ನವದೆಹಲಿ: ಯುವಕನೊಬ್ಬ ಯುವತಿಯನ್ನು ಹಿಡಿದೆಳೆದು, ಹಲ್ಲೆ ಮಾಡಿ ಬಲವಂತವಾಗಿ ಕಾರಿನಲ್ಲಿ ಕೂರುವಂತೆ ತಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಪೊಲೀಸರಿಗೆ ಮನವಿ ಮಾಡುತ್ತಿದ್ದಾರೆ. ದೆಹಲಿಯ ಮಂಗೋಲ್‌ಪುರಿ ಮೇಲ್ಸೇತುವೆಯ ಬಳಿ ಈ ಘಟನೆ ನಡೆದಿದ್ದು, ವ್ಯಕ್ತಿಯೊಬ್ಬರು ಇದನ್ನು ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ.
"ವಿಡಿಯೋ ವೀಕ್ಷಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದು, ಕಾರನ್ನು ಗುರುಗ್ರಾಮದ ರತನ್ ವಿಹಾರ್‌ನ ನೋಂದಣಿ ಹೊಂದಿದ್ದು, ಅಲ್ಲಿಗೆ ಪೊಲೀಸ್ ತಂಡವನ್ನು ಕಳುಹಿಸಲಾಗಿದೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಸಂಗ್ರಹಿಸಲು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
-
#SOS | Just Now at Mangolpuri Flyover towards Peeragarhi Chowk.@DelhiPolice @LtGovDelhi @dcpouter @DCWDelhi @dtptraffic pic.twitter.com/ukmVc7Tu1v
— Office of Vishnu Joshi (@thevishnujoshi) March 18, 2023 " class="align-text-top noRightClick twitterSection" data="
">#SOS | Just Now at Mangolpuri Flyover towards Peeragarhi Chowk.@DelhiPolice @LtGovDelhi @dcpouter @DCWDelhi @dtptraffic pic.twitter.com/ukmVc7Tu1v
— Office of Vishnu Joshi (@thevishnujoshi) March 18, 2023#SOS | Just Now at Mangolpuri Flyover towards Peeragarhi Chowk.@DelhiPolice @LtGovDelhi @dcpouter @DCWDelhi @dtptraffic pic.twitter.com/ukmVc7Tu1v
— Office of Vishnu Joshi (@thevishnujoshi) March 18, 2023
ಕಾರಿನ ಬಾನೆಟ್ ಮೇಲೆ ನಿಂತು ಪುಂಡಾಟ: ಇದಕ್ಕೂ ಮುನ್ನ, ಮಾರ್ಚ್ 17 ರಂದು ಕೆಲವು ಜನರು ಕಾರುಗಳ ಮೇಲೆ ನಿಂತು ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿರುವ ವಿಡಿಯೋ ವೈರಲ್ ಆಗಿತ್ತು. ಸಾರ್ವಜನಿಕವಾಗಿ ಪುಂಡಾಟಿಕೆ ನಡೆಸುತ್ತಿರುವ ವಿಡಿಯೋದ ಅಸಲಿಯತ್ತು ಜಾಲಾಡಿದಾಗ ಯೂಟ್ಯೂಬರ್ ಒಬ್ಬನ ಜನ್ಮದಿನದ ಸಂಭ್ರಮಾಚರಣೆಯ ವೇಳೆ ಈ ರೀತಿ ಮಾಡಿರುವುದು ತಿಳಿದು ಬಂದಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಯೂಟ್ಯೂಬರ್ನನ್ನು ಬಂಧಿಸಿದ್ದಾರೆ. ಬಂಧಿತನ್ನು ಪ್ರಿನ್ಸ್ ದೀಕ್ಷಿತ್ ಎಂದು ಗುರುತಿಸಲಾಗಿದೆ.
ವೈರಲ್ ವಿಡಿಯೋದಲ್ಲಿ ಕೆಲ ಯುವಕರು ಪಾಂಡವ್ ನಗರದ ಬಳಿಯ ಎನ್‌ಹೆಚ್ -24 ರಲ್ಲಿ ರಸ್ತೆ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿ ಕಾರುಗಳ ಮೇಲೆ ನಿಂತು ಪುಂಡಾಟಿಕೆ ನಡೆಸುತ್ತಿದ್ದಾರೆ. ಇದು ಸ್ಪಷ್ಟವಾದ ರಸ್ತೆ ನಿಯಮ ಉಲ್ಲಂಘನೆ ಎಂದು ಪರಿಗಣಿಸಿದ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದರು.
ಯೂಟ್ಯೂಬರ್ ಬಂಧಿಸಿ ವಿಚಾರಣೆ ನಡೆಸಿದ ವೇಳೆ, ವಿಡಿಯೋ ನವೆಂಬರ್ 16, 2022 ರಂದು ತನ್ನ ಜನ್ಮದಿನದಂದು ಕೆಲವು ಸ್ನೇಹಿತರೊಂದಿಗೆ ಶಕರ್‌ಪುರಕ್ಕೆ ಹೋಗುತ್ತಿದ್ದಾಗ ಚಿತ್ರೀಕರಿಸಲಾಗಿದೆ ಎಂದು ಹೇಳಿದ್ದಾನೆ. ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿ ಕಾರಿನ ಬಾನೆಟ್ ಮೇಲೆ ನಿಂತಿರುವುದನ್ನು ಒಪ್ಪಿಕೊಂಡಿದ್ದಾನೆ. ಈ ರೀತಿಯ ಸಾಹಸಗಳನ್ನು ಪ್ರಯತ್ನಿಸದಂತೆ ಅವರು YouTube ನಲ್ಲಿ ತಮ್ಮ ಅನುಯಾಯಿಗಳಿಗೆ ತಿಳಿಸಲು ಈ ವಿಡಿಯೋ ಮಾಡಿದ್ದಾರೆ ಎಂದು ಹೇಳಿದ್ದಾನೆ. ಯೂಟ್ಯೂಬರ್ ಅಲ್ಲದೇ, ಆತನ ಸ್ನೇಹಿತರ ಬಂಧನಕ್ಕೂ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ಮಿಕರ ಮೇಲೆ ದಾಳಿ ಸುಳ್ಳು ಸುದ್ದಿ: ಇನ್ನೊಬ್ಬ ಯೂಟ್ಯೂಬರ್, ಬಿಹಾರ ಕಾರ್ಮಿಕರ ಮೇಲೆ ತಮಿಳುನಾಡಿನಲ್ಲಿ ದಾಳಿ ಮಾಡಲಾಗುತ್ತಿದೆ ಎಂಬ ಸುಳ್ಳು ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಆತಂಕ ಸೃಷ್ಟಿಸಿದ್ದ. ಈ ವೈರಲ್ ವಿಡಿಯೋವನ್ನು ಗಮನಿಸಿ ಹೆದರಿದ್ದ ಸಾವಿರಾರು ಕಾರ್ಮಿಕರು ಏಕಾಏಕಿ ಬಿಹಾರದತ್ತ ಮುಖ ಮಾಡಿದ್ದರು.
ಸುಳ್ಳು ವಿಡಿಯೋವನ್ನು ಹರಿಬಿಟ್ಟು ಕಣ್ತಪ್ಪಿಸಿಕೊಂಡಿದ್ದ ಯೂಟ್ಯೂಬರ್ನನ್ನು ಬಿಹಾರ ಪೊಲೀಸರು ಇದೀಗ ಬಂಧಿಸಿದ್ದಾರೆ. ಈತನ ಮನೆ ಜಪ್ತಿ ಮಾಡಲು ಪೊಲೀಸರು ಮುಂದಾದ ವೇಳೆ ಆತನೇ ಪೊಲೀಸರ ಮುಂದೆ ಶರಣಾಗಿದ್ದಾನೆ. ಕಾರ್ಮಿಕರ ಬಗ್ಗೆ ಆತಂಕ ಸೃಷ್ಟಿಸಿದ್ದ ಯೂಟ್ಯೂಬರ್ನನ್ನು ಮನೀಶ್ ಕಶ್ಯಪ್ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ಖಲಿಸ್ತಾನ್ ಪ್ರತ್ಯೇಕತಾವಾದಿ ಅಮೃತ್‌ಪಾಲ್‌ಗೆ ತೀವ್ರ ಶೋಧ: ಸಲಹೆಗಾರನ ಬಂಧನ, ಬಸ್, ಇಂಟರ್ನೆಟ್ ಬಂದ್