ETV Bharat / bharat

ಕಾಡಿನಲ್ಲಿ ನಗ್ನ ಸ್ಥಿತಿಯಲ್ಲಿ ಯುವಕ - ಯುವತಿಯ ಶವ ಪತ್ತೆ - ಕಾಡಿನಲ್ಲಿ ಜೋಡಿ ಶವ ಪತ್ತೆ

ರಾಜಸ್ಥಾನದ ಉದಯ್​ಪುರ ಜಿಲ್ಲೆಯ ಉಬೇಶ್ವರ್​ಜಿ ಕಾಡಿನಲ್ಲಿ ಶುಕ್ರವಾರ ಯುವಕ ಮತ್ತು ಯುವತಿ ಶವಗಳು ಪತ್ತೆಯಾಗಿವೆ.

young-man-and-woman-dead-body-found-naked-in-udaipur-forest
ಕಾಡಿನಲ್ಲಿ ನಗ್ನ ಸ್ಥಿತಿಯಲ್ಲಿ ಯುವಕ - ಯುವತಿಯ ಶವ ಪತ್ತೆ
author img

By

Published : Nov 18, 2022, 6:38 PM IST

ಉದಯ್​ಪುರ (ರಾಜಸ್ಥಾನ): ಅರಣ್ಯದಲ್ಲಿ ನಗ್ನ ಸ್ಥಿತಿಯಲ್ಲಿ ಯುವಕ ಮತ್ತು ಯುವತಿಯ ಮೃತದೇಹ ಪತ್ತೆಯಾದ ಘಟನೆ ರಾಜಸ್ಥಾನದ ಉದಯ್​ಪುರ ಜಿಲ್ಲೆಯಲ್ಲಿ ನಡೆದಿದೆ. ಯುವಕನ ಗುಪ್ತಾಂಗವನ್ನೂ ಕತ್ತರಿಸಿದ ಸ್ಥಿತಿಯಲ್ಲಿ ವಶ ಪತ್ತೆಯಾಗಿದ್ದು, ಈ ಜೋಡಿಯನ್ನು ಕೊಲೆ ಮಾಡಿ ಎಸೆದಿರುವ ಶಂಕೆ ವ್ಯಕ್ತವಾಗಿದೆ.

ಇಲ್ಲಿನ ಗೋಗುಂಡಾ ಪೊಲೀಸ್ ಠಾಣೆ ವ್ಯಾಪ್ತಿಯ ಉಬೇಶ್ವರ್​ಜಿ ಕಾಡಿನಲ್ಲಿ ಶುಕ್ರವಾರ ಯುವಕ ಮತ್ತು ಯುವತಿ ಶವಗಳು ಪತ್ತೆಯಾಗಿವೆ. ಈ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ಸ್ಥಳೀಯ ಪೊಲೀಸರು ಮತ್ತು ಉನ್ನತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೇ, ಎಫ್‌ಎಸ್‌ಎಲ್ ತಂಡ, ಶ್ವಾನ ದಳ ಕೂಡ ಸ್ಥಳ ಪರಿಶೀಲನೆ ನಡೆಸಿದೆ.

ಸದ್ಯ ಈ ಮೃತದೇಹಗಳು ಗುರುತು ಪತ್ತೆಯಾಗಿಲ್ಲ. ಎರಡು ದಿನಗಳ ಹಿಂದೆಯೇ ಕೊಲೆ ಮಾಡಿ ಮೃತದೇಹಗಳನ್ನು ಎಸೆದಿರುವ ಸಾಧ್ಯತೆ ಇದೆ. ಈ ಬಗ್ಗೆ ಪೊಲೀಸರು ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ ಎಂದು ಉದಯಪುರ ಎಸ್ಪಿ ವಿಕಾಸ್ ಶರ್ಮಾ ಹೇಳಿದ್ದಾರೆ.

ಇದನ್ನೂ ಓದಿ: ಎನ್‌ಕೌಂಟರ್ ಮೂಲಕ ಲವ್ ಜಿಹಾದ್ ಆರೋಪಿಯ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.