ಹೈದರಾಬಾದ್: ಸರಿ ಸುಮಾರು ರಾತ್ರಿ 11 ಗಂಟೆಗೆ ಕೆಲ ದುಷ್ಕರ್ಮಿಗಳು ಯುವಕನೊಬ್ಬನನ್ನು ಬೇಟೆಗಾರರಂತೆ ಬೆನ್ನತ್ತಿ ಬೇಟೆಗೆ ಬಳಸುತ್ತಿದ್ದ ಕೊಯ್ತಾದಿಂದ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ರಾಜೇಂದ್ರನಗರದಲ್ಲಿ ನಡೆದಿದೆ.
ಇಲ್ಲಿನ ಪಿಲ್ಲರ್ ನಂ.248 ಬಳಿಯ ಹೆಚ್ಎಫ್ ಫಂಕ್ಷನ್ ಹಾಲ್ ಹತ್ತಿರ ಈ ಘಟನೆ ಜರುಗಿದೆ. ಎಲ್ಲರೂ ನೋಡುತ್ತಿದ್ದಂತೆ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿದ ದುಷ್ಕರ್ಮಿಗಳು ಘಟನೆ ಬಳಿಕ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಮೃತ ಯುವಕ ಎಂಐಎಂ ಪಕ್ಷದ ಕಾರ್ಯಕರ್ತ ಮೊಹಮ್ಮದ್ ಖಲೀಲ್ ಎಂದು ಗುರುತಿಸಲಾಗಿದೆ.
ಸುದ್ದಿ ತಿಳಿದ ಕೂಡಲೇ ಪೊಲೀಸರು ಘಟನಾಸ್ಥಳಕ್ಕೆ ದೌಡಾಯಿಸಿ ಸ್ಥಳವನ್ನು ಪರಿಶಿಲೀಸಿದರು. ಬಳಿಕ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಉಸ್ಮಾನಿಯ ಆಸ್ಪತ್ರೆಗೆ ಸಾಗಿಸಿದರು.
ಈ ಘಟನೆ ಕುರಿತು ರಾಜೇಂದ್ರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.