ETV Bharat / bharat

ಚಿನ್ನಕ್ಕಾಗಿ ಮಹಿಳೆ ಕಿಡ್ನಾಪ್​ ಮಾಡಿದ ಅಪರಿಚಿತರು​: ದೂರು ದಾಖಲು - Young woman abducted

ಮನ್ನಾರ್‌ನಲ್ಲಿ ಅಪರಿಚಿತ ವ್ಯಕ್ತಿಗಳು ಚಿನ್ನಕ್ಕಾಗಿ ಮಹಿಳೆಯನ್ನೇ ಅಪಹರಿಸಿರುವ ಘಟನೆ ಬೆಳಕಿಗೆ ಬಂದಿದೆ.

Young woman abducted in Mannar
Young woman abducted in Mannar
author img

By

Published : Feb 22, 2021, 11:29 AM IST

ಆಲಪ್ಪುಳ: ಅಪರಿಚಿತ ಪುರುಷರ ಗುಂಪೊಂದು ಮನೆಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ ನಡೆಸಿ ಆಕೆಯನ್ನು ಅಪಹರಿಸಿರುವ ಘಟನೆ ಕೇರಳದ ಮನ್ನಾರ್‌ನಲ್ಲಿ ನಡೆದಿದೆ.

ಮನೆಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ ನಡೆಸಿದ ಅಪರಿಚಿತರು

ಮನ್ನಾರ್​ನ ಕುರುಟ್ಟಿಕಾಡ್ ಎಂಬಲ್ಲಿ ಬಿಂದು ಎನ್ನುವರನ್ನು ಅಪಹರಿಸಲಾಗಿದೆ. ಬಿಂದು ಫೆ.19 ರಂದು ದುಬೈನಿಂದ ಮನೆಗೆ ಬಂದಿದ್ದರು. ನಿನ್ನೆ ಬಿಂದು ಮನೆಯಲ್ಲಿದ್ದ ವೇಳೆ ಕೆಲ ಪುರುಷರು ನಿಮ್ಮ ಬಳಿ ಚಿನ್ನ ಇದೆಯಾ ಎಂದು ಕೇಳಿಕೊಂಡು ಬಂದಿದ್ದು, ನಮ್ಮ ಹತ್ತಿರ ಇಲ್ಲ ಎಂದು ತಿಳಿಸಿದ ನಂತರ ಅವರು ಹಿಂದಿರುಗಿದ್ದರು. ಆದರೆ ಇಂದು ಮುಂಜಾನೆ ಸುಮಾರು 2 ಗಂಟೆ ಮತ್ತೆ ಮನೆಯೊಳಗೆ ನುಗ್ಗಿದ ಖದೀಮರು ಬಿಂದು ಮೇಲೆ ಹಲ್ಲೆ ನಡೆಸಿ, ಆಕೆಯನ್ನು ಕಿಡ್ನಾಪ್​ ಮಾಡಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಬಿಂದು ಪತಿ ಬಿನೊಯ್, ಚಿನ್ನದ ಆಸೆಗಾಗಿ ಕೊಡುವಾಲ್ಲಿ ನಿವಾಸಿಗಳು ಕಿಡ್ನಾಪ್​ ಮಾಡಿರಬಹುದು ಎಂದು ತಿಳಿಸಿದ್ದಾರೆ. ಘಟನೆ ಕುರಿತು ಮನ್ನಾರ್ ಪೊಲೀಸ್​ ಠಾಣೆಯಲ್ಲಿ ದೂರು ನೀಡಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.