ETV Bharat / bharat

ಇಶಾನ್ ಕಿಶನ್​ರನ್ನು ಕೈಬಿಟ್ಟ ಕ್ರಮಕ್ಕೆ ವೆಂಕಟೇಶ್ ಪ್ರಸಾದ್ ಅಸಮಾಧಾನ - etv bharat kannada

ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯ- ಇಶಾನ್ ಕಿಶನ್​ರನ್ನು ಕೈಬಿಟ್ಟಿದ್ದಕ್ಕೆ ಮಾಜಿ ವೇಗದ ಬೌಲರ್ ವೆಂಕಟೇಶ್ ಪ್ರಸಾದ್ ಅಸಮಾಧಾನ- ದ್ವಿಶತಕ ಗಳಿಸಿದ್ದ ಕಿಶನ್ ಕೈಬಿಡಲು ಕಾರಣಗಳೇ ಇಲ್ಲ ಎಂದು ಟ್ವೀಟ್​​

ಇಶಾನ್ ಕಿಶನ್ ಕೈಬಿಟ್ಟ ಕ್ರಮಕ್ಕೆ ವೆಂಕಟೇಶ್ ಪ್ರಸಾದ್ ಅಸಮಾಧಾನ
x-factor-is-dropped-and-mediocrity-is-retained-prasad-on-indias-selection-calls
author img

By

Published : Jan 10, 2023, 7:33 PM IST

ನವದೆಹಲಿ: ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಇಶಾನ್ ಕಿಶನ್ ಅವರನ್ನು ಭಾರತದ ಪ್ಲೇಯಿಂಗ್ ಇಲೆವೆನ್ ತಂಡದಿಂದ ಹೊರಗಿಟ್ಟಿರುವುದನ್ನು ಮಾಜಿ ಬೌಲರ್ ವೆಂಕಟೇಶ್ ಪ್ರಸಾದ್ ಟೀಕಿಸಿದ್ದಾರೆ. ದ್ವಿಶತಕ ಗಳಿಸಿದ ಆಟಗಾರನನ್ನು ನೀವು ಕೈಬಿಡಲು ಯಾವ ಕಾರಣಗಳೂ ಇಲ್ಲ ಎಂದು ಹೇಳಿದ್ದಾರೆ. ಮಂಗಳವಾರ ನಡೆಯಲಿರುವ ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೂ ಮುನ್ನ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮಾತನಾಡಿದ್ದು, ತಾವು ಶುಭಮನ್ ಗಿಲ್ ಅವರೊಂದಿಗೆ ಓಪನಿಂಗ್ ಮಾಡುತ್ತೇನೆಯೇ ಹೊರತು ಕಿಶನ್ ಜೊತೆಗೆ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 50-ಓವರ್‌ಗಳ ಪಂದ್ಯದ ತಮ್ಮ ಹಿಂದಿನ ಇನ್ನಿಂಗ್ಸ್‌ನಲ್ಲಿ ಇಶಾನ್ ಕಿಶನ್ ದ್ವಿಶತಕ ಗಳಿಸಿದ್ದರು.

ಭಾರತ ಆಡಿದ ಹಿಂದಿನ ಏಕದಿನ ಪಂದ್ಯದಲ್ಲಿ ದ್ವಿಶತಕ ಗಳಿಸಿದ ವ್ಯಕ್ತಿಗೆ ಮತ್ತು ಭಾರತ ಎರಡು ಪಂದ್ಯ ಮತ್ತು ಸರಣಿ ಕಳೆದುಕೊಂಡ ಸರಣಿಯಲ್ಲಿ ದ್ವಿಶತಕ ಗಳಿಸಿದ ವ್ಯಕ್ತಿಗೆ ಅವಕಾಶ ನೀಡುವುದು ನ್ಯಾಯೋಚಿತವಾಗಿದೆ ಎನಿಸುತ್ತದೆ. ಶುಭಮನ್ ಗಿಲ್​ಗೆ ಕ್ರಿಕೆಟ್ ಜಗತ್ತಿನಲ್ಲಿ ಇನ್ನೂ ಸಾಕಷ್ಟು ಸಮಯವಿದೆ. ಆದರೆ ದ್ವಿಶತಕ ಗಳಿಸಿದ ಆಟಗಾರನೊಬ್ಬರನ್ನು ನೀವು ಕೈಬಿಡುವುದು ಸಾಧ್ಯವೇ ಇಲ್ಲ ಎಂದು ಪ್ರಸಾದ್​ ಟ್ವೀಟ್ ಮಾಡಿದ್ದಾರೆ. ವೆಂಕಟೇಶ್ ಪ್ರಸಾದ್ ಭಾರತಕ್ಕಾಗಿ 33 ಟೆಸ್ಟ್​ ಮತ್ತು 161 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.

ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ನಾವು ಕಳಪೆ ಪ್ರದರ್ಶನ ತೋರಲು ಒಂದು ಕಾರಣವಿದೆ. ನಿರಂತರವಾಗಿ ಬದಲಾಯಿಸುವುದು ಮತ್ತು ಅದ್ಭುತವಾಗಿ ಆಡುವ ವ್ಯಕ್ತಿಯನ್ನು ಹೊರಹಾಕುವುದು ಮತ್ತು ಸಾಧಾರಣವಾಗಿರುವವರನ್ನು ಉಳಿಸಿಕೊಳ್ಳುವುದು ಅದಕ್ಕೆ ಕಾರಣಗಳಾಗಿವೆ. ಇಂಗ್ಲೆಂಡ್‌ನಲ್ಲಿ, ಅಂತಿಮ ಏಕದಿನ ಪಂದ್ಯದಲ್ಲಿ ಪಂತ್ ಶತಕ ಗಳಿಸಿದರು ಮತ್ತು ಭಾರತಕ್ಕೆ ಸರಣಿ ಗೆಲ್ಲಲು ಸಹಾಯ ಮಾಡಿದರು. ಆದರೆ, ಅವರನ್ನು ಟಿ20 ಫಾರ್ಮ್ ಆಧರಿಸಿ ಏಕದಿನ ತಂಡದಿಂದ ಕೈಬಿಡಲಾಗಿದೆ. ಇನ್ನೊಂದೆಡೆ ಕೆಎಲ್ ರಾಹುಲ್ ಒಂದೆರಡು ಇನ್ನಿಂಗ್ಸ್ ಹೊರತುಪಡಿಸಿ ಸತತವಾಗಿ ವಿಫಲವಾಗಿದ್ದರೂ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಕಾರ್ಯಕ್ಷಮತೆ ಎಂಬುದು ನಿರಂತರ ಮೌಲ್ಯಾಂಕನವಲ್ಲ ಎಂದು ಅವರು ಹೇಳಿದ್ದಾರೆ.

ಆಡುವ ಹನ್ನೊಂದು ಜನರ ತಂಡದಲ್ಲಿ ರಾಹುಲ್ ನಿಯೋಜಿತ ವಿಕೆಟ್ ಕೀಪರ್ ಆಗಿರುತ್ತಾರೆ. ವಿಶ್ವದ ನಂಬರ್ ಒನ್ T20 ಬ್ಯಾಟರ್ ಸೂರ್ಯಕುಮಾರ್ ಯಾದವ್ ಮೊದಲ ಏಕದಿನ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆಯಿದೆ ಮತ್ತು ಶ್ರೇಯಸ್ ಅಯ್ಯರ್ ಆದ್ಯತೆಯ ಆಯ್ಕೆಯಾಗಿದ್ದಾರೆ. ಭಾರತ ಕೊನೆಯ ಬಾರಿಗೆ 2013ರಲ್ಲಿ ಪ್ರಮುಖ ಟೂರ್ನಿಯನ್ನು ಗೆದ್ದಿತ್ತು.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪ್ರಿಟೋರಿಯಸ್ ನಿವೃತ್ತಿ.. ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಡ್ವೈನ್ ಪ್ರಿಟೋರಿಯಸ್ ತಕ್ಷಣದಿಂದ ಜಾರಿಗೆ ಬರುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಡ್ವೈನ್ ಪ್ರಿಟೋರಿಯಸ್ ದಕ್ಷಿಣ ಆಫ್ರಿಕಾದ ಎಲ್ಲಾ ಮೂರು ಸ್ವರೂಪಗಳಲ್ಲಿ 60 ಪಂದ್ಯಗಳಲ್ಲಿ ಆಡಿದ್ದಾರೆ. 30 T20Is, 27 ODIಗಳು ಮತ್ತು ಮೂರು ಟೆಸ್ಟ್‌ಗಳಲ್ಲಿ ದಕ್ಷಿಣ ಆಫ್ರಿಕಾವನ್ನು ಪ್ರತಿನಿಧಿಸಿದ್ದಾರೆ. ಪ್ರಿಟೋರಿಯಸ್ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ತಮ್ಮ ಪರಾಕ್ರಮ ಮೆರೆದಿದ್ದಾರೆ. ಒಟ್ಟು 1895 ರನ್ ಗಳಿಸಿದ್ದು, 77 ವಿಕೆಟ್‌ ಪಡೆದಿದ್ದಾರೆ.

2016 ರಲ್ಲಿ ಅಂತಾರಾಷ್ಟ್ರೀಯ ಪಂದ್ಯಕ್ಕೆ ಚೊಚ್ಚಲ ಬಾರಿಗೆ ಪ್ರವೇಶ ಮಾಡಿದ ನಂತರ, ಪ್ರಿಟೋರಿಯಸ್ ದಕ್ಷಿಣ ಆಫ್ರಿಕಾದ ಸೀಮಿತ-ಓವರ್ ಕ್ರಿಕೆಟ್‌ನಲ್ಲಿ ನಿಯಮಿತವಾಗಿ ಆಡಿದ್ದಾರೆ. ಅವರು 2019 ರ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಮತ್ತು 2021 ರ ಐಸಿಸಿ ಪುರುಷರ ಟಿ 20 ವಿಶ್ವಕಪ್‌ನ ತಂಡಗಳ ಭಾಗವಾಗಿದ್ದರು. ಅವರು ಯುಎಇಯಲ್ಲಿ ನಡೆದ T20 ವಿಶ್ವಕಪ್‌ನಲ್ಲಿ ಐದು ಪಂದ್ಯಗಳಲ್ಲಿ ಒಂಬತ್ತು ವಿಕೆಟ್‌ಗಳೊಂದಿಗೆ ದಕ್ಷಿಣ ಆಫ್ರಿಕಾದ ಜಂಟಿ-ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು.

ಇದನ್ನೂ ಓದಿ: ಟಿ20 ಕ್ರಿಕೆಟ್‌ ತ್ಯಜಿಸುವ ಕುರಿತು ನಿರ್ಧರಿಸಿಲ್ಲ: ರೋಹಿತ್ ಶರ್ಮಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.