ಪಾಟ್ನಾ(ಬಿಹಾರ): ಯುವಕನೊಬ್ಬ ಮಧ್ಯರಾತ್ರಿ ತನ್ನ ಪ್ರಿಯತಮೆ ಭೇಟಿಯಾಗಲು ತೆರಳಿದ್ದ ವೇಳೆ ಸ್ಥಳೀಯರು ಹಿಗ್ಗಾಮುಗ್ಗ ಥಳಿಸಿ, ತಲೆ ಬೋಳಿಸಿರುವ ಘಟನೆ ರೋಹ್ಟಾಸ್ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ತಿಲೋತು ಪ್ರದೇಶದ ಭಡೋಖರಾದಲ್ಲಿ ಯುವಕ ಗೋರಖ್ ಕುಮಾರ್, ಮಧ್ಯರಾತ್ರಿ ತನ್ನ ಪ್ರಿಯತಮೆ ಭೇಟಿ ಮಾಡಲು ತೆರಳಿದ್ದ. ಈ ವೇಳೆ ಗ್ರಾಮಸ್ಥರು ಆತನಿಗೆ ಥಳಿಸಿ, ತಲೆ ಬೋಳಿಸಿ ಮೆರವಣಿಗೆ ಮಾಡಿದ್ದಾರೆ. ಸದ್ಯ ಈ ವಿಡಿಯೋ ಜಾತಲಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಇದನ್ನೂ ಓದಿ: ಒಬ್ಬರನ್ನೊಬ್ಬರು ರಕ್ಷಣೆ ಮಾಡಲು ಹೋಗಿ ಪ್ರಾಣ ಬಿಟ್ಟ ಐವರು ಬಾಲಕಿಯರು!
ವೈರಲ್ ವಿಡಿಯೋ ಆಧರಿಸಿರುವ ಪೊಲೀಸರು, ಯುವಕನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಈವರೆಗೆ ಯಾವುದೇ ಎಫ್ಐಆರ್ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.