ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೊಂದು ಹೀನ ಕೃತ್ಯ ಬೆಳಕಿಗೆ ಬಂದಿದೆ. ಯುವತಿ ಪ್ರೀತಿಸದ ಕಾರಣ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಆದರೆ, ಯುವಕನ ಕುಟುಂಬಸ್ಥರು ತನ್ನ ಮಗನಿಗೆ ಅವಳೇ ಕಾರಣ ಎಂದು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಬೆತ್ತಲೆ ಮರೆವಣಿಗೆ ಮಾಡಿಸಿದ್ದರು. ಇದಕ್ಕೂ ಮುನ್ನ ಆಕೆಯ ಸಹೋದರಿಗೆ ಕಿರುಕುಳ ನೀಡಿ ಥಳಿಸಿರುವ ಪ್ರಕರಣ ಈಗ ಬೆಳಕಿಗೆ ಬಂದಿದೆ.
ಏನಿದು ಘಟನೆ: ಪೂರ್ವ ದೆಹಲಿಯ ಕಾಲೋನಿಯಲ್ಲಿ ವಾಸಿಸುತ್ತಿದ್ದ ಕುಟುಂಬವೊಂದು ಯುವತಿಗೆ ಇತ್ತಿಚೇಗೆ ಅದೇ ನಗರದಲ್ಲಿ ವಾಸಿಸುತ್ತಿದ್ದ ಯುವಕನೊಬ್ಬ ಪ್ರಪೋಸ್ ಮಾಡಿದ್ದನು. ಆದ್ರೆ ಆ ಯುವಕನ ಪ್ರೀತಿಯನ್ನು ಯುವತಿ ನಿರಾಕರಿಸಿದ್ದಳು. ಇದರಿಂದ ಬೇಸತ್ತ ಆ ಯುವಕ ಆತ್ಮಹತ್ಯೆಗೆ ಶರಣಾಗಿದ್ದನು.
ಆದ್ರೆ ಯುವಕನ ಕುಟುಂಬಸ್ಥರು ನನ್ನ ಮಗನ ಸಾವಿಗೆ ಆ ಯುವತಿಯೇ ಕಾರಣವೆಂದು ತಿಳಿದು ಆಕೆಯನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರ ಎಸಗಿದಲ್ಲದೇ ಬೆತ್ತಲೆಯಾಗಿಸಿ ಬೀದಿಗಳಲ್ಲಿ ಮೆರವಣಿಗೆ ಮಾಡಿದ್ದರು. ಇದಾದ ಕೆಲವು ದಿನಗಳ ಮುನ್ನ ಆಕೆಯ ಕಿರಿಯ ಸಹೋದರಿಯ ಮೇಲೂ ಹಲ್ಲೆ ನಡೆಸಿದ್ದರು ಎಂಬುದಾಗಿ ತಿಳಿದುಬಂದಿದೆ.
ಓದಿ: ಇಂದು ದೇಶದಲ್ಲಿ 2.09 ಲಕ್ಷ ಜನರಿಗೆ ಕೋವಿಡ್ ಪಾಸಿಟಿವ್.. 959 ಮಂದಿ ಸಾವು
ಕಸ್ತೂರಬಾ ನಗರದಲ್ಲಿ ನಡೆದ ಆಘಾತಕಾರಿ ಘಟನೆಯ ಸಂತ್ರಸ್ತೆಯ 18 ವರ್ಷದ ಕಿರಿಯ ಸಹೋದರಿಯ ದೂರಿನ ಮೇರೆಗೆ ಪೊಲೀಸರು ಈಗಾಗಲೇ ಬಂಧಿತರಾಗಿರುವ ಎಂಟು ಮಹಿಳೆಯರು, ಒಬ್ಬ ಪುರುಷ ಮತ್ತು ಮೂವರು ಅಪ್ರಾಪ್ತರು ಸೇರಿದಂತೆ ಯುವತಿ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಮತ್ತೊಂದು ಪ್ರಕರಣ ದಾಖಲಿಸಿದ್ದಾರೆ.
ಅಕ್ಕನ ವಿರುದ್ಧದ ಅಪರಾಧದಲ್ಲಿ ಆಪಾದಿತ ಪಾತ್ರಗಳಿಗಾಗಿ ಪೊಲೀಸರು ಈಗಾಗಲೇ ಎಂಟು ಮಹಿಳೆಯರು ಮತ್ತು ಒಬ್ಬ ಪುರುಷನನ್ನು ಸೇರಿದಂತೆ 9 ಜನರನ್ನು ಬಂಧಿಸಿದ್ದಾರೆ. ಇದಲ್ಲದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಬಾಲಕರನ್ನು ಬಂಧಿಸಿದ್ದಾರೆ ಎಂದು ಶಹದಾರ ಉಪ ಪೊಲೀಸ್ ಆಯುಕ್ತ ಆರ್ ಸತ್ಯಸುಂದರಂ ಹೇಳಿದ್ದಾರೆ.
ಪೊಲೀಸರು ಆರೋಪಿಗಳನ್ನು ಬಂಧಿಸಿದ ನಂತರ ಸಂತ್ರಸ್ತೆಯ ಕಿರಿಯ ಸಹೋದರಿ ತನ್ನ ದೂರು ಸಲ್ಲಿಸಿದ್ದಾಳೆ. ದೂರಿನಲ್ಲಿ ತನ್ನ ಅಕ್ಕ ಮೇಲಾದ ಘಟನೆಗೂ ಮುನ್ನ ತನಗೂ ಕಿರುಕುಳ ನೀಡಿ, ಥಳಿಸಿದ್ದಾರೆ ಎಂದು ಸಂತ್ರಸ್ತೆಯ ಕಿರಿಯ ಸಹೋದರಿ ಆರೋಪಿಸಿದ್ದಾರೆ.
ಜನವರಿ 19 ರಂದು ತನ್ನ ಮೇಲೆ ಹಲ್ಲೆ ನಡೆಸಿ ಥಳಿಸಿದ್ದು, ಆಟೋಕ್ಕೂ ಬೆಂಕಿ ಹಚ್ಚಲಾಗಿದೆ. ನಾನು ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಜಗಳವಾಡಿದರು. ಇದರಿಂದಾಗಿ ನಾನು ಕೆಲಸ ಬಿಡಬೇಕಾಯಿತು ಎಂದು ಕಿರಿಯ ಸಹೋದರಿ ದೂರಿನಲ್ಲಿ ಆರೋಪಿಸಿದ್ದಾರೆ ಎಂದು ಡಿಸಿಪಿ ತಿಳಿಸಿದ್ದಾರೆ.
ಓದಿ: ಇಂದಿನಿಂದ ಕೇಂದ್ರ ಬಜೆಟ್ ಅಧಿವೇಶನ.. ಸಂಸತ್ನಲ್ಲಿ ಪೆಗಾಸಸ್ ರಿಂಗಣ ಸಾಧ್ಯತೆ!
ನಾನು ಮನೆಯಲ್ಲಿದ್ದಾಗ, ಆರೋಪಿಗಳು ಮತ್ತು ಮಹಿಳೆಯರು ಬಂದು ನನ್ನನ್ನು ಥಳಿಸಿದರು. ನಾನು ಹೊರಗೆ ಹೋದಾಗ ಅವರ ಮನೆಯ ಗಂಡು ಮಕ್ಕಳು ನನಗೆ ಕಿರುಕುಳ ನೀಡಿದರು. ನಾವು ಪೊಲೀಸರಿಗೆಲ್ಲ ಹೆದರುವುದಿಲ್ಲ ಎಂದು ಹೇಳುತ್ತಿದ್ದರು ಎಂದು ಸಂತ್ರಸ್ತೆಯ ಕಿರಿಯ ಸಹೋದರಿ ಆರೋಪಿಸಿದ್ದಾರೆ.
ಆಕೆಯ ದೂರಿನ ಮೇರೆಗೆ ಅಕ್ಕನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಬಂಧಿತರೆಲ್ಲರ ವಿರುದ್ಧ ಶನಿವಾರ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ. ಎರಡನೇ ಪ್ರಕರಣವನ್ನು ಐಪಿಸಿ ಸೆಕ್ಷನ್‌ಗಳಡಿ ಕಿರುಕುಳ, ದೈಹಿಕ ಹಲ್ಲೆ, ಕ್ರಿಮಿನಲ್ ಬೆದರಿಕೆ ಮತ್ತು ಬೆಂಕಿಯಿಂದ ಕಿಡಿಗೇಡಿತನ ಮಾಡಿದ್ದಾರೆ ಎಂದು ದೂರು ದಾಖಲಿಸಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.
ಅವರ ಕುಟುಂಬಕ್ಕೆ ಸೇರಿದ ಹದಿಹರೆಯದ ಹುಡುಗನೊಬ್ಬನ ಪ್ರೀತಿಯನ್ನು ತಿರಸ್ಕರಿಸಲ್ಪಟ್ಟ ನಂತರ ಆತ್ಮಹತ್ಯೆ ಮಾಡಿಕೊಂಡ. ನಂತರ 20 ವರ್ಷದ ಮಹಿಳೆಯನ್ನು ಆಕೆಯ ನೆರೆಹೊರೆಯವರು ಹಲ್ಲೆ ನಡೆಸಿ ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ