ನವದೆಹಲಿ : ಸಂಯುಕ್ತ ಕಿಸಾನ್ ಮೋರ್ಚಾ ನಾಯಕ ಯೋಗೇಂದ್ರ ಯಾದವ್ ಭಾರತೀಯ ಜನತಾ ಪಕ್ಷದ ಹದಿನೈದು ದಿನಗಳ ‘ತಿರಂಗ ಯಾತ್ರೆ’ಯನ್ನು ಇದೊಂದು ತಂತ್ರ ಎಂದು ಉಲ್ಲೇಖಿಸಿದ್ದಾರೆ.
ಸ್ವಾತಂತ್ರ್ಯದ ನಂತರದ 30 ವರ್ಷಗಳವರೆಗೂ ಆರ್ಎಸ್ಎಸ್ ತನ್ನ ಕಚೇರಿಯಲ್ಲಿ ತ್ರಿವರ್ಣ ಧ್ವಜ ಹಾರಿಸಲಿಲ್ಲ. ಆದರೆ, ಈಗ ಸ್ವಾತಂತ್ರ್ಯದ 74ನೇ ವಾರ್ಷಿಕೋತ್ಸವದಂದು ಹಮ್ಮಿಕೊಂಡಿರುವ ಈ 'ತಿರಂಗ ಯಾತ್ರೆ' ರೈತರೊಂದಿಗಿನ ಘರ್ಷಣೆಯ ತಂತ್ರವಾಗಿದೆ ಎಂದು ಹರಿಹಾಯ್ದರು.
ನಾನು ರೈತರಿಗೆ ತಿರಂಗ ಯಾತ್ರೆಯನ್ನು ಎಲ್ಲಿಯೂ ವಿರೋಧಿಸಬಾರದು ಎಂದು ಮನವಿ ಮಾಡುತ್ತೇನೆ. ಆದರೆ, ಬಿಜೆಪಿ ಮತ್ತು ಜೆಜೆಪಿ ನಾಯಕರು, ಮಂತ್ರಿಗಳ ಬಹಿಷ್ಕಾರವನ್ನು ಮುಂದುವರಿಸಬೇಕು. ಈ ಯಾತ್ರೆಯು ರೈತರ ಸಾಮಾಜಿಕ ಪ್ರತ್ಯೇಕತೆಯನ್ನು ಅಪಖ್ಯಾತಿಗೊಳಿಸುವ ಹತಾಶ ಪ್ರಯತ್ನವಾಗಿದೆ ಎಂದಿದ್ದಾರೆ.
ಮೂರು ವಿವಾದಾತ್ಮಕ ಭೂ ಕಾನೂನುಗಳು ಆರಂಭವಾದಾಗಿನಿಂದಲೂ ಬಿಜೆಪಿ ನಾಯಕರ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿರುವುದು ಎಲ್ಲರಿಗೂ ತಿಳಿದಿದೆ. ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿ ಈ ಯಾತ್ರೆ ಕೈಗೊಂಡಿದೆ.