ETV Bharat / bharat

ಇಂದು ವಿಶ್ವ ಋತುಚಕ್ರ ನೈರ್ಮಲ್ಯ ದಿನ : ಮುಟ್ಟಿನ ದಿನದಲ್ಲಿ ಸ್ವಚ್ಛತೆಗಿರಲಿ ಆದ್ಯತೆ - World Menstrual Hygiene Day latest news

ಋತುಸ್ರಾವ ನೈಸರ್ಗಿಕ ಪ್ರಕ್ರಿಯೆಯಾಗಿದೆ. ಇದನ್ನು ಸಂತಾನೋತ್ಪತ್ತಿಗೆ ಅಗತ್ಯವೆಂದು ಪರಿಗಣಿಸಲಾಗುತ್ತದೆ. ತಿಂಗಳ ಈ ಸಮಯದಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ಮತ್ತು ನೈರ್ಮಲ್ಯದ ಅಗತ್ಯವಿದೆ. ಆದರೆ, ಅದರ ಬಗ್ಗೆ ಇರುವ ಅಜ್ಞಾನದ ಪರಿಣಾಮವಾಗಿ, ಸೋಂಕು, ಬಂಜೆತನ, ಕ್ಯಾನ್ಸರ್, ಹೆಪಟೈಟಿಸ್ ಬಿ ಮುಂತಾದ ಗಂಭೀರ ಸಮಸ್ಯೆಗಳು ಕಾಡಬಹುದು..

World Menstrual Hygiene Day 2021 MH Day
ಇಂದು ವಿಶ್ವ ಋತುಚಕ್ರ ನೈರ್ಮಲ್ಯ ದಿನ
author img

By

Published : May 28, 2021, 2:27 PM IST

ಇಂದು ಮೇ 28, ವಿಶ್ವ ಋತುಚಕ್ರ ನೈರ್ಮಲ್ಯ ದಿನ (Menstrual Hygiene Day) ಎಂದು ಆಚರಿಸಲಾಗುತ್ತದೆ. ಮಹಿಳೆಯರಲ್ಲಿ ಮುಟ್ಟಿನ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಜರ್ಮನ್​ ಮೂಲದ ಎನ್​​ಜಿಒ ವಾಶ್​ ಯುನೈಟೆಡ್​ 2014ರಲ್ಲಿ ಮೊದಲ ಬಾರಿಗೆ ಮುಟ್ಟು ನೈರ್ಮಲ್ಯದ ದಿನವನ್ನು ಆಚರಿಸಲು ಆರಂಭಿಸಿತು. ಈ ದಿನವನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತದೆ.

ಗ್ರಾಮೀಣ ಭಾಗದಲ್ಲಿ ಮಹಿಳೆಯರು ಮುಟ್ಟಿನ ನೈರ್ಮಲ್ಯ ನಿರ್ವಹಣೆಯಲ್ಲಿ ಇಂದಿಗೂ ಹಳೆಯ ಕ್ರಮಗಳನ್ನೇ ಅನುಸರಿಸುತ್ತಿದ್ದಾರೆ. ಆದರೆ, ಇದು ಅನೇಕ ರೀತಿ ಸಮಸ್ಯೆಗಳಿಗೆ ಕಾರಣವಾವಗುತ್ತದೆ.

ಇಂತಹ ಮೌಢ್ಯಗಳನ್ನು ದೂರ ಮಾಡುವುದರೊಂದಿಗೆ ಮಹಿಳೆಯರನ್ನು ಮಾನಸಿಕವಾಗಿ ಸದೃಢರನ್ನಾಗಿಸುವುದೇ ಈ ದಿನದ ಉದ್ದೇಶವಾಗಿದೆ. ಜಾಗತಿಕವಾಗಿ, ಪ್ರತಿದಿನ 800 ದಶಲಕ್ಷಕ್ಕೂ ಹೆಚ್ಚು ಹುಡುಗಿಯರು ಮತ್ತು ಮಹಿಳೆಯರು ಮುಟ್ಟಾಗುತ್ತಾರೆ.

ಅದರಲ್ಲಿ ಸುಮಾರು 500 ದಶಲಕ್ಷದಷ್ಟು ಜನರು ಮುಟ್ಟಿನ ನೈರ್ಮಲ್ಯಕ್ಕೆ ಸಾಕಷ್ಟು ಸೌಲಭ್ಯಗಳನ್ನು ಹೊಂದಿರುವುದಿಲ್ಲ. ಅಲ್ಲದೆ, ಅವರಲ್ಲಿ ಹಲವರಿಗೆ ಮೂಲ ನೈರ್ಮಲ್ಯ ಮತ್ತು ನೈರ್ಮಲ್ಯ ಕ್ರಮಗಳ ಬಗ್ಗೆ ಸಹ ತಿಳಿದಿಲ್ಲ. ಆರೋಗ್ಯಕರವಲ್ಲದ ಪರಿಸ್ಥಿತಿಗಳಿಂದಾಗಿ, ಅನೇಕ ಹೆಣ್ಣು ಮಕ್ಕಳು ವಿವಿಧ ರೋಗಗಳು ಮತ್ತು ಸೋಂಕುಗಳಿಂದ ಬಳಲುತ್ತಿದ್ದಾರೆ.

ಇದು ಮಾತ್ರವಲ್ಲ, ಈ ಸಮಯದಲ್ಲಿ ಹೆಣ್ಣುಮಕ್ಕಳು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಭಾರತ ಸೇರಿದಂತೆ ವಿಶ್ವದ ಅನೇಕ ಭಾಗಗಳಲ್ಲಿ, ಅನೇಕ ಅನಗತ್ಯ ನಿಯಮಗಳು ಮತ್ತು ಮೂಢ ನಂಬಿಕೆಗಳು ಇದಕ್ಕೆ ಸಂಬಂಧಿಸಿವೆ.

ಮಧ್ಯಪ್ರದೇಶದ ದೇವಾಸ್ ಮೂಲದ ಸ್ತ್ರೀರೋಗತಜ್ಞೆ ಡಾ.ಪ್ರಾಚಿ ಮಹೇಶ್ವರಿ, ‘ಇಂದಿಗೂ ನಮ್ಮ ದೇಶದಲ್ಲಿ ಹೆಚ್ಚಿನ ಮಹಿಳೆಯರು ಮುಟ್ಟಿನ ಮತ್ತು ಅದಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡುವುದಿಲ್ಲ ಮತ್ತು ಈ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಸಹ ಅವರಿಗೆ ತಿಳಿದಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ, ಮುಟ್ಟಿನ ಸಮಯದಲ್ಲಿ ನೈರ್ಮಲ್ಯ ಅಥವಾ ಕಾಳಜಿಯ ಕೊರತೆಯಿಂದಾಗಿ ನಗರ ಪ್ರದೇಶಗಳಿಗಿಂತ ವಿವಿಧ ಸಮಸ್ಯೆಗಳು ಮತ್ತು ಸೋಂಕುಗಳನ್ನು ಎದುರಿಸುತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ಮುಟ್ಟಿನ ಸಮಯದಲ್ಲಿ ಪಾಲಿಸಬೇಕಾದ ಅಂಶಗಳು:

2015-2016ರಲ್ಲಿ ನಡೆಸಿದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ, ಭಾರತದ ಸುಮಾರು 336 ಮಿಲಿಯನ್ ಮಹಿಳೆಯರಲ್ಲಿ, ಶೇಕಡಾ 36 ಅಂದರೆ, 121 ಮಿಲಿಯನ್ ಮಹಿಳೆಯರು ಮುಟ್ಟಿನ ಸಮಯದಲ್ಲಿ ಸ್ಯಾನಿಟರಿ ನ್ಯಾಪ್​ಕಿನ್​ ಬಳಸುತ್ತಾರೆ.

ನಮ್ಮ ದೇಶದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯ ಮಹಿಳೆಯರು ಬಟ್ಟೆಗಳನ್ನು ಬಳಸುತ್ತಾರೆ. ಮಹಿಳೆಯ ವಯಸ್ಸು ಏನೇ ಇರಲಿ, ಪ್ರತಿಯೊಬ್ಬರೂ ಮುಟ್ಟಿನ ಸಮಯದಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯದ ಬಗ್ಗೆ ಗಮನ ಹರಿಸುವುದು ಬಹಳ ಮುಖ್ಯ. ಈ ಸಮಯದಲ್ಲಿ, ಈ ಕೆಳಗಿನ ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು.

  • ಪ್ರತಿ 6 ಗಂಟೆಗಳ ನಂತರ ಸ್ಯಾನಿಟರಿ ನ್ಯಾಪ್​ಕಿನ್ ಅಥವಾ ಪ್ಯಾಡ್ ಅನ್ನು ಬದಲಾಯಿಸಿ
  • ರಕ್ತಸ್ರಾವ ಹೆಚ್ಚು ಇದ್ದರೆ, ಅದನ್ನು ಪದೆೇಪದೆ ಬದಲಾಯಿಸಬೇಕು
  • ಪ್ಯಾಡ್‌ಗಳ ಬದಲಿಗೆ ಹಳೆಯ ಮತ್ತು ಕೊಳಕು ಬಟ್ಟೆಗಳನ್ನು ಬಳಸಬೇಡಿ, ಬಟ್ಟೆಗಳನ್ನು ಬಳಸಿದರೆ ಸೋಂಕಿನ ಅಪಾಯ ಹೆಚ್ಚು
  • ಜನನಾಂಗದ ಪ್ರದೇಶವನ್ನು (ಯೋನಿ ಮತ್ತು ಅದರ ಸುತ್ತಲಿನ ಪ್ರದೇಶ) ಕಾಲಕಾಲಕ್ಕೆ ಸ್ವಚ್ಛಗೊಳಿಸಿ
  • ನಿಯಮಿತವಾಗಿ ಸ್ನಾನ, ವಿಶೇಷವಾಗಿ ಮುಟ್ಟಿನ ಸಮಯದಲ್ಲಿ ಬಿಸಿನೀರಿನೊಂದಿಗೆ ಸ್ನಾನ ಮಾಡುವುದರಿಂದ ಮುಟ್ಟಿನ ನೋವಿನಿಂದ ಪರಿಹಾರ ಸಿಗುತ್ತದೆ
  • ನೀವು ಪ್ರಯಾಣಿಸುತ್ತಿದ್ದರೆ ಮತ್ತು ಶೌಚಾಲಯವನ್ನು ಬಳಸಲಿದ್ದರೆ, ಈ ಸಮಯದಲ್ಲಿ ಸೋಂಕಿನ ಹೆಚ್ಚಿನ ಅಪಾಯವಿರುವುದರಿಂದ ಶೌಚಾಲಯಗಳು ಸ್ವಚ್ಛವಾಗಿವೆಯೆ ಎಂದು ಖಚಿತಪಡಿಸಿಕೊಳ್ಳಿ
  • ನೀವು ಏನು ಸೇವಿಸುತ್ತೀರಿ ಮತ್ತು ಕುಡಿಯುತ್ತೀರಿ ಎಂಬುದರ ಬಗ್ಗೆ ವಿಶೇಷ ಕಾಳಜಿ ವಹಿಸಿ
  • ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಸೇವಿಸಲು ಪ್ರಯತ್ನಿಸಿ
  • ಸ್ವಚ್ಛ ಮತ್ತು ತೊಳೆದ ಒಳ ಉಡುಪುಗಳನ್ನು ಧರಿಸಿ ಮತ್ತು ಎರಡು ಪ್ಯಾಡ್‌ಗಳನ್ನು ಏಕಕಾಲದಲ್ಲಿ ಬಳಸಬೇಡಿ

ಋತುಸ್ರಾವ ನೈಸರ್ಗಿಕ ಪ್ರಕ್ರಿಯೆಯಾಗಿದ್ದು, ಇದನ್ನು ಸಂತಾನೋತ್ಪತ್ತಿಗೆ ಅಗತ್ಯವೆಂದು ಪರಿಗಣಿಸಲಾಗುತ್ತದೆ. ತಿಂಗಳ ಈ ಸಮಯದಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ಮತ್ತು ನೈರ್ಮಲ್ಯದ ಅಗತ್ಯವಿದೆ.

ಆದರೆ, ಅದರ ಬಗ್ಗೆ ಇರುವ ಅಜ್ಞಾನದ ಪರಿಣಾಮವಾಗಿ, ಸೋಂಕು, ಬಂಜೆತನ, ಕ್ಯಾನ್ಸರ್, ಹೆಪಟೈಟಿಸ್ ಬಿ ಮುಂತಾದ ಗಂಭೀರ ಸಮಸ್ಯೆಗಳು ಕಾಡಬಹುದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.