ETV Bharat / bharat

CCTV VIDEO: ಕುಸ್ತಿಪಟು ಸಾಗರ್​ ರಾಣಾ ಮೇಲೆ ಸುಶೀಲ್ ಕುಮಾರ್​ ಹಲ್ಲೆ ವಿಡಿಯೋ ವೈರಲ್​​ - ಕುಸ್ತಿಪಟು ಸಾಗರ್​ ರಾಣಾ ಮೇಲೆ ಸುಶೀಲ್​ ಕುಮಾರ್ ಹಲ್ಲೆ

ದೆಹಲಿಯ ಛತ್ರಸಾಲ್​ ಸ್ಟೇಡಿಯಂ ಹೊರಗೆ ಕುಸ್ತಿಪಟು ಸಾಗರ್​ ರಾಣಾ ಮೇಲೆ ಸುಶೀಲ್​ ಕುಮಾರ್​ ಹಾಗೂ ಆತನ ಸಹಚರರು ನಡೆಸಿರುವ ಹಲ್ಲೆಯ ವಿಡಿಯೋ ಇದೀಗ ವೈರಲ್​ ಆಗಿದೆ.

wrestler sushil kumar video
wrestler sushil kumar video
author img

By

Published : May 27, 2021, 10:53 PM IST

ಚಂಡೀಗಢ: ಕುಸ್ತಿಪಟು ಸಾಗರ್​ ರಾಣಾ(23) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಲಿಂಪಿಕ್​​ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್​ ಬಂಧನವಾಗಿದ್ದು, ವಿಚಾರಣೆ ನಡೆಯುತ್ತಿದೆ.

ಕುಸ್ತಿಪಟು ಸಾಗರ್​ ರಾಣಾ ಮೇಲೆ ಸುಶೀಲ್​ ಕುಮಾರ್ ಹಲ್ಲೆ

ಇದರ ಮಧ್ಯೆ ಛತ್ರಾಸಲ್​ ಸ್ಟೇಡಿಯಂನಲ್ಲಿ ಸಾಗರ್​ ರಾಣಾ ಮೇಲೆ ಹಲ್ಲೆ ನಡೆದಿರುವ ವಿಡಿಯೋ ವೈರಲ್​ ಆಗಿದೆ. ರಾತ್ರಿ ವೇಳೆ ಕುಸ್ತಿಪಟು ಸುಶೀಲ್​ ಕುಮಾರ್​​ ಹಾಗೂ ಆತನ ಕೆಲ ಸಹಚರರು ಸೇರಿ ಸಾಗರ್​​ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ಇದಾಗಿದೆ.ಮೇ. 4ರ ರಾತ್ರಿ ಈ ಘಟನೆ ನಡೆದಿತ್ತು.

ಇದನ್ನೂ ಓದಿ: ಛತ್ರಸಾಲ್ ಕೊಲೆ ಪ್ರಕರಣ: ಕುಸ್ತಿಪಟು ಸುಶೀಲ್ ಕುಮಾರ್​ರ ನಾಲ್ವರು ಸಹಚರರ ಬಂಧನ

ಏನಿದು ಪ್ರಕರಣ: ಕುಸ್ತಿಪಟು ಸಾಗರ್‌ ರಾಣಾ ಧಂಕರ್​ ಮೇಲೆ ಮೇ 4ರಂದು ಒಲಿಂಪಿಕ್‌ ಪದಕ ವಿಜೇತ ಕುಸ್ತಿಪಟು ಸುಶೀಲ್‌ ಕುಮಾರ್‌ ಸೇರಿದಂತೆ ಅವರ ನಾಲ್ವರು ಸಹಚರರು ಹಲ್ಲೆ ನಡೆಸಿದ್ದರು. ಪರಿಣಾಮ ಸಾಗರ್​ ರಾಣಾ ಸಾವನ್ನಪ್ಪಿದ್ದರು. ಜತೆಗೆ ಇಬ್ಬರು ಸ್ನೇಹಿತರಿಗೆ ಮಾರಣಾಂತಿಕ ಗಾಯವಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿದ್ದ ಸುಶೀಲ್ ಕುಮಾರ್​ ಸೇರಿದಂತೆ ಭೂಪೇಂದರ್‌(38), ಮೋಹಿತ್‌(22), ಗುಲಾಬ್‌(24) ಮತ್ತು ರೋಹ್ಟಕ್‌ ನಿವಾಸಿ ಮಂಜೀತ್‌(29) ಸುಶೀಲ್ ಕುಮಾರ್​ ಅವರನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.