ETV Bharat / bharat

ನಿಶ್ಚಿತಾರ್ಥ ಮಂಟಪದಲ್ಲೇ ರಂಪಾಟ ಮಾಡಿದ ಯುವತಿ.. ಕಾರಣ? - Civil Line Police Officer Dharmendra Vaishnav

ಪೆಟ್ರೋಲ್ ತುಂಬಿದ ಬಾಟಲ್​ ಹಿಡಿದುಕೊಂಡು ಬಂದ ಯುವತಿ, ನಿಶ್ಚಿತಾರ್ಥ ನಿಗದಿಯಾಗಿದ್ದ ವ್ಯಕ್ತಿ ತನ್ನೊಂದಿಗೆ ಈ ಹಿಂದೆ ಅಕ್ರಮ ಸಂಬಂಧ ಹೊಂದಿದ್ದು, ನನ್ನ ಗರ್ಭಕ್ಕೆ ಕಾರಣನಾಗಿದ್ದಾನೆ ಎಂದು ಆರೋಪಿಸಿದ್ದಲ್ಲದೇ ಆತ್ಮಹತ್ಯೆ ಮಾಡಿಕೊಳ್ಳುದಾಗಿ ಬೆದರಿಕೆ ಕೂಡ ಹಾಕಿದ್ದಾರೆ.

young woman creates ruckus at engagement in Bailaspur
ನಿಶ್ಚಿತಾರ್ಥ ಮಂಟಪದಲ್ಲೆ ರಂಪಾಟ ಮಾಡಿದ ಯುವತಿ
author img

By

Published : Dec 5, 2022, 5:14 PM IST

ಬಿಲಾಸ್‌ಪುರ: ಯುವತಿಯೊಬ್ಬಳು ಅಶುತೋಶ್​ ಎನ್ನುವ ಯುವಕನ ನಿಶ್ಚಿತಾರ್ಥ ನಡೆಯುವ ಸ್ಥಳಕ್ಕೆ ತೆರಳಿ, ಅಶುತೋಶ್​ ನನ್ನ ಮೇಲೆ ಅತ್ಯಾಚಾರವೆಸೆಗಿದ್ದಾನೆ ಎಂದು ರಂಪಾಟ ಮಾಡಿರುವ ಘಟನೆ ಛತ್ತೀಸ್‌ಗಢದ ಬಿಲಾಸ್‌ಪುರದಲ್ಲಿ ನಡೆದಿದೆ. ತಾರಾಬಹಾರ್ ಪ್ರದೇಶದ ಸಿಎಂಡಿ ಚೌಕ್ ಹೋಟೆಲ್‌ನಲ್ಲಿ ಅಶುತೋಷ್ ಎನ್ನುವವರ ನಿಶ್ಚಿತಾರ್ಥ ನಡೆಯುತಿತ್ತು. ಈ ಸಂದರ್ಭದಲ್ಲಿ ಆಗಮಿಸಿದ ಯುವತಿ ಗಲಾಟೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೆಟ್ರೋಲ್ ತುಂಬಿದ ಬಾಟಲ್ ಹಿಡಿದುಕೊಂಡು ಬಂದ ಯುವತಿ, ನಿಶ್ಚಿತಾರ್ಥ ನಿಗದಿಯಾಗಿದ್ದ ವ್ಯಕ್ತಿ ತನ್ನೊಂದಿಗೆ ಈ ಹಿಂದೆ ಅಕ್ರಮ ಸಂಬಂಧ ಹೊಂದಿದ್ದು, ನನ್ನ ಪ್ರಗ್ನೆನ್ಸಿಗೆ ಕಾರಣನಾಗಿದ್ದಾನೆ ಎಂದು ಆರೋಪಿಸಿದ್ದಾಳೆ. ಅಷ್ಟೇ ಅಲ್ಲ ತಾನು ಆತ್ಮಹತ್ಯೆ ಮಾಡಿಕೊಳ್ಳುದಾಗಿ ಬೆದರಿಕೆ ಕೂಡ ಹಾಕಿದ್ದಾಳೆ.

ಅಶುತೋಷ್ ವಿರುದ್ಧ ನಾನು ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 376 ರ ಅಡಿ ಪ್ರಕರಣ ದಾಖಲಿಸಿದ್ದೆ. ಅಶುತೋಷ್ ಅವರ ತಂದೆ ಪೊಲೀಸರ ಮುಂದೆ ನನ್ನ ಅವನ ಮದುವೆಗೂ ಒಪ್ಪಿಗೆ ನೀಡಿದ್ದರು. ಆದರೆ, ಆ ಬಳಿಕ ಈ ಕುರಿತು ಯಾವ ನಿರ್ಧಾರವನ್ನೂ ತೆಗೆದುಕೊಳ್ಳಲಿಲ್ಲ ಎಂದು ಯುವತಿ ಹೇಳಿದ್ದಾಳೆ.

ಆರೋಪ ನಿರಾಕರಿಸಿರುವ ಅಶುತೋಷ್​: ಆದರೆ ಯುವತಿಯ ಈ ಆರೋಪವನ್ನು ಅಶುತೋಷ್ ಅವರ ತಂದೆ ಅಲ್ಲಗಳೆದಿದ್ದಾರೆ. ಯುವತಿ ಮತ್ತು ಆಕೆಯ ಕುಟುಂಬದವರು ತಮ್ಮ ಮಗನ ಮೇಲೆ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಯುವತಿಯನ್ನು ಸಮಾಧಾನ ಪಡಿಸಿದರು. ಸದ್ಯ ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಸಿವಿಲ್ ಲೈನ್ ಪೊಲೀಸ್ ಠಾಣೆಯ ಅಧಿಕಾರಿ ಧರ್ಮೇಂದ್ರ ವೈಷ್ಣವ್ ತಿಳಿಸಿದ್ದಾರೆ.

ಇದನ್ನೂ ಓದಿ: ಉದ್ಯಮಿ ಪುತ್ರ ನಾಪತ್ತೆ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್​: ಮಗನ ಕೊಲೆಗೆ ತಂದೆಯಿಂದಲೇ ಸುಪಾರಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.