ಸೋನಿತ್ಪುರ್(ಅಸ್ಸೋಂ) : ಅರುಣಾಚಲ ಪ್ರದೇಶದ ಕಮೆಂಗ್ ಸೆಕ್ಟರ್‌ನ ಎತ್ತರದ ಪ್ರದೇಶದಲ್ಲಿ ಹಿಮ ಕುಸಿತಕ್ಕೆ ಬಲಿಯಾದ ಏಳು ಸೈನಿಕರ ಪರಮೋಚ್ಛ ತ್ಯಾಗಕ್ಕೆ ಗೌರವ ಸಲ್ಲಿಸಲು ಅಸ್ಸೋಂನ ತೇಜ್‌ಪುರ್ ಏರ್‌ಫೋರ್ಸ್ ಸ್ಟೇಷನ್‌ನಲ್ಲಿ ಇಂದು ಪುಷ್ಪ ನಮನ ಸಮಾರಂಭ ನಡೆಯಿತು.
ತೇಜ್‌ಪುರ ವಾಯುಪಡೆಯ ನಿಲ್ದಾಣದಲ್ಲಿ ಕರ್ತವ್ಯದ ಸಾಲಿನಲ್ಲಿ ಅತ್ಯುನ್ನತ ತ್ಯಾಗ ಮಾಡಿದ ಹವ್ ಜುಗಲ್ ಕಿಶೋರ್, ಆರ್ಎಫ್ಎನ್ ಅರುಣ್ ಕಟ್ಟಾಲ್, ಆರ್ಎಫ್ಎನ್ ಅಕ್ಷಯ್ ಪಠಾನಿಯಾ, ಆರ್ಎಫ್ಎನ್ ವಿಶಾಲ್ ಶರ್ಮಾ, ಆರ್ಎಫ್ಎನ್ ರಾಕೇಶ್ ಸಿಂಗ್, ಆರ್ಎಫ್ಎನ್ ಅಂಕೇಶ್ ಭಾರದ್ವಾಜ್ ಮತ್ತು ಜಿಎನ್ಆರ್ (ಟಿಎ) ಗುರ್ಬಾಜ್ ಸಿಂಗ್ ಅವರಿಗೆ ಪುಷ್ಪ ನಮನ ಸಲ್ಲಿಸಲಾಯಿತು.
ಜನರಲ್ ಆಫೀಸರ್ ಕಮಾಂಡಿಂಗ್, ಗಜರಾಜ್ ಕಾರ್ಪ್ಸ್ ಲೆಫ್ಟಿನೆಂಟ್ ಜನರಲ್ ರವೀನ್ ಖೋಸ್ಲಾ ಮತ್ತು ಇತರ ಮಿಲಿಟರಿ ಅಧಿಕಾರಿಗಳು, ವೀರರಿಗೆ ಅಂತಿಮ ನಮನ ಸಲ್ಲಿಸಿದರು. ನಂತರ, ಪಾರ್ಥಿವ ಶರೀರವನ್ನು ಸೈನಿಕರ ಕುಟುಂಬಗಳಿಗೆ ಹಸ್ತಾಂತರಿಸಲಾಯಿತು.
ಓದಿ: ಸೇನೆಯಿಂದ ಓಡಿ ಬಂದು, ಸೇನಾ ಸಮವಸ್ತ್ರ ಧರಿಸಿ ಕೆಲಸ ಕೊಡಿಸುವುದಾಗಿ ವಂಚನೆ ಮಾಡುತ್ತಿದ್ದ ವ್ಯಕ್ತಿ ಬಂಧನ