ನವದೆಹಲಿ: ಕೊರೊನಾ ವಿರುದ್ಧ ಹೋರಾಡಲು ಪೂರ್ವಭಾವಿ ಮತ್ತು ಸಹಕಾರಿ ತಂತ್ರಗಳನ್ನು ಅಳವಡಿಸಿಕೊಳ್ಳುವ ಮೂಲಕ ವಿಶ್ವವು ಮಹಾಮಾರಿಯನ್ನು ಸೋಲಿಸುವ ಹಾದಿಯಲ್ಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದರು.
ವಿಶ್ವ ಆರೋಗ್ಯ ಸಂಸ್ಥೆ ಕಾರ್ಯ ನಿರ್ವಾಹಕ ಮಂಡಳಿಯ 148ನೇ ಅಧಿವೃಶನ ಸಭೆಯಲ್ಲಿ ಮಾತನಾಡಿದ ಅವರು, ಸಾಂಕ್ರಾಮಿಕ ರೋಗಶಾಸ್ತ್ರೀಯ ಪ್ರವೃತ್ತಿಗಳಲ್ಲಿ ವ್ಯಾಪಕ ಅಸಮಾನತೆಯ ಹೊರತಾಗಿಯೂ ನಾವು ಪೂರ್ವಭಾವಿ ಮತ್ತು ಸಹಕಾರಿ ತಂತ್ರಗಳನ್ನು ಅಳವಡಿಸಿಕೊಳ್ಳುವ ಮೂಲಕ ಕೊರೊನಾ ಸೋಲಿಸುವ ಹಾದಿಯಲ್ಲಿದ್ದೇವೆ. ಇದಕ್ಕೆ ಸಹಕರಿಸಿದ ಸದಸ್ಯ ರಾಷ್ಟ್ರಗಳಿಗೆ ಧನ್ಯವಾದ ಹೇಳುತ್ತೇನೆ ಎಂದರು.
2020 ವಿಜ್ಞಾನದ ವರ್ಷವಾಗಿದ್ದು, ಜನರಯಲ್ಲಿ ಕಣ್ಮರೆಯಾಗುತ್ತಿದ್ದ ಮಾನವೀಯ ಮೌಲ್ಯಗಳನ್ನು ನೆನಪಿಸಿತು. ಬದಲಾದ ಪರಿಸ್ಥಿತಿಯಲ್ಲಿ ಜಾಗತಿಕ ಸಹಯೋಗಕ್ಕಾಗಿ ವಿಜ್ಞಾನಿಗಳು ತಮ್ಮ ಪರಿಣತಿಯನ್ನು ಹಂಚಿಕೊಳ್ಳಲು ಸಹಕಾರಿಯಾಯಿತು. ಇದರಿಂದ ಸರ್ಕಾರಗಳು, ವ್ಯಾಪಾರ ಲೋಕೋಪಕಾರಿ ಸಂಸ್ಥೆಗಳು ಒಟ್ಟಾಗಿ ಸಂಪನ್ಮೂಲಗಳನ್ನು ಮಾಡಲು ಪ್ರಾರಂಭಿಸಿದವು.
ಓದಿ: ಡಿನೋಟಿಫಿಕೇಷನ್ ಪ್ರಕರಣ: 'ಸುಪ್ರೀಂ'ನಲ್ಲಿಂದು ಸಿಎಂ ಬಿಎಸ್ವೈ ಮೇಲ್ಮನವಿ ವಿಚಾರಣೆ
ಕೋವಿಡ್ ವಿರುದ್ಧ ಹೋರಾಡಲು ಜಾಗತಿಕವಾಗಿ ಕೈಗೊಳ್ಳುತ್ತಿರುವ ಪ್ರಯತ್ನಗಳ ಕುರಿತು ಮಾತನಾಡಿದ ಅವರು, ಸವಾಲುಗಳನ್ನು ನಿವಾರಿಸಲು ಮತ್ತು ಆರೋಗ್ಯ ಸೇವೆಗಳ ಪ್ರವೇಶ, ಕೈಗೆಟುಕುವಿಕೆ ಮತ್ತು ಗುಣಮಟ್ಟ ಸುಧಾರಿಸಲು ಎಲ್ಲ ಸದಸ್ಯ ರಾಷ್ಟ್ರಗಳು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿವೆ. ಆದರೆ, ಕೆಲಸ ಇಲ್ಲಿ ಪೂರ್ಣಗೊಂಡಿಲ್ಲ. ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸುವ ನಮ್ಮ ಬದ್ಧತೆಯನ್ನು ನಾವು ದ್ವಿಗುಣಗೊಳಿಸಬೇಕು ಎಂದರು.