ಚೆನ್ನೈ : ಖ್ಯಾತ ಲೇಖಕ, ಕಾದಂಬರಿಕಾರ ಮತ್ತು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೆ. ರಾಜನಾರಾಯಣ್ ಅವರ ಪಾರ್ಥಿವ ಶರೀರಕ್ಕೆ ಇಲ್ಲಿನ ಕೋವಿಲ್ಪಟ್ಟಿ ಬಳಿಯ ಇಡೈಸೇವಲ್ನಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತಿಮ ನಮನವನ್ನು ಸಲ್ಲಿಸಲಾಯಿತು.
ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಡಾ. ತಮಿಳಿಸೈ ಸೌಂದರರಾಜನ್ ಅವರು ಮಂಗಳವಾರ ಕಿ ರಾ ಅವರ ನಿವಾಸಕ್ಕೆ ಭೇಟಿ ನೀಡಿ, ಅಂತಿಮ ನಮನ ಸಲ್ಲಿಸಿದ್ದರು. 99 ವರ್ಷದ ಹಿರಿಯ ಲೇಖಕರು ತಾವು ವಾಸಿಸುತ್ತಿದ್ದ ಪುದುಚೇರಿ ಸರ್ಕಾರಿ ನಿವಾಸದಲ್ಲಿ ಸೋಮವಾರ ಕೊನೆಯುಸಿರೆಳೆದರು.
ನಿನ್ನೆ ಪಾರ್ಥಿವ ಶರೀರವನ್ನು ಹುಟ್ಟೂರಿಗೆ ಕೊಂಡೊಯ್ಯಲಾಗಿದ್ದು, ಇಂದು ಅಲ್ಲಿ ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ತಮಿಳುಸಾಯಿ ಸೌಂದರಾಜನ್, ತಮಿಳುನಾಡು ಸ್ಪೀಕರ್ ಎಂ ಅಪ್ಪಾವು, ಸಚಿವರಾದ ಅನಿತಾ ರಾಧಾಕೃಷ್ಣನ್, ತಂಗಮ್ ತೆನ್ನರಾಸು, ಗೀತಾ ಜೀವನ್, ಸಂಸದೆ ಕನಿಮೋಳಿ, ಸು ವೆಂಕಟೇಶನ್ ಮತ್ತು ಅನೇಕ ಗಣ್ಯರು ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.
ಗೌರವದ ಸಂಕೇತವಾಗಿ ತಮಿಳುನಾಡು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಅವರು ಕಿ ರಾ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿಸುವಂತೆ ಆದೇಶ ಹೊರಡಿಸಿದ್ದರು. ಅಲ್ಲದೇ, ಮೃತರ ನೆನೆಪಿಗಾಗಿ ಅವರ ಪ್ರತಿಮೆಯನ್ನು ಕೋವಿಲ್ಪಟ್ಟಿಯಲ್ಲಿ ಸ್ಥಾಪಿಸಲಾಗುವುದು ಮತ್ತು ಅವರ ಸ್ಥಳೀಯ ಸ್ಥಳವಾದ ಇಡೈಸೆವಲ್‌ನಲ್ಲಿರುವ ಪಂಚಾಯತ್ನಲ್ಲಿ ಯೂನಿಯನ್ ಮಿಡಲ್ ಶಾಲೆಯನ್ನು ನವೀಕರಿಸಲಾಗುವುದು ಎಂದು ತಿಳಿಸಿದ್ದಾರೆ.
ಓದಿ: ಕೊರೊನಾದಿಂದ ಮೃತಪಟ್ಟ ಶಿಕ್ಷಕನ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ