ETV Bharat / bharat

ತಮ್ಮನ ಹೆಂಡ್ತಿ ಮೇಲೆ ಅಣ್ಣನಿಂದ ಅತ್ಯಾಚಾರ.. ಕೊಲೆ ಬೆದರಿಕೆ, ಪ್ರಕರಣ ದಾಖಲು - molest case in MP

ವರ್ಷದ ಹಿಂದೆ ಮದುವೆ ಮಾಡಿಕೊಂಡಿದ್ದ ತಮ್ಮನ ಹೆಂಡತಿ ಮೇಲೆ ಅಣ್ಣನೊಬ್ಬ ಕುಡಿದ ನಶೆಯಲ್ಲಿ ನಿರಂತರವಾಗಿ ಅತ್ಯಾಚಾರ ಎಸಗಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿ ನಡೆದಿದೆ.

Younger brother molested brother wife
Younger brother molested brother wife
author img

By

Published : Jun 22, 2021, 10:45 PM IST

ಗ್ವಾಲಿಯರ್​(ಮಧ್ಯಪ್ರದೇಶ): ಕುಡಿದ ನಶೆಯಲ್ಲಿ ಅಣ್ಣನೊಬ್ಬ ತಮ್ಮನ ಹೆಂಡತಿ ಮೇಲೆ ನಿರಂತರವಾಗಿ ದೈಹಿಕ ಕಿರುಕುಳ ನೀಡಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್​​ನಲ್ಲಿ ನಡೆದಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ರೆ ಗಂಡನನ್ನ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ ಎಂದು ಮಹಿಳೆ ಆರೋಪ ಮಾಡಿದ್ದಾಳೆ.

ಗ್ವಾಲಿಯರ್​​ನ ಮಹಾರಾಜಪುರ ಪೊಲೀಸ್ ಠಾಣೆಯ ಭದ್ರೌಲಿಯಲ್ಲಿ ಈ ಘಟನೆ ನಡೆದಿದೆ. ಸಂತ್ರಸ್ತೆಯ ಪತಿ ಮನೆಗೆ ವಾಪಸ್​ ಬಂದಾಗ ಸಂಪೂರ್ಣ ಮಾಹಿತಿ ಹಂಚಿಕೊಂಡಿದ್ದಾಳೆ. ಇದೀಗ ಅಣ್ಣನ ವಿರುದ್ಧ ತಮ್ಮ ಪೊಲೀಸ್​ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾನೆ.

ಗಂಡನ ಕೊಲೆ ಮಾಡುವ ಬೆದರಿಕೆ

ಸಂತ್ರಸ್ತ ಮಹಿಳೆ ಕಳೆದ ಒಂದು ವರ್ಷದ ಹಿಂದೆ ಮದುವೆಯಾಗಿದ್ದಾಳೆ. ಆದರೆ ಪತಿ ಕೆಲಸದ ನಿಮಿತ್ತವಾಗಿ ಮನೆಯಿಂದ ಹೊರಗಡೆ ಉಳಿದುಕೊಂಡಿದ್ದನು. ಕಂಠಪೂರ್ತಿ ಕುಡಿದು ಮನೆಗೆ ಬರುತ್ತಿದ್ದ ಗಂಡನ ಅಣ್ಣ ಆಕೆಯ ಜೊತೆಗೆ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದನು. ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಗಂಡನನ್ನ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದನು. ಹೀಗಾಗಿ ಮೇಲಿಂದ ಮೇಲೆ ದುಷ್ಕೃತ್ಯವೆಸಗಿದ್ದಾನೆ.

ಇದನ್ನೂ ಓದಿರಿ: ಸಮಾರಂಭದಲ್ಲಿ ಗುಂಡು ಹಾರಿಸಿದ BJP MLA ಸೋದರಳಿಯ.. Video Viral​!

ಗಂಡ ಮನೆಗೆ ಬಂದಾಗ ಸಂಪೂರ್ಣ ಘಟನೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾಳೆ. ಈ ವೇಳೆ, ಪತಿ ಹತ್ತಿರದ ಪೊಲೀಸ್ ಠಾಣೆಗೆ ತೆರಳಿ ಅಣ್ಣನ ವಿರುದ್ಧ ದೂರು ದಾಖಲು ಮಾಡಿದ್ದಾನೆ. ಘಟನೆ ಬಗ್ಗೆ ಮಾತನಾಡಿರುವ ಎಸ್​ಪಿ ಅಮಿತ್ ಸಾಹ್ನಿ, ಆರೋಪಿ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದ್ದು, ಆತನಿಗೋಸ್ಕರ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದಿದ್ದಾರೆ. ಕಳೆದ ಕೆಲ ದಿನಗಳಿಂದ ಗ್ವಾಲಿಯರ್​​ನಲ್ಲಿ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣ ಹೆಚ್ಚಾಗುತ್ತಿದ್ದು, ಪ್ರತಿದಿನ 5ರಿಂದ 6 ಪ್ರಕರಣಗಳು ವರದಿಯಾಗುತ್ತಿವೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.