ಚೆನ್ನೈ(ತಮಿಳುನಾಡು) : ಕೆ ಕಾಮರಾಜ್ ಅವರು ಭಾರತದಲ್ಲಿ ಶಿಕ್ಷಣ, ಕೈಗಾರಿಕೆಗಳು ಮತ್ತು ನೀರಾವರಿಯ ಅಭಿವೃದ್ಧಿಯ ಬಗ್ಗೆ ದೂರದೃಷ್ಟಿಯ ಚಿಂತನೆಗೆ ವ್ಯಾಪಕವಾಗಿ ಹೆಸರುವಾಸಿಯಾಗಿದ್ದಾರೆ. ಅವರು ತಮಿಳುನಾಡಿನ ಮುಖ್ಯಮಂತ್ರಿಯೂ ಆಗಿದ್ದವರು. ಅವರ 120ನೇ ಜನ್ಮದಿನವನ್ನು ನಾಳೆ (ಜುಲೈ 15) ಆಚರಿಸಲಾಗುತ್ತಿದ್ದು, ಅಭಿಮಾನಿಯೊಬ್ಬರು ಅವರನ್ನು ವಿಭಿನ್ನ ರೀತಿಯಲ್ಲಿ ಸ್ಮರಿಸಿಕೊಂಡಿದ್ದಾರೆ.
ಕಾಮರಾಜ್ ಅವರ ಜನ್ಮದಿನದ ಸಂದರ್ಭದಲ್ಲಿ ಕಲ್ಲಾಕುರಿಚಿ ಜಿಲ್ಲೆಯ ಶಿವನಾರ್ಧಂಗಲ್ ಗ್ರಾಮದ ಪಂಚಾಯತ್ ಯೂನಿಯನ್ ಶಾಲೆಯಲ್ಲಿ ಅರೆಕಾಲಿಕ ಡ್ರಾಯಿಂಗ್ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಸೆಲ್ವಂ ಅವರು ತಮ್ಮ ಕಣ್ರೆಪ್ಪೆಯಲ್ಲಿ ಕಾಮರಾಜ್ ಭಾವಚಿತ್ರವನ್ನು ಬಿಡಿಸಿದ್ದಾರೆ. ಬ್ರಷ್ ಅಥವಾ ಕೈ ಬಳಕೆ ಬದಲು ರೆಪ್ಪೆಗೂದಲಿನ ಮೂಲಕ ಈ ವಿಶಿಷ್ಟ ಸಾಧನೆ ಮಾಡಿದ್ದಾರೆ. ಈ ಕಲೆಯನ್ನು 20 ನಿಮಿಷಗಳಲ್ಲಿ ಪೂರ್ಣಗೊಳಿಸಿದ್ದಾರೆ.
ಇದನ್ನೂ ಓದಿ: 27 ದಿನಕ್ಕೆ 1.70 ಕೋಟಿ ರೂ. ಕಾಣಿಕೆ .. ಮಲೆಮಹದೇಶ್ವರನಿಗೆ ಬಂತು ಕೆಜಿಗಟ್ಟಲೇ ಆಭರಣ