬಾದ್ಗೆ ಬಂದು ಮಣಿಕೊಂಡದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದಾಳೆ. ಬಳಿಕ ಇಬ್ಬರು ಧರ್ಮಶಾಲಾ, ಜಮ್ಮುಕಾಶ್ಮೀರ, ಶ್ರೀನಗರ, ಗೋವಾ ಎಲ್ಲಾ ಸುತ್ತಾಡಿದ ನಂತರ ಬಂಜಾರ ಹಿಲ್ಸ್ಗೆ ಮನೆ ಶಿಫ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಕೆಳ ವರ್ಗದವರ ಬಗ್ಗೆ ಹಗುರ ಮಾತು ಆರೋಪ: ಕಾಲಿವುಡ್ ನಟಿ ಬಂಧನ
ಕೆಲ ದಿನಗಳ ನಂತರ ಸಂತ್ರಸ್ತೆಯು ತಂದೆಯ ಜನ್ಮದಿನಕ್ಕೆಂದು ಹೈದರಾಬಾದ್ನ ಎಂಎಸ್ ಮಕ್ತಾಗೆ ಹೋಗಿದ್ದು, ಯುವಕ ಬೆಂಗಳೂರಿಗೆ ಹೋಗಿದ್ದಾನೆ. ಎಷ್ಟೇ ದಿನಗಳಾದರೂ ಯುವಕ ಮರಳಿ ಬಂದಿಲ್ಲ. ಅವನ ಮೊಬೈಲ್ ಕೂಡ ಸ್ವಿಚ್ಡ್ ಆಫ್ ಬರುತ್ತಿದ್ದು, ಯುವತಿ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾಳೆ.