ETV Bharat / bharat

ಮರದ ಕೊಂಬೆ ಬಿದ್ದು ವ್ಯಕ್ತಿ​ ಸಾವು... ಸಿಸಿಟಿವಿಯಲ್ಲಿ ಭೀಕರ ದೃಶ್ಯ!

ನಿರಂತರ ಮಳೆಗೆ ಮರದ ಕೊಂಬೆ ಮುರಿದು ಬಿದ್ದು ಬೈಕ್​ ಸವಾರನೋರ್ವ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

author img

By

Published : May 21, 2021, 8:42 PM IST

Updated : May 22, 2021, 7:15 AM IST

tree falls on bike rider
tree falls on bike rider

ಮುಂಬೈ: ತೌಕ್ತೆ ಚಂಡಮಾರುತದ ಅಬ್ಬರದಿಂದಾಗಿ ಮಹಾರಾಷ್ಟ್ರದಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಗಾಳಿ ಮಿಶ್ರಿತ ಮಳೆ ಸುರಿಯುತ್ತಿದ್ದು, ಇದರಿಂದ ಅನೇಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇದರ ಮಧ್ಯೆ ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯವೊಂದು ಭೀಕರವಾಗಿದೆ.

ಬೈಕ್​ ಸವಾರನ ಮೇಲೆ ಬಿದ್ದ ಮರದ ಕೊಂಬೆ

ಮುಂಬೈನ ಮಲಾಡ್​ ಪ್ರದೇಶದಲ್ಲಿ ಮರದ ಕೊಂಬೆ ಬಿದ್ದು ಯುವಕನೋರ್ವ ಸಾವನ್ನಪ್ಪಿದ್ದಾನೆ. ಜನರಲ್​ ಸ್ಟೋರ್​ ಮುಂದೆ ನಿಂತಿದ್ದ ಯುವಕನೋರ್ವ ತಾನು ನಿಲ್ಲಿಸಿದ್ದ ಬೈಕ್ ಮೇಲೆ ಹತ್ತಲು ಹೋಗುತ್ತಿದ್ದ ವೇಳೆ ದಿಢೀರ್​ ಆಗಿ ಕೊಂಬೆ ಮುರಿದು ಅತನ ಮೇಲೆ ಬಿದ್ದಿದೆ. ಇದರಿಂದ ಆತನ ತಲೆಗೆ ಗಂಭೀರವಾದ ಗಾಯಗಳಾಗಿವೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿವೆ.

tree falls on bike rider
ಸಾವನ್ನಪ್ಪಿದ ವ್ಯಕ್ತಿ ಜೈಸ್ವಾಲ್​

ಗಂಭೀರವಾಗಿ ಗಾಯಗೊಂಡ ಜೈಸ್ವಾಲ್​ನನ್ನ ಸಿಯಾನ್​ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಬರೋಬ್ಬರಿ 13 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಆದರೆ ನಿನ್ನೆ ಆತ ಸಾವನ್ನಪ್ಪಿದ್ದಾನೆ. ಮೂಲತಃ ಉತ್ತರ ಪ್ರದೇಶದವರಾದ ಜೈಸ್ವಾಲ್​​ ಮಹಾರಾಷ್ಟ್ರದ ಕಿರಾಣಿ ಶಾಪ್​​ವೊಂದರಲ್ಲಿ ಕೆಲಸ ಮಾಡ್ತಿದ್ದು, ಅವರ ಪತ್ನಿ ಮತ್ತು ಮಕ್ಕಳು ಅಲ್ಲೇ ವಾಸವಾಗಿದ್ದಾರೆ. ಕುಟುಂಬದ ಸಂಪೂರ್ಣ ಜವಾಬ್ದಾರಿ ಈತನ ಮೇಲಿದೆ. ಇದೀಗ ದಿಢೀರ್​ ಆಗಿ ಸಾವನ್ನಪ್ಪಿದ್ದರಿಂದ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ. ಜೈಸ್ವಾಲ್​ಗೆ ಇದೀಗ ಸರ್ಕಾರ ಮತ್ತು ಪುರಸಭೆ ಆರ್ಥಿಕ ನೆರವು ನೀಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

Last Updated : May 22, 2021, 7:15 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.