ಶಿಮ್ಲಾ( ಹಿಮಾಚಲ ಪ್ರದೇಶ): ಇದೆ ಮೊದಲ ಬಾರಿಗೆ ವಿಶ್ವದ ಅತಿ ಉದ್ದದ ವಿಷಪೂರಿತ ನಾಗರಹಾವು ದೇವಭೂಮಿ ಹಿಮಾಚಲದ ಸಿರ್ಮೌರ್ ಜಿಲ್ಲೆಯ ಶಿವಾಲಿಕ್ ಬೆಟ್ಟಗಳಲ್ಲಿ ಕಾಣಿಸಿಕೊಂಡಿದೆ.
ವನ್ಯಜೀವಿ ಇಲಾಖೆಯ ಪ್ರಕಾರ, ಕಿಂಗ್ ಕೋಬ್ರಾ ಇದೆ ಮೊದಲ ಬಾರಿಗೆ ರಾಜ್ಯದಲ್ಲಿ ಕಾಣಿಸಿಕೊಂಡಿದೆ. ಒಂದು ವಾರದ ಹಿಂದೆ ನಾಗರಹಾವಿನ ವಿಡಿಯೋ ಸೆರೆ ಹಿಡಿಯಲಾಗಿತ್ತು. ವಿಡಿಯೋದಲ್ಲಿ ಹಾವು ಪರ್ವತ ಏರುವುದು ಕಂಡು ಬಂದಿದೆ.
ಸಿರ್ಮೌರ್ ಜಿಲ್ಲೆಯ ಕೋಲಾರ ಪಂಚಾಯತ್ ನ ಫಾಂಡಿ ಗ್ರಾಮದಲ್ಲಿ ಈ ಅಪರೂಪದ ಹಾವು ಕಂಡು ಬಂದಿದ್ದು, ಸುಮಾರು 15 ಅಡಿಗೂ ಹೆಚ್ಚು ಉದ್ದವಾಗಿದೆ ಎಂದು ಹೇಳಲಾಗಿದೆ.