ETV Bharat / bharat

Xena 5.0: ವಿಪತ್ತು, ರಕ್ಷಣೆ ಜತೆ ಕೃಷಿ ವಲಯಕ್ಕೆ ವರದಾನ ಈ ರೋಬೋಟ್ - Xena 5.0 ರೋಬೋಟ್ ಸುದ್ದಿ

ರಕ್ಷಣಾ ವಲಯ, ಬೆಂಕಿ ನಂದಿಸುವ ಕಾರ್ಯ, ಕೃಷಿ ಕೆಲಸಗಳಿಗೆ ಈ ರೋಬೋಟ್ ಸಹಾಯಕವಾಗಿದೆ. ಇದು ಯಾವುದೇ ರೀತಿಯ ಮೇಲ್ಮೈಯಲ್ಲಿ ಚಲಿಸಬಲ್ಲದು. ಈ ಬಹುಪಯೋಗಿ ರೋಬೋಟ್‌ನ ಹೆಸರು Xena 5.0 ಮೇಕ್ ಇನ್ ಇಂಡಿಯಾ ಪರಿಕಲ್ಪನೆಯ ಆಧಾರದ ಮೇಲೆ ಮಲ್ಟಿ ಯುಟಿಲಿಟಿ ರೋಬೋಟ್ ಅನ್ನು ಭುವನೇಶ್ ಮಿಶ್ರಾ ಸಿದ್ಧಪಡಿಸಿದ್ದಾರೆ..

Xena 5.0
Xena 5.0
author img

By

Published : Oct 31, 2021, 7:58 PM IST

ಜೈಪುರ (ರಾಜಸ್ಥಾನ): ಆಧುನಿಕ ಯುಗದಲ್ಲಿ ಎಲ್ಲವೂ ಯಾಂತ್ರೀಕೃತವಾಗುತ್ತಿವೆ. ಮನುಷ್ಯನ ಆಯಾಸ ಕಡಿಮೆ ಮಾಡಲು ರೊಬೋಟ್​ಗಳು ಸಹಾಯ ಮಾಡುತ್ತಿವೆ. ರೋಬೋಟಿಕ್ ತಂತ್ರಜ್ಞಾನ ಅನೇಕ ಕ್ಷೇತ್ರಗಳಲ್ಲಿ ತನ್ನ ಕೊಡುಗೆ ನೀಡುತ್ತಿದೆ. ಈ ಮಧ್ಯೆ ಜೈಪುರದ ಯುವಕ ವಿಶೇಷ ರೋಬೋಟ್​ ಒಂದನ್ನು ಸಿದ್ಧಪಡಿಸಿ ಗಮನ ಸೆಳೆದಿದ್ದಾರೆ.

ರಕ್ಷಣಾ ವಲಯ, ಬೆಂಕಿ ನಂದಿಸುವ ಕಾರ್ಯ, ಕೃಷಿ ಕೆಲಸಗಳಿಗೆ ಈ ರೋಬೋಟ್ ಸಹಾಯಕವಾಗಿದೆ. ಇದು ಯಾವುದೇ ರೀತಿಯ ಮೇಲ್ಮೈಯಲ್ಲಿ ಚಲಿಸಬಲ್ಲದು. ಈ ಬಹುಪಯೋಗಿ ರೋಬೋಟ್‌ನ ಹೆಸರು Xena 5.0 ಮೇಕ್ ಇನ್ ಇಂಡಿಯಾ ಪರಿಕಲ್ಪನೆಯ ಆಧಾರದ ಮೇಲೆ ಮಲ್ಟಿ ಯುಟಿಲಿಟಿ ರೋಬೋಟ್ ಅನ್ನು ಭುವನೇಶ್ ಮಿಶ್ರಾ ಸಿದ್ಧಪಡಿಸಿದ್ದಾರೆ.

ವಿಶೇಷ ರೋಬೋಟ್ ಸಿದ್ಧಪಡಿಸಿದ ಜೈಪುರದ ಯುವಕ

ಯಾವುದೇ ರೀತಿಯ ಶಸ್ತ್ರಾಸ್ತ್ರಗಳನ್ನು ಅದರಲ್ಲಿ ಅಳವಡಿಸಬಹುದಾಗಿದೆ. ಬಾಂಬ್‌ ನಿಷ್ಕ್ರಿಯಗೊಳಿಸುವಲ್ಲಿಯೂ ಇದು ಪರಿಣಾಮಕಾರಿಯಾಗಿದೆ. ವಿಪತ್ತು ನಿಯಂತ್ರಣದ ಸಮಯದಲ್ಲಿ ರಕ್ಷಣೆಗೆ ಸಹಾಯಕವಾಗಿದೆ. ಮತ್ತೊಂದೆಡೆ, ಕಿರಿದಾದ ಬೀದಿಗಳಲ್ಲಿ ಚಲಿಸುವ ಸಾಮರ್ಥ್ಯ ಹೊಂದಿರುವ Xena 5.0, ವಿಪತ್ತು ರಕ್ಷಣಾ ಕಾರ್ಯದಲ್ಲಿ ಸಹಾಯಕವಾಗಿದೆ. ಅಲ್ಲದೆ, ಇದನ್ನು ಕೃಷಿ ಉದ್ದೇಶಕ್ಕಾಗಿ ಸಹ ವಿನ್ಯಾಸಗೊಳಿಸಲಾಗಿದೆ.

Xena 5.0 ಯಾವುದೇ ಮೇಲ್ಮೈಯಲ್ಲಿ ಕೆಲಸ ಮಾಡಬಹುದು. ಈ ರೋಬೋಟ್ 30 ಸೆಂ.ಮೀ ಎತ್ತರಕ್ಕೆ ಏರಬಲ್ಲದು ಮತ್ತು ಸುಮಾರು 250 ಕೆಜಿ ತೂಕವನ್ನು ಎತ್ತಬಲ್ಲದು. ಇದಲ್ಲದೇ ಈ ರೋಬೋಟ್ SUV ವಾಹನವನ್ನೂ ಎಳೆಯಬಲ್ಲದು. ವಿಶೇಷವೆಂದರೆ ಇದನ್ನು 300 ಮೀಟರ್ ವ್ಯಾಪ್ತಿಯಲ್ಲಿ ರಿಮೋಟ್ ಮೂಲಕವೂ ನಿಯಂತ್ರಿಸಬಹುದಾಗಿದೆ. ಪ್ರಸ್ತುತ ಇದನ್ನು ಆದ್ಯತೆಯ ಮೇಲೆ ಬೆಂಕಿ ನಂದಿಸಲು ಬಳಸಲಾಗುತ್ತಿದೆ.

Xena 5.0ನ ವೈಶಿಷ್ಟ್ಯ ಎಂದರೆ ಇದು ಬಹು ಮೇಲ್ಮೈ ಕ್ರಾಲರ್ ರೋಬೋಟ್ ಆಗಿದೆ. ಇದರ ಬೆಲೆ ಸುಮಾರು 25 ಲಕ್ಷ ರೂಪಾಯಿ. ಒಂದು ಬಾರಿ ಚಾರ್ಜ್‌ ಮಾಡಿದರೆ 3 ಗಂಟೆಗಳ ಕಾಲ ಕೆಲಸ ಮಾಡಬಲ್ಲದು. ಕ್ಯಾಮೆರಾ ಮತ್ತು ಫೈರ್ ಮಾನಿಟರ್ ಅನ್ನು ಸಹ ಇದಕ್ಕೆ ಅಳವಡಿಸಬಹುದಾಗಿದ್ದು, ಈ ಮಲ್ಟಿ ಯುಟಿಲಿಟಿ ರೋಬೋಟ್ ವಿಪತ್ತು, ರಕ್ಷಣೆ ಮತ್ತು ಕೃಷಿ ಕ್ಷೇತ್ರಗಳಿಗೆ ಅತ್ಯಂತ ಸಹಾಯಕವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.