ETV Bharat / bharat

ಕೊರೊನಾ ಬಲೆಯಲ್ಲಿ ವಿಶ್ವದ 8.1 ಕೋಟಿ ಮಂದಿ... ಯುರೋಪಿಯನ್​ ದೇಶಗಳಲ್ಲಿ 'ರೂಪಾಂತರ'

author img

By

Published : Dec 28, 2020, 4:27 PM IST

ಕೆನಡಾ, ಜಪಾನ್‌ ಹಾಗೂ ಯುರೋಪಿಯನ್​ ದೇಶಗಳಲ್ಲಿ ಕೊರೊನಾ ರೂಪಾಂತರ ಪ್ರಕರಣಗಳು ವರದಿಯಾಗುತ್ತಿದ್ದು, ಎಲ್ಲಾ ರಾಷ್ಟ್ರಗಳು ಎಚ್ಚೆತ್ತುಕೊಂಡಿವೆ.

Worldover corona cases and deaths
ಕೊರೊನಾ ಬಲೆಯಲ್ಲಿ ವಿಶ್ವದ 8.1 ಕೋಟಿ ಮಂದಿ

ಹೈದರಾಬಾದ್​: ಇಂಗ್ಲೆಂಡ್​ನಲ್ಲಿ ಹೊಸ ಪ್ರಭೇದದ ಕೋವಿಡ್ ವೈರಸ್ ಪತ್ತೆಯಾಗಿದ್ದು, ಕೆನಡಾ, ಜಪಾನ್‌ ಹಾಗೂ ಯುರೋಪಿಯನ್​ ದೇಶಗಳಲ್ಲಿ ಕೊರೊನಾ ರೂಪಾಂತರ ಪ್ರಕರಣಗಳು ವರದಿಯಾಗುತ್ತಿವೆ. ಎಲ್ಲಾ ರಾಷ್ಟ್ರಗಳಲ್ಲೂ ಬ್ರಿಟನ್​ನಿಂದ ಬಂದ ಪ್ರಯಾಣಿಕರ ಮೇಲೆ ನಿಗಾ ಇರಿಸಿ, ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

ಈಗಾಗಲೇ ವಿಶ್ವದಾದ್ಯಂತ 8 ಕೋಟಿಗೂ ಅಧಿಕ (8,11,54,267) ಜನರಿಗೆ ಕಿಲ್ಲರ್​ ಕೊರೊನಾ ವೈರಸ್​ ಅಂಟಿದ್ದು, 17,72,222 ಸೋಂಕಿತರು ಮೃತಪಟ್ಟಿದ್ದಾರೆ. ಆದರೆ ಸೋಂಕಿತರ ಪೈಕಿ 5,73,05,067 ಮಂದಿ ಗುಣಮುಖರಾಗಿದ್ದಾರೆ. ಕೋವಿಡ್​​ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆಯಲ್ಲಿ ಜಗತ್ತಿನಲ್ಲೇ ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 1,95,73,847 ಇದ್ದು, ಮೃತರ ಸಂಖ್ಯೆ 3,41,138ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ: ಕೆನಡಾದಲ್ಲಿ 2 ಕೊರೊನಾ ರೂಪಾಂತರ ಪ್ರಕರಣಗಳು ಪತ್ತೆ

ಕೇಸ್​ಗಳ ಪೈಕಿ ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ ಈವರೆಗೆ 1,02,08,725 ಕೇಸ್​ಗಳು ಪತ್ತೆಯಾಗಿದ್ದು, 1,47,940 ಜನರು ವೈರಸ್​ಗೆ ಬಲಿಯಾಗಿದ್ದಾರೆ. ಮೂರನೇ ಸ್ಥಾನದಲ್ಲಿರುವ ಬ್ರೆಜಿಲ್​​ನಲ್ಲಿ 74,84,285 ಪ್ರಕರಣಗಳು ಹಾಗೂ 1,91,146 ಸಾವುಗಳು ವರದಿಯಾಗಿದೆ. 4ನೇ ಸ್ಥಾನದಲ್ಲಿರುವ ರಷ್ಯಾದಲ್ಲಿ 30,50,248 ಕೇಸ್​​ಗಳಿದ್ದು, 54,778 ಜನರು ಸಾವನ್ನಪ್ಪಿದ್ದಾರೆ.

ಅಮೆರಿಕ, ಬ್ರೆಜಿಲ್​​, ಭಾರತದ ಬಳಿಕ ಸಾವಿನ ಸಂಖ್ಯೆಯಲ್ಲಿ ಮೆಕ್ಸಿಕೋ, ಇಂಗ್ಲೆಂಡ್​ ಹಾಗೂ ಇಟಲಿ ಕ್ರಮವಾಗಿ 4,5 ಹಾಗೂ 6ನೇ ಸ್ಥಾನದಲ್ಲಿವೆ. ಒಟ್ಟು 218 ರಾಷ್ಟ್ರಗಳು ಕೋವಿಡ್​ ಹೊಡೆತಕ್ಕೆ ಸಿಲುಕಿದ್ದು, ಕೊರೊನಾ​ ಪೀಡಿತ ವಿಶ್ವದ ಟಾಪ್​ 10 ರಾಷ್ಟ್ರಗಳ ಮಾಹಿತಿ ಇಲ್ಲಿದೆ.

Worldover corona cases and deaths
ಗ್ಲೋಬಲ್​ ಕೋವಿಡ್​ 19 ಟ್ರ್ಯಾಕರ್​

ಕೋವಿಡ್​ ಮೊಟ್ಟಮೊದಲು ಕಾಣಿಸಿಕೊಂಡು ಅದರಿಂದ ಚೇತರಿಸಿಕೊಂಡಿದ್ದ ಚೀನಾದಲ್ಲಿ ಬೆರಳೆಣಿಕೆಯಷ್ಟು ಕೇಸ್​ಗಳು​ ಪತ್ತೆಯಾಗುತ್ತಿವೆ. 2019ರ ಡಿಸೆಂಬರ್​ನಿಂದ ಈವರೆಗೆ ಚೀನಾದಲ್ಲಿ 86,976 ಪ್ರಕರಣಗಳು ಹಾಗೂ 4,634 ಸಾವುಗಳು ವರದಿಯಾಗಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.