ಬೆಂಗಳೂರು: ಪ್ರತಿ ವರ್ಷ ಶಿಕ್ಷಕರ ದಿನವನ್ನು ಸೆಪ್ಟೆಂಬರ್ 5ರಂದು ಆಚರಿಸಲಾಗುವುದು. ಅದೇ ರೀತಿ ವಿಶ್ವ ಶಿಕ್ಷಕರ ದಿನವನ್ನು ಅಕ್ಟೋಬರ್ 5ರಂದು ಆಚರಿಲಾಗುವುದು. ಶಿಕ್ಷಕರು ವಿದ್ಯಾರ್ಥಿಗಳಿಗಾಗಿ ಮಾಡುವ ಕೊಡುಗೆ ತ್ಯಾಗದ ಸ್ಮರಣೆಯನ್ನು ಈ ದಿನ ನೆನೆಯಲಾಗುವುದು. ವಿದ್ಯಾರ್ಥಿಗಳ ಜೀವನದ ಮೇಲೆ ಶಿಕ್ಷಕರು ಪ್ರಭಾವ ಬೀರುವ ಅವರ ಜೀವನವನ್ನೇ ಬದಲಾಯಿಸುವ ಅವಕಾಶವನ್ನು ಹೊಂದಿರುತ್ತಾರೆ. ಶಿಕ್ಷಕರ ಜವಾಬ್ದಾರಿ ಮತ್ತು ಪಾತ್ರದ ಕುರಿತು ನಮ್ಮೆಲ್ಲರಿಗೂ ತಿಳಿದಿದೆ. ದೇಶವನ್ನು ಮುನ್ನಡೆಸುವ ನಿಟ್ಟಿನಲ್ಲಿ ಮಕ್ಕಳನ್ನು ಸಬಲರನ್ನುಆಗಿ ಮಾಡಲು ಜಗತ್ತಿನ ಎಲ್ಲ ಶಿಕ್ಷಕರು ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಅಭಿವೃದ್ಧಿ ಮಾಡುತ್ತಾರೆ.
ಮೊದಲ ಬಾರಿಗೆ ಜಾರಿ: 1966ರ ಅಕ್ಟೋಬರ್ 5ರಂದು ಪ್ಯಾರಿಸ್ನ ಕಾನ್ಫರೆನ್ಸ್ನಲ್ಲಿ ಶಿಕ್ಷಕರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ವಿಶ್ವ ಶಿಕ್ಷಕರ ದಿನವನ್ನು ಆಚರಿಸುವ ಕುರಿತು ತೀರ್ಮಾನ ನಡೆಸಲಾಯಿತು. ಯುನೆಸ್ಕೋ ಕೂಡ ಈ ಶಿಫಾರಸು ಅಂಗೀಕರಿಸಿತು. 1994ರ ಅಕ್ಟೋಬರ್ 5ರಿಂದ ಪ್ರತಿ ವರ್ಷ ಶಿಕ್ಷಕರ ದಿನಾಚರಣೆ ನಡೆಸಲು ಮುಂದಾಗಲಾಯಿತು. ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಎಲ್ಒ), ಯುನಿಸೆಫ್ ಮತ್ತು ಅಂತರಾಷ್ಟ್ರೀಯ ಶಿಕ್ಷಣಗಳು ಸೇರಿ ಪ್ರತಿ ವರ್ಷ ವಿಶ್ವ ಶಿಕ್ಷಕರ ದಿನ ಆಚರಣೆ ನಡೆಸುವ ಮೂಲಕ ಅವರ ಜವಾಬ್ದಾರಿಗಳ ಅರಿವು ನಡೆಸುತ್ತಿದ್ದು, ಅವರ ಮೌಲ್ಯವನ್ನು ಎತ್ತಿ ಹಿಡಿಯುವ ಮೂಲಕ ಅವರ ಕೆಲಸಕ್ಕೆ ಗೌರವ ಸಲ್ಲಿಸಲಾಗುತ್ತಿದೆ. ವಿಶ್ವ ಶಿಕ್ಷಕರ ದಿನವನ್ನು 1994 ರಿಂದಲೂ 100ಕ್ಕೂ ಹೆಚ್ಚು ದೇಶದಲ್ಲಿ ಆಚರಿಸಲಾಗುತ್ತಿದೆ.
ಪ್ರತಿ ವರ್ಷ ವಿವಿಧ ದಿನ ವಿವಿಧ ದೇಶದಲ್ಲಿ ಆಚರಣೆ: ಶಿಕ್ಷಕರ ದಿನ ಎಂಬುದು ಜಾಗತಿಕ ಹಬ್ಬದ ಆಕಾರವನ್ನು ಹೊಂದಿದೆ. ಜಾಗತಿನೆಲ್ಲೆಡೆ ವಿಭಿನ್ನವಾಗಿ ದಿನಗಳಂದು ಶಿಕ್ಷಕರ ದಿನ ಆಚರಿಸಲಾಗುವುದು. ಭಾರತದಲ್ಲಿ ಸೆಪ್ಟೆಂಬರ್ 5 ರಂದು ಆಚರಿಸಿದರೆ, ಅಮೆರಿಕದಲ್ಲಿ ಮೇ 6, ಚೀನಾದಲ್ಲಿ ಸೆಪ್ಟೆಂಬರ್ 10, ಇರಾನ್ನಲ್ಲಿ ಮೇ 2, ಇಂಡೋನೇಷ್ಯಾದಲ್ಲಿ ನವೆಂಬರ್ 25, ಸಿರಿಯಾ, ಈಜಿಪ್ಟ್ ಮುಂತಾದವುಗಳ ಕಡೆ ಫೆಬ್ರವರಿ 28 ರಂದು ಈ ದಿನವನ್ನು ಆಚರಿಸಲಾಗುವುದು. ಆದರೆ, ಅಂತಾರಾಷ್ಟ್ರೀಯ ಶಿಕ್ಷಕರ ದಿನ ಮಾತ್ರ ಅಕ್ಟೋಬರ್ 5ರಂದು ಆಚರಿಸಲಾಗುವುದು.
ಯುನೆಸ್ಕೋ ಪ್ರಕಾರ, ಇಂದಿನ ಜಗತ್ತಿನಲ್ಲಿ ಉತ್ತಮ ಮತ್ತು ಸುಶಿಕ್ಷಿತ ಶಿಕ್ಷಕರ ಕೊರತೆ ಕಾಡುತ್ತಿದೆ. ನಮ್ಮ ಭವಿಷ್ಯದ ಪೀಳಿಗೆ ಈ ಕೊರತೆಯಿಂದ ಹೊರ ಬರಬೇಕಿದೆ. ಶಿಕ್ಷಕರ ಸಂಖ್ಯೆ ಇಳಿಕೆಯಾಗುವುದನ್ನು ತಡೆದು ಇದರ ಸಂಖ್ಯೆ ಹೆಚ್ಚಾಗುವತ್ತ ಬೆಳಕು ಚೆಲ್ಲಬೇಕಿದೆ ಎಂದಿದೆ.
ಶಿಕ್ಷಕರ ದಿನದ ಧ್ಯೇಯ: ಈ ವರ್ಷ ವಿಶ್ವ ಶಿಕ್ಷಕರ ದಿನ 2023ರ ಧ್ಯೇಯವಾಕ್ಯವನ್ನು ಯುನೆಸ್ಕೋ ರಚಿಸಿದೆ. ನಮಗೆ ಅಗತ್ಯ ಇರುವ ಶಿಕ್ಷಣಕ್ಕೆ ಶಿಕ್ಷಕರು ಬೇಕು. ಶಿಕ್ಷಕರ ಕೊರತೆಯನ್ನು ಪರಿಹರಿಸುವ ಜಾಗತಿಕ ಅನಿವಾರ್ಯತೆ ತಿಳಿಸಬೇಕಿದೆ. ಇದರ ಮುಖ್ಯ ಉದ್ದೇಶ ಶಿಕ್ಷಕರ ದಿನದ ಕೊರತೆ ತಡೆಗಟ್ಟಿ, ಸಮಾಜದಲ್ಲಿ ಅವರ ಸಂಖ್ಯೆ ಹೆಚ್ಚುವ ಶಿಕ್ಷಣವನ್ನು ನೀಡಬೇಕಿದೆ. ಇಂದಿನ ದಿನದಲ್ಲಿ ಪ್ರತಿ ದೇಶದಲ್ಲಿ ಈ ನಿಟ್ಟಿನಲ್ಲಿ ಸರ್ಕಾರಗಳು ಶಿಕ್ಷಕರಿಗೆ ಆದ್ಯತೆ ನೀಡುತ್ತಿದೆ.
ಇದನ್ನೂ ಓದಿ: ಇಂದು 'ವಿಶ್ವ ಆವಾಸ ದಿನ' 2023: ಯಾಕೆ ಆಚರಿಸುತ್ತಾರೆ, ಏನಿದರ ಥೀಮ್ ಅಂತೀರಾ?