ಗುಂಟೂರು: ಮಗಳೊಬ್ಬಳು ತನ್ನ ತಾಯಿ ಜೊತೆ ವಿವಾಹೇತರ ಸಂಬಂಧ ಹೊಂದಿದ್ದ ವ್ಯಕ್ತಿಯ ಗುಪ್ತಾಂಗವನ್ನು ಕತ್ತರಿಸಿರುವ ಘಟನೆ ಜಿಲ್ಲೆಯ ತೆನಾಲಿಯಲ್ಲಿ ನಡೆದಿದೆ. ಸೋಮವಾರ ರಾತ್ರಿ ನಡೆದಿದ್ದು, ಗುಂಟೂರು ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ.
ಏನಿದು ಘಟನೆ: ಬಾಪಟ್ಲಾ ಜಿಲ್ಲೆಯ ಚೆರುಕುಪಲ್ಲಿ ತಾಲೂಕಿನ ತುಮ್ಮಲಪಾಲಂ ಗ್ರಾಮದ ಎಸ್. ರಾಮಚಂದ್ರರೆಡ್ಡಿ ಎರಡು ವರ್ಷಗಳ ಹಿಂದೆ ತೆನಾಲಿಗೆ ಬಂದಿದ್ದರು. ಈತ ಐತಾನಗರದ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ. ರೈಲ್ವೆ ನಿಲ್ದಾಣದ ಬಳಿಯ ಲಾಡ್ಜ್ ಬಳಿ ವಾಸವಿದ್ದ ಕಾರ್ಮಿಕ ರಾಮಚಂದ್ರರೆಡ್ಡಿ ಸೋಮವಾರ ರಾತ್ರಿ ಮದ್ಯ ಸೇವಿಸಿ ಮಹಿಳೆ ವಾಸವಿದ್ದ ಕಟ್ಟಡದಲ್ಲಿ ಮಲಗಿದ್ದ.
ಓದಿ: ಬೆಳೆದು ನಿಂತ ಮಗಳ ಮರೆತು 3ನೇ ಮದುವೆಗೆ ಹೊರಟ ಪತಿ; ಗುಪ್ತಾಂಗ ಕತ್ತರಿಸಿ ಕೊಲೆಗೈದ ಧರ್ಮಪತ್ನಿ
ತನ್ನ ತಾಯಿಯೊಂದಿಗಿನ ವಿವಾಹೇತರ ಸಂಬಂಧದ ಬಗ್ಗೆ ಯಾವಾಗಲೂ ಕೋಪಗೊಂಡ ಮಗಳು ತನ್ನ ಪ್ರಿಯಕರನ ಜೊತೆ ಸೇರಿ ರಾಮಚಂದ್ರ ರೆಡ್ಡಿ ಜೊತೆ ಜಗಳವಾಡಿದ್ದಾಳೆ. ಇವರ ಜಗಳ ವಿಕೋಪಕ್ಕೆ ತಿರುಗಿದ್ದು, ಯುವತಿ ತನ್ನ ಪ್ರಿಯಕರನ ಸಹಾಯ ಪಡೆದು ಬ್ಲೇಡ್ನಿಂದ ರಾಮಚಂದ್ರ ರೆಡ್ಡಿಯ ಗುಪ್ತಾಂಗ ಕತ್ತರಿಸಿದ್ದಾಳೆ.
ಸಂತ್ರಸ್ತನ ಕೂಗು ಕೇಳಿದ ಸ್ಥಳೀಯರು ಗಾಯಾಳು ತೆನಾಲಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಪ್ರಥಮ ಚಿಕಿತ್ಸೆಯ ನಂತರ ಉತ್ತಮ ಚಿಕಿತ್ಸೆಗಾಗಿ ಗುಂಟೂರು ಜಿಜಿಎಚ್‌ಗೆ ರವಾನಿಸಲಾಯಿತು. ತೆನಾಲಿ ಟೂಟೌನ್ ಸಿಐ ಕೋಟೇಶ್ವರ ರಾವ್ ಆಸ್ಪತ್ರೆಗೆ ಬಂದು ಸಂತ್ರಸ್ತನಿಂದ ವಿವರ ಪಡೆದರು. ಈ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.