ಕರೀಂನಗರ(ತೆಲಂಗಾಣ): ತೆಲಂಗಾಣದ ಕರೀಂನಗರ ಜಿಲ್ಲೆಯಲ್ಲಿ ವಿಶಿಷ್ಟ ವಿವಾಹ ನಡೆಯಿತು. ಯುವಕನೋರ್ವ ತೃತೀಯಲಿಂಗಿಯನ್ನು ಪ್ರೀತಿಸಿ ಆಕೆಯನ್ನೇ ವರಿಸಿದ್ದು, ನವಜೀವನ ಆರಂಭಿಸಿದ್ದಾನೆ. ಜಮ್ಮಿಕುಂಟಾ ಪೇಟೆ ಸಮೀಪದ ರಾಮಮಂದಿರದಲ್ಲಿ ತೃತೀಯಲಿಂಗಿ ವಿದ್ಯಾ ಮತ್ತು ಪ್ರಿಯಕರ ಅರ್ಷದ್ ಹಿಂದೂ ಸಂಪ್ರದಾಯದಂತೆ ಮದುವೆಯಾದರು.
ತೃತೀಯಲಿಂಗಿ ವ್ಯಕ್ತಿಯು ಮೂಲತಃ ಸಂಪತ್ ಆಗಿದ್ದು ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾಗಿ ದಿವ್ಯಾ ಆಗಿ ಪರಿರ್ವತನೆಗೊಂಡಿದ್ದರು. ಜಮ್ಮುಕುಂಟಾ ಪೇಟೆಯಲ್ಲೇ ವಾಸವಾಗಿದ್ದರು. ಕಾರು ಚಾಲಕ ಅರ್ಷದ್ ಜೊತೆ ಸ್ನೇಹ ಬೆಳೆದಿದೆ. ಎರಡ್ಮೂರು ಸಲ ಭೇಟಿಯ ಬಳಿಕ ವಿದ್ಯಾ ಬಳಿ ತನ್ನ ಪ್ರೇಮದ ಪ್ರಸ್ತಾಪವನ್ನು ಅರ್ಷದ್ ಮಾಡಿದ್ದಾನೆ. ಆರಂಭದಲ್ಲಿ ವಿದ್ಯಾ ಒಪ್ಪಿರಲಿಲ್ಲ. ಕೊನೆಗೆ ಅರ್ಷದ್ ಪ್ರೀತಿಗೆ ಮನ ಸೋತು ಮದುವೆ ಮುದ್ರೆಗೆ ವಿದ್ಯಾ ಸಮ್ಮತಿಸಿದ್ದಾರೆ.
ಇದನ್ನೂ ಓದಿ: ವರನಿಂದ ಯುವತಿ ಮತ್ತು ಆಕೆಯ ತಾಯಿ ಮೇಲೆ ಚಾಕುವಿನಿಂದ ದಾಳಿ.. ಅಮ್ಮ ಸಾವು, ಯುವಕನ ಸ್ಥಿತಿ ಚಿಂತಾಜನಕ