ಹೈದರಾಬಾದ್:ಜಗತ್ತಿನ ಎಲ್ಲ ದೇಶಗಳನ್ನು ಏಕಾಂಗಿಯಾಗಿ ಸುತ್ತಿ ಸಂಸ್ಕೃತಿ, ಸಂಪ್ರದಾಯಗಳನ್ನು ಅಭ್ಯಸಿಸುವುದು ಸರಳವಲ್ಲ. ಒಂದು ದೇಶದಿಂದ ಒಂದು ದೇಶಕ್ಕೆ ಹೋಗಬೇಕಾದರೆ ಹಲವಾರು ವಿಚಾರಗಳು ನಮ್ಮ ತಲೆಯಲ್ಲಿ ಗಿರಿಕಿ ಹೊಡೆಯುತ್ತವೆ. ಆ ದೇಶದ ಜನ ಹೇಗೆ,ಅಲ್ಲಿನ ಕಾನೂನು, ಸಂಪ್ರದಾಯ ಕುರಿತಾಗಿ ಹಲವಾರು ವಿಚಾರಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತೇವೆ. ಆದರೆ, ಇಲ್ಲೊಬ್ಬರು ಬೈಕ್ ಮೇಲೆ ಜಗತ್ತನ್ನೂ ಸುತ್ತುವ ಸಾಹಸಕ್ಕೆ ಕೈ ಹಾಕಿ, ಯಶಸ್ವಿಯಾಗಿರುವ ಸ್ಪೂರ್ತಿದಾಯಕ ಕಥೆಯನ್ನು ಈಟಿವಿ ಭಾರತ ತೆರೆದಿಟ್ಟಿದೆ.
ಬೈಕ್ ಮೇಲೆ ಇಡೀ ಜಗತ್ತನ್ನು ಸುತ್ತುವುದು.... ಅಲ್ಲಿನ ಜನ ಜೀವನ, ಐತಿಹಾಸಿಕ ಕುರುಹುಗಳು, ಪುರಾಣ ಮತ್ತು ಸಂಪ್ರದಾಯಗಳನ್ನು ಅಧ್ಯಯನ ಮಾಡುವುದು ಇಟಾಲಿಯನ್ ಎಲೆನಾ ಆಕ್ಸಿಂಟೆ ಯುವತಿಯ ವಿಶ್ವ ಪರ್ಯಟನೆಯ ಪ್ರಮುಖ ತಿರುಳು. ಇಡೀ ಜಗತ್ತು ಒಂದು ಕುಟುಂಬ ಇದ್ದಂತೆ ಎಂದು ಭಾವಿಸುವ ಎಲೆನಾ ಆಕ್ಸಿಂಟೆ ಅವರು, ಎಲ್ಲ ದೇಶದ ಜನರು ಒಳ್ಳೆಯವರು. ಮೇಲಾಗಿ ಬೈಕ್‌ನಲ್ಲಿ ಏಕಾಂಗಿಯಾಗಿ ಭೂಗೋಳವನ್ನು ಸುತ್ತುತ್ತಿದ್ದಾರೆ. ಲಕ್ಷ ಕಿಲೋಮೀಟರ್ ಸಂಚರಿಸಿ ಭಾರತ ತಲುಪಿದ ಆಕೆಯ ಪ್ರಯಾಣದ ಅನುಭವಗಳ ಕಥೆಗಳನ್ನು ಸಹ ಹಂಚಿಕೊಂಡಿದ್ದಾರೆ.
ಇಟಲಿಯ ಎಲೆನಾ ಆಕ್ಸಿಂಟೆ ನಟಿ ಮತ್ತು ನಾಟಕ ಕೌಶಲ್ಯ ತರಬೇತಿದಾರಳು. ಪ್ರಪಂಚದ ದೇಶಗಳ ಪುರಾಣಗಳು ಮತ್ತು ಸಂಪ್ರದಾಯಗಳು ಒಂದಕ್ಕೊಂದು ಸಂಬಂಧ ಹೊಂದಿವೆ ಎಂದು ಅವಳು ನಂಬಿದ್ದು, ಹೀಗಾಗಿ ವಿವಿಧ ದೇಶದ ಸಂಪ್ರದಾಯಗಳನ್ನು ತಿಳಿದುಕೊಳ್ಳುವುದು ಅವರಿಗೆ ಹೆಚ್ಚು ಆಸಕ್ತಿ.
2019ರಲ್ಲಿ ಪ್ರಯಾಣ ಶುರು ಮಾಡಿದ್ದ ಎಲೆನಾ ಆಕ್ಸಿಂಟೆ: ಆಗಸ್ಟ್ 2019 ರಲ್ಲಿ ಜಗತ್ತಿನಾದ್ಯಂತ ಪ್ರಯಾಣಿಸುವ ಆಲೋಚನೆಯಿಂದ ಬೈಕ್‌ನಲ್ಲಿ ಏಕಾಂಗಿಯಾಗಿ ಪ್ರಯಾಣಿಸಲು ಪ್ರಾರಂಭಿಸಿದರು. ಎಲೆನಾ ಈ ಮೂರೂವರೆ ವರ್ಷಗಳಲ್ಲಿ 1.2 ಲಕ್ಷ ಕಿಲೋಮೀಟರ್ ಕ್ರಮಿಸಿ ಕೆಲವು ದಿನಗಳ ಹಿಂದೆ ಭಾರತದ ಕೇರಳ ತಲುಪಿದ್ದಾರೆ. ಅವರು ಇಲ್ಲಿಯವರೆಗೆ 28 ದೇಶಗಳಿಗೆ ಪ್ರಯಾಣಿಸಿದ್ದಾರೆ, ಅಲ್ಲಿನ ಸಂಪ್ರದಾಯಗಳನ್ನು ಅಭ್ಯಸಿಸಿದ್ದಾರೆ.
''ಈ ಹಿಂದೆ ಒಬ್ಬರೇ ಬೈಕ್ ನಲ್ಲಿ ಆಫ್ರಿಕಾ ಸುತ್ತಿದ್ದೆ. ನನ್ನ ನೆಟ್‌ವರ್ಕ್ ಮತ್ತು ಬೈಕ್ ಸವಾರರ ತಂಡ ಸಾಮಾಜಿಕ ಜಾಲತಾಣಗಳ ಮೂಲಕ ನೀಡಿದ ಮಾಹಿತಿ ನನಗೆ ಸ್ಥಳೀಯರ ಆತಿಥ್ಯ ಸಿಗುತ್ತಿದೆ. ಹೋಟೆಲ್ ರೂಮ್ ಬುಕ್ ಮಾಡುವ ಅಗತ್ಯವಿರಲಿಲ್ಲ. ಅಲ್ಲಿನ ಜನರ ಆತಿಥ್ಯವನ್ನು ಮರೆಯಲು ಸಾಧ್ಯವಿಲ್ಲ. ಆ ಅನುಭವಗಳನ್ನು ಹಂಚಿಕೊಳ್ಳುವಾಗ, ಬೇರೆ ದೇಶಗಳಲ್ಲೂ ಅಂಥ ಸೌಜನ್ಯ ಸಿಗುವುದು ಅಸಾಧ್ಯ ಎಂದು ಹಿಂದೆ ಹಲವರು ಹೇಳುತ್ತಿದ್ದರು. ಇದು ನನ್ನನ್ನು ದೀರ್ಘ ಯೋಚಿಸುವಂತೆ ಮಾಡಿತು. ಈ ಸಮಸ್ಯೆ ಸವಾಲಾಗಿ ಸ್ವೀಕರಿಸುವುದರೊಂದಿಗೆ ಒಬ್ಬಂಟಿಯಾಗಿ ಜಗತ್ತನ್ನು ಸುತ್ತಲೂ ಪ್ರಾರಂಭಿಸಿದೆ ಎನ್ನುವ ಎಲೆನಾ ಆಕ್ಸಿಂಟೆ, ಎಲ್ಲಿಗೆ ಹೋದರೂ, ಸ್ಥಳೀಯರ ಆತಿಥ್ಯವನ್ನು ಮಾತ್ರ ಸ್ವೀಕರಿಸಲು ಕೆಲ ಕಟ್ಟುಪಾಡು ಹಾಕಿಕೊಂಡಿದ್ದೇನೆ ಎಂದಿದ್ದಾರೆ.
ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಹೇಗಿತ್ತು ಪಯಣ: ಎಲೆನಾ ಯುರೋಪ್‌ನಿಂದ ತನ್ನ ಪ್ರಯಾಣವನ್ನು ಪ್ರಾರಂಭಿಸಿದರು. ಟರ್ಕಿ, ಲೆಬನಾನ್ ಮತ್ತು ಇತರ ದೇಶಗಳ ಮೂಲಕ ಪಶ್ಚಿಮ ಏಷ್ಯಾವನ್ನು ತಲುಪಿದ್ದರು. ಅವರು ಕೋವಿಡ್ ಸಮಯದಲ್ಲಿ ಸೌದಿ ಅರೇಬಿಯಾದಲ್ಲಿದ್ದರು. ಕೊರೊನಾದ ನಾಲ್ಕು ತಿಂಗಳ ಕಾಲದಲ್ಲಿ ಕುಟುಂಬವೊಂದು ನನಗೆ ಆಶ್ರಯ ನೀಡಿತು. ಕೊರೊನಾ ವೇಳೆ ಅವರು ನನ್ನನ್ನು ಹೋಟೆಲ್‌ಗೆ ಹೋಗಲು ಎಂದಿಗೂ ಕೇಳಲಿಲ್ಲ. ಅವರು ನನ್ನನ್ನು ಕುಟುಂಬದ ಸದಸ್ಯರಂತೆ ನೋಡಿಕೊಂಡರು.
ಕೋವಿಡ್ ಹಿನ್ನೆಲೆ ದೇಶಗಳ ಗಡಿಯಲ್ಲಿ ಹಲವು ನಿರ್ಬಂಧಗಳನ್ನು ಹೇರಲಾಗಿದೆ. ಅವೆಲ್ಲವನ್ನೂ ದಾಟಿ... ಅರಬ್ ದೇಶಗಳಿಗೆ ಪ್ರವಾಸ ಬೆಳೆಸಿದೆ, ಅಲ್ಲಿನ ಸಂಪ್ರದಾಯಗಳನ್ನೆಲ್ಲ ಕಲಿತೆ. ಅಲ್ಲಿ ಮಹಿಳೆಯರಿಗೆ ಕೆಲವು ನಿರ್ಬಂಧಗಳಿವೆ ಎಂದು ಎಲ್ಲರೂ ಹೇಳುತ್ತಾರೆ. ಆದರೆ ನಾನು ಯಾವುದೇ ಸಮಸ್ಯೆಗಳನ್ನು ಎದುರಿಸಲಿಲ್ಲ.
ಇರಾಕ್, ಇರಾನ್ ಮತ್ತು ಪಾಕಿಸ್ತಾನ ದೇಶಗಳಲ್ಲಿ ಪ್ರವಾಸ ಮಾಡಿ, ನಂತರ ನಾನು ವಾಘಾ ಗಡಿಯ ಮೂಲಕ ಭಾರತವನ್ನು ಪ್ರವೇಶಿಸಿದೆ. ವಿವಿಧ ರಾಜ್ಯಗಳಲ್ಲಿ 6 ಸಾವಿರ ಕಿಲೋ ಮೀಟರ್ ಪ್ರಯಾಣಿಸಿ ಈಗ ಕೇರಳ ತಲುಪಿದ್ದೇನೆ. ನಾನು ಪ್ರಯಾಣಿಸುವ ಪ್ರತಿಯೊಂದು ಪ್ರದೇಶದಲ್ಲಿ, ಸ್ಥಳೀಯ ಸಂಸ್ಕೃತಿ ಸಂಪ್ರದಾಯಗಳು ಮತ್ತು ದಂತಕಥೆಗಳನ್ನು ತಿಳಿದುಕೊಳ್ಳುತ್ತೇನೆ. ಇವೆಲ್ಲವೂ ಎಲ್ಲಿಂದ ಎಲ್ಲಿಗೋ ಸಂಬಂಧವಿದೆ ಅನಿಸುತ್ತಿದೆ. ಇವುಗಳನ್ನು ಕೇಳುವಾಗ ಎಲ್ಲೋ ಇಡೀ ಜಗತ್ತು ಒಂದೇ ಕುಟುಂಬದಂತೆ ಭಾಸವಾಗುತ್ತಿದೆ'' ಎಂದು ಅನುಭವದ ಮಾತನ್ನು ಅವರು ಇದೇ ವೇಳೆ ಹಂಚಿಕೊಂಡರು.
ಭಾರತದ ಪ್ರವಾಸದ ನಂತರ, ಆಂಟೊನ್ನಾ ಎಲೆನಾ ಹಿಮಾಲಯ, ನೇಪಾಳ ಮತ್ತು ಬಾಂಗ್ಲಾದೇಶ ಸುತ್ತುವದಾಗಿ ಹೇಳುತ್ತಾರೆ. 37 ವರ್ಷದ ಎಲಿನಾ ಅವರ ಮಹತ್ವಾಕಾಂಕ್ಷೆ ಆಗಿರುವ ಆಗ್ನೇಯ ಏಷ್ಯಾ, ಆಸ್ಟ್ರೇಲಿಯಾ ಮತ್ತು ಅಮೆರಿಕ ದೇಶವನ್ನು ಸುತ್ತಬೇಕೆನ್ನುವ ಸಂದೇಶವೂ ಸ್ಪೂರ್ತಿದಾಯಕವಾಗಿದೆ.