ETV Bharat / bharat

ನಾಳೆ ಅಂತಾರಾಷ್ಟ್ರೀಯ ಸಾಕ್ಷರತಾ ದಿನ: ಒಡಿಶಾದ ಸಂಸ್ಥೆಗೆ ಯುನೆಸ್ಕೋ ಪ್ರಶಸ್ತಿ - ಅಂತಾರಾಷ್ಟ್ರೀಯ ಸಾಕ್ಷರತಾ ದಿನ

ಒಡಿಶಾದ ಕಳಿಂಗ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ ಸಂಸ್ಥೆಯು ಯುನೆಸ್ಕೋ ಕನ್ಫ್ಯೂಷಿಯಸ್ ಸಾಕ್ಷರತಾ ಪ್ರಶಸ್ತಿ 2022ಕ್ಕೆ ಭಾಜನವಾಗಿದೆ.

World Literacy Day 2022  and UNESCO Literacy Prize
ಅಂತಾರಾಷ್ಟ್ರೀಯ ಸಾಕ್ಷರತಾ ದಿನ: ಒಡಿಶಾದ ಸಂಸ್ಥೆಗೆ ಯುನೆಸ್ಕೋ ಪ್ರಶಸ್ತಿ
author img

By

Published : Sep 7, 2022, 10:21 PM IST

ನವದೆಹಲಿ: ವಿಶ್ವದಾದ್ಯಂತ ಸೆಪ್ಟೆಂಬರ್ 8ರಂದು ಅಂತಾರಾಷ್ಟ್ರೀಯ ಸಾಕ್ಷರತಾ ದಿನವನ್ನು ಆಚರಿಸಲಾಗುತ್ತದೆ. ವಿಶ್ವದಲ್ಲಿ ಶಿಕ್ಷಣದ ಮಹತ್ವ ತೋರಿಸಲು ಮತ್ತು ಅನಕ್ಷರತೆ ತೊಲಗಿಸುವುದು ಹಾಗೂ ಶಿಕ್ಷಣದ ಪಡೆಯಲು ಉತ್ತೇಜಿಸುವುದು ಇದರ ಉದ್ದೇಶ. ಈ ದಿನದಂದು ವಿಶ್ವಸಂಸ್ಥೆಯ ಯುನೆಸ್ಕೋ ಸಂಸ್ಥೆಯು ಹಲವು ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುವುದರೊಂದಿಗೆ ಅಂತಾರಾಷ್ಟ್ರೀಯ ಸಾಕ್ಷರತಾ ಪ್ರಶಸ್ತಿಗಳನ್ನು ಸಹ ನೀಡುತ್ತದೆ.

1965ರಲ್ಲಿ ಸೆಪ್ಟೆಂಬರ್​ 8ರಿಂದ 19ವರೆಗೆ ಇರಾನ್‌ನ ಟೆಹ್ರಾನ್‌ನಲ್ಲಿ ನಡೆದ ಶಿಕ್ಷಣ ಮಂತ್ರಿಗಳ ವಿಶ್ವ ಸಮ್ಮೇಳನದಲ್ಲಿ ಅನಕ್ಷರತೆಯನ್ನು ತೊಡೆದುಹಾಕುವ ಉದ್ದೇಶದಿಂದ ಅಂತಾರಾಷ್ಟ್ರೀಯ ಸಾಕ್ಷರತಾ ದಿನ ಆಚರಿಸುವ ಕಲ್ಪನೆಯನ್ನು ಮೊದಲು ಪರಿಚಯಿಸಲಾಯಿತು. ಈ ಚರ್ಚೆಯ ಸಂದರ್ಭದಲ್ಲೇ ಯುನೆಸ್ಕೋ 1965ರಲ್ಲಿ ವಿಶ್ವ ಸಾಕ್ಷರತಾ ದಿನವನ್ನು ಘೋಷಿಸಿತು. ಇದರ ಮರು ವರ್ಷವೇ ಎಂದರೆ 1966ರ ಸೆಪ್ಟೆಂಬರ್ 8ರಂದು ಮೊದಲ ವಿಶ್ವ ಸಾಕ್ಷರತಾ ದಿನವನ್ನು ಆಚರಿಸಲಾಯಿತು. ಇಷ್ಟೇ ಅಲ್ಲ, 2009-2010ರಲ್ಲಿ ವಿಶ್ವಸಂಸ್ಥೆಯ ಸಾಕ್ಷರತಾ ದಶಕವನ್ನು ಘೋಷಿಸಲಾಯಿತು.

  • " class="align-text-top noRightClick twitterSection" data="">

ವಿಶ್ವ ಸಾಕ್ಷರತಾ ದಿನ 2022ರ ಥೀಮ್: ಪ್ರತಿ ವರ್ಷ ವಿಶ್ವ ಸಾಕ್ಷರತಾ ದಿನದಂದು ಯಾವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಥೀಮ್ ಸಿದ್ಧಪಡಿಸಲಾಗುತ್ತದೆ. ಈ ಬಾರಿಯ ಥೀಮ್ ಸಾಕ್ಷರತಾ ಕಲಿಕೆಯ ಸ್ಥಳಗಳನ್ನು ಪರಿವರ್ತಿಸುವುದು; ಅವಕಾಶಗಳು ಮತ್ತು ಸಾಧ್ಯತೆಗಳನ್ನು ಅನ್ವೇಷಿಸುವುದು ಎಂದು ಇರಿಸಲಾಗಿದೆ. ಇದೇ ರೀತಿ ಪ್ರತಿ ವರ್ಷ ಥೀಮ್​ಗೆ ಅನುಗುಣವಾಗಿ ಕಾರ್ಯಕ್ರಮಗಳು ಮತ್ತು ಪ್ರಶಸ್ತಿಗಳನ್ನು ಘೋಷಿಸಲಾಗುತ್ತದೆ.

ಹಿಂದಿನ ಥೀಮ್​ಗಳು

  • 2015 - ಸಾಕ್ಷರತೆ ಮತ್ತು ಸುಸ್ಥಿರ ಸಮಾಜ
  • 2016 - ಇತಿಹಾಸವನ್ನು ಓದಿ ಮತ್ತು ಭವಿಷ್ಯವನ್ನು ಬರೆಯಿರಿ
  • 2017 - ಡಿಜಿಟಲ್ ಜಗತ್ತಿನಲ್ಲಿ ಶಿಕ್ಷಣ
  • 2018 - ಸಾಕ್ಷರತೆ ಮತ್ತು ಕೌಶಲ್ಯ ಅಭಿವೃದ್ಧಿ
  • 2019 - ಸಾಕ್ಷರತೆ ಮತ್ತು ಬಹುಭಾಷಾ
  • 2020 - ಸಾಕ್ಷರತೆಯ ಶಿಕ್ಷಣ ಮತ್ತು ಕೋವಿಡ್​ ಬಿಕ್ಕಟ್ಟಿನ ಬಿಕ್ಕಟ್ಟು ಮತ್ತು ಆಚೆಗೆ
  • 2021 - ಮಾನವ ಕೇಂದ್ರಿತ ಚೇತರಿಕೆಗಾಗಿ ಸಾಕ್ಷರತೆ: ಡಿಜಿಟಲ್ ವಿಭಜನೆಯನ್ನು ಸಂಕುಚಿತಗೊಳಿಸುವುದು
  • 2022 - ಸಾಕ್ಷರತೆಯ ಕಲಿಕೆಯ ಸ್ಥಳಗಳನ್ನು ಪರಿವರ್ತಿಸುವುದು; ಅವಕಾಶಗಳು ಮತ್ತು ಸಾಧ್ಯತೆಗಳನ್ನು ಅನ್ವೇಷಿಸುವುದು

ಸಾಕ್ಷರತೆಯ ಅಂಕಿ-ಅಂಶಗಳು ಹೀಗಿವೆ: ವಿಶ್ವಸಂಸ್ಥೆ ನೀಡಿರುವ ಅಂಕಿ - ಅಂಶಗಳ ಪ್ರಕಾರ, ಜಗತ್ತಿನಲ್ಲಿ ಕೇವಲ ನಾಲ್ಕು ಶತಕೋಟಿ ಜನರು ಮಾತ್ರ ಸಾಕ್ಷರರಾಗಿದ್ದಾರೆ. ಇಡೀ ಪ್ರಪಂಚದಲ್ಲಿ ಪ್ರತಿ 5 ವಯಸ್ಕರಲ್ಲಿ ಒಬ್ಬರು ಇನ್ನೂ ಅನಕ್ಷರಸ್ಥರು ಎಂದು ಹೇಳಲಾಗುತ್ತದೆ.

ನಮ್ಮ ದೇಶಕ್ಕೆ ಸಂಬಂಧಿಸಿದಂತೆ 2018ರಲ್ಲಿ ಬಿಡುಗಡೆಯಾದ ಎಂಹೆಚ್​​ಆರ್​ಡಿಯ ಶೈಕ್ಷಣಿಕ ಅಂಕಿ - ಅಂಶಗಳ ವರದಿಯ ಪ್ರಕಾರ ಭಾರತದ ಸಾಕ್ಷರತೆಯ ಪ್ರಮಾಣವು ಶೇ.69.1ರಷ್ಟಾಗಿದೆ. ಗ್ರಾಮೀಣ ಭಾರತದಲ್ಲಿ ಸಾಕ್ಷರತೆಯ ಪ್ರಮಾಣವು ಶೇ.64.7ರಷ್ಟು ಆಗಿದ್ದರೆ, ಇದರಲ್ಲಿ ಮಹಿಳೆಯರ ಸಾಕ್ಷರತೆಯ ಪ್ರಮಾಣವು ಶೇ.56.8 ಮತ್ತು ಪುರುಷರ ಸಾಕ್ಷರತೆಯು ಶೇ.72.3ರಷ್ಟಾಗಿದೆ.

ನಗರ ಭಾರತದಲ್ಲಿ ಸಾಕ್ಷರತೆಯ ಪ್ರಮಾಣವು 79.5 ಪ್ರತಿಶತದಷ್ಟಿದೆ. ಶೇ.74.8ರಷ್ಟು ಮಹಿಳೆಯರು ವಿದ್ಯಾವಂತರು ಹಾಗೂ ಶೇ.83.7ರಷ್ಟು ಪುರುಷರು ವಿದ್ಯಾವಂತರಾಗಿದ್ದಾರೆ. ದೇಶದಲ್ಲೇ ಅತಿ ಹೆಚ್ಚು ಸಾಕ್ಷರತೆ ಹೊಂದಿರುವ ರಾಜ್ಯ ಕೇರಳವಾಗಿದ್ದರೆ ಮತ್ತು ಕಡಿಮೆ ಸಾಕ್ಷರತೆ ಹೊಂದಿರುವ ರಾಜ್ಯ ಬಿಹಾರವಾಗಿದೆ. ಉತ್ತರ ಪ್ರದೇಶವು ಕಡಿಮೆ ಸಾಕ್ಷರತೆ ಹೊಂದಿರುವ ಐದು ರಾಜ್ಯಗಳ ಪೈಕಿ ಒಂದಾಗಿದೆ.

ಸಾಕ್ಷರತೆಯ ಮೇಲಿನ ಪರಿಣಾಮಗಳು: ವಿವಿಧ ದೇಶಗಳಲ್ಲಿ ಸಾಕ್ಷರತೆಯ ಮೇಲೆ ಅನೇಕ ಪರಿಣಾಮ ಬೀರಿವೆ ಎಂದು ನಂಬಲಾಗಿದೆ. ಭಾರತದ ಮಟ್ಟಿಗೆ ಹೇಳುವುದಾದರೆ ಬಡತನ, ಶಾಲೆಗಳ ಕೊರತೆ, ವಿದ್ಯಾರ್ಥಿ ಮತ್ತು ಶಿಕ್ಷಕರ ನಡುವಿನ ಅನುಪಾತ ಹೆಚ್ಚಳ, ಜಾತೀಯತೆ, ಶಿಕ್ಷಣದಲ್ಲಿನ ಭ್ರಷ್ಟಾಚಾರ, ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ಮತ್ತು ಇತರ ಅಪರಾಧ ಘಟನೆಗಳು ಕಡಿಮೆ ಸಾಕ್ಷರತೆಗೆ ಮುಖ್ಯ ಕಾರಣಗಳಾಗಿವೆ ಎಂದು ಹೇಳಲಾಗುತ್ತದೆ.

ಯುನೆಸ್ಕೋ ಸಾಕ್ಷರತಾ ಪ್ರಶಸ್ತಿಗಳು 2022: ಯುನೆಸ್ಕೋ ಪ್ರತಿ ವರ್ಷ ಸಾಕ್ಷರತೆಗಾಗಿ ಉತ್ತಮ ಕೆಲಸ ಮಾಡುವ ಜನರು ಮತ್ತು ಸಂಸ್ಥೆಗಳನ್ನು ಗೌರವಿಸುತ್ತದೆ. ಇದಕ್ಕಾಗಿ ಯುನೆಸ್ಕೋ ಕಿಂಗ್ ಸೆಜಾಂಗ್ ಸಾಕ್ಷರತಾ ಪ್ರಶಸ್ತಿ ಮತ್ತು ಯುನೆಸ್ಕೋ ಕನ್ಫ್ಯೂಷಿಯಸ್ ಸಾಕ್ಷರತಾ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಯುನೆಸ್ಕೋ ಕಿಂಗ್ ಸೆಜಾಂಗ್ ಸಾಕ್ಷರತಾ ಪ್ರಶಸ್ತಿ 2022 (UNESCO King Sejong Literacy Prize 2022) ಈ ಬಾರಿ ಮೂರು ಸಂಸ್ಥೆಗಳಿಗೆ ನೀಡಲಾಗಿದೆ. 1. ಯುನೈಟೆಡ್ ಕಿಂಗ್‌ಡಮ್‌ನ ಸ್ಥಳೀಯ ವಿಜ್ಞಾನಿ ಸಂಸ್ಥೆ ಹಾಗೂ 2. ಒಡಿಶಾದ ಕಳಿಂಗ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ ಹಾಗೂ 3. ಯುಎಇನ ಮದರಸಾ ಇ-ಲರ್ನಿಂಗ್ ವೇದಿಕೆಯಾದ ಮದರಸಾ ಅರೇಬಿಕ್ ಲೆಸನ್ಸ್ ಸಂಸ್ಥೆ ಪ್ರಶಸ್ತಿ ಪಡೆದಿದೆ.

ಇದಲ್ಲದೆ, ಯುನೆಸ್ಕೋ ಕನ್ಫ್ಯೂಷಿಯಸ್ ಸಾಕ್ಷರತಾ ಪ್ರಶಸ್ತಿ 2022 (UNESCO Confucius Prize for Literacy) ಕೂಡ ಮೂರು ಸಂಸ್ಥೆಗಳಿಗೆ ನೀಡಲಾಗಿದೆ 1. ಬ್ರೆಜಿಲ್‌ನ ಇನ್‌ಸ್ಟಿಟ್ಯೂಟೊ ಇನ್‌ಕ್ಲುಯರ್ ಹಾಗೂ 2. ಮಲೇಷ್ಯಾದ ಸರವಾಕ್ ಸ್ಟೇಟ್ ಲೈಬ್ರರಿ ಹಾಗೂ 3. ದಕ್ಷಿಣ ಆಫ್ರಿಕಾದ ಮೊಲ್ಟೆನೊ ಇನ್‌ಸ್ಟಿಟ್ಯೂಟ್ ಫಾರ್ ಲಾಂಗ್ವೇಜ್ ಅಂಡ್ ಲಿಟರಸಿ ಸಂಸ್ಥೆ ಪ್ರಶಸ್ತಿಗೆ ಭಾಜನವಾಗಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.