ETV Bharat / bharat

ಕ್ರಿಪ್ಟೊ ಕರೆನ್ಸಿ ಅಪಾಯ ತಡೆಗೆ ಒಗ್ಗಟ್ಟಾದ ವಿಶ್ವನಾಯಕರು; ಭಾರತದ ನಿಲುವಿಗೆ ಜಿ20 ಅನುಮೋದನೆ - ಐಎಂಎಫ್ ಮತ್ತು ಎಫ್ಎಸ್​ಬಿಗಳು ಕ್ರಿಪ್ಟೋ ಬಗ್ಗೆ

ಕ್ರಿಪ್ಟೊ ಕರೆನ್ಸಿಗಳ ನಿಯಂತ್ರಣಕ್ಕಾಗಿ ಜಾಗತಿಕ ಮಟ್ಟದಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ ಎಂದು ನವದೆಹಲಿಯ ಜಿ20 ಶೃಂಗಸಭೆಯಲ್ಲಿ ವಿಶ್ವ ನಾಯಕರು ಪ್ರತಿಪಾದಿಸಿದ್ದಾರೆ.

G-20 leaders vow to closely monitor risks

author img

By ETV Bharat Karnataka Team

Published : Sep 10, 2023, 12:56 PM IST

ನವದೆಹಲಿ: ಕ್ರಿಪ್ಟೋ ಸ್ವತ್ತುಗಳನ್ನು ನಿಯಂತ್ರಿಸುವುದಕ್ಕಾಗಿ ಸ್ಥಾಪಿಸಲಾದ ಹಣಕಾಸು ಸ್ಥಿರತೆ ಮಂಡಳಿಯ (ಎಫ್ಎಸ್​ಬಿ) (Financial Stability Board -FSB) ಉನ್ನತ ಮಟ್ಟದ ಶಿಫಾರಸುಗಳನ್ನು ಅನುಮೋದಿಸಲಾಗಿದೆ ಮತ್ತು ಕ್ರಿಪ್ಟೋ ವ್ಯವಸ್ಥೆಯು ವೇಗವಾಗಿ ಬೆಳವಣಿಗೆ ಹೊಂದುವುದರಿಂದ ಉಂಟಾಗಬಹುದಾದ ಅಪಾಯಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸಲಾಗಿದೆ ಎಂದು ನವದೆಹಲಿ ಜಿ 20 ಶೃಂಗಸಭೆಯ ಒಪ್ಪಂದವು ಪ್ರತಿಪಾದಿಸಿದೆ. "ನಿಯಂತ್ರಕ ಸಮಸ್ಯೆಯನ್ನು ನಿವಾರಿಸಲು ಜಾಗತಿಕವಾಗಿ ಈ ಶಿಫಾರಸುಗಳ ಪರಿಣಾಮಕಾರಿ ಮತ್ತು ಸಮಯೋಚಿತ ಅನುಷ್ಠಾನವನ್ನು ಜಾಗತಿಕವಾಗಿ ಉತ್ತೇಜಿಸಲು ನಾವು ಎಫ್ಎಸ್​ಬಿ ಮತ್ತು ಎಸ್ಎಸ್​ಬಿಗಳಿಗೆ ಮನವಿ ಮಾಡುತ್ತಿದ್ದೇವೆ" ಎಂದು ದೆಹಲಿ ಘೋಷಣೆಯ ದಾಖಲೆ ತಿಳಿಸಿದೆ.

ನವದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆ ಸಭೆಗೆ ಎರಡು ದಿನಗಳ ಮೊದಲು, ಐಎಂಎಫ್ ಮತ್ತು ಎಫ್ಎಸ್​ಬಿಗಳು ಕ್ರಿಪ್ಟೋ ಬಗ್ಗೆ ಒಂದು ವರದಿಯನ್ನು ಹೊರತಂದಿದ್ದವು. ಇದು ಸ್ಥೂಲ ಆರ್ಥಿಕ ಮತ್ತು ಹಣಕಾಸು ಸ್ಥಿರತೆಗೆ ಕ್ರಿಪ್ಟೋ-ಸ್ವತ್ತುಗಳ ಅಪಾಯಗಳನ್ನು ಪರಿಹರಿಸಲು ಕ್ರಿಪ್ಟೋ-ಸ್ವತ್ತುಗಳಿಗೆ ಸಮಗ್ರ ನೀತಿ ಮತ್ತು ನಿಯಂತ್ರಕ ಪ್ರತಿಕ್ರಿಯೆ ಅಗತ್ಯ ಎಂದು ಹೇಳಿದೆ. ಭಾರತೀಯ ಜಿ20 ಪ್ರೆಸಿಡೆನ್ಸಿಯ ಕೋರಿಕೆಯ ಮೇರೆಗೆ ಈ ವರದಿಯನ್ನು ಸಿದ್ಧಪಡಿಸಲಾಗಿದೆ. ಕ್ರಿಪ್ಟೋಕರೆನ್ಸಿಗಳನ್ನು ನಿಷೇಧಿಸುವ ಯಾವುದೇ ಶಾಸನವು ಅಪಾಯಗಳು ಮತ್ತು ಪ್ರಯೋಜನಗಳ ಮೌಲ್ಯಮಾಪನದಲ್ಲಿ ಗಮನಾರ್ಹ ಅಂತರರಾಷ್ಟ್ರೀಯ ಸಹಯೋಗದ ನಂತರವೇ ಪರಿಣಾಮಕಾರಿಯಾಗಿರುತ್ತದೆ ಎಂಬುದು ಕ್ರಿಪ್ಟೋ ಬಗ್ಗೆ ಭಾರತದ ನಿಲುವಾಗಿದೆ.

ಕ್ರಿಪ್ಟೋ ಸ್ವತ್ತುಗಳು ಪ್ರಸ್ತುತ ಭಾರತದಲ್ಲಿ ಅನಿಯಂತ್ರಿತವಾಗಿವೆ. ಸರ್ಕಾರವು ಕ್ರಿಪ್ಟೋ ಎಕ್ಸ್​ಚೇಂಜ್​ಗಳನ್ನು ನೋಂದಾಯಿಸಿಕೊಳ್ಳುತ್ತಿಲ್ಲ ಮತ್ತು ವ್ಯಾಖ್ಯಾನದ ಪ್ರಕಾರ ಕ್ರಿಪ್ಟೋ ಸ್ವತ್ತುಗಳು ಗಡಿರಹಿತವಾಗಿವೆ ಮತ್ತು ಇವುಗಳ ನಿಯಂತ್ರಣಕ್ಕೆ ಅಂತರರಾಷ್ಟ್ರೀಯ ಸಹಯೋಗ ಅಗತ್ಯವಿದೆ ಎಂದು ಭಾರತ ಸರ್ಕಾರ ಪ್ರತಿಪಾದಿಸುತ್ತಿದೆ.

ಕ್ರಿಪ್ಟೋ ಸ್ವತ್ತುಗಳು ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಅಸ್ತಿತ್ವದಲ್ಲಿವೆ ಮತ್ತು ಗಮನಾರ್ಹ ಏರಿಳಿತಗಳನ್ನು ಕಂಡಿವೆ. ಏರಿಳಿತಗಳ ಜೊತೆಗೆ ಕ್ರಿಪ್ಟೋ ಕರೆನ್ಸಿಗಳ ಚಟುವಟಿಕೆಗಳು ಮತ್ತಷ್ಟು ಸಂಕೀರ್ಣವಾಗಿವೆ. ಕ್ರಿಪ್ಟೋ ಸ್ವತ್ತುಗಳ ವ್ಯಾಪಕ ಅಳವಡಿಕೆಯು ವಿತ್ತೀಯ ನೀತಿಯ ಪರಿಣಾಮಗಳನ್ನು ದುರ್ಬಲಗೊಳಿಸುತ್ತದೆ, ಬಂಡವಾಳ ಹರಿವು ನಿರ್ವಹಣಾ ಕ್ರಮಗಳನ್ನು ಹಾಳು ಮಾಡುತ್ತದೆ, ಹಣಕಾಸಿನ ಅಪಾಯಗಳನ್ನು ಹೆಚ್ಚಿಸುತ್ತದೆ, ನೈಜ ಆರ್ಥಿಕತೆಗೆ ಹಣಕಾಸು ಒದಗಿಸಲು ಲಭ್ಯವಿರುವ ಸಂಪನ್ಮೂಲಗಳನ್ನು ಬೇರೆಡೆಗೆ ತಿರುಗಿಸುತ್ತದೆ ಮತ್ತು ಜಾಗತಿಕ ಹಣಕಾಸು ಸ್ಥಿರತೆಗೆ ಬೆದರಿಕೆ ಹಾಕುತ್ತದೆ ಎಂದು ಅದು ಭಾರತ ಹೇಳಿದೆ.

ಇಂತಹ ಅಪಾಯಗಳು ಬೆಲೆಗಳಲ್ಲಿ ಸ್ಥಿರತೆ ಕಾಪಾಡಿಕೊಳ್ಳುವುದನ್ನು ಹೆಚ್ಚು ಕಷ್ಟಕರವಾಗಿಸಬಹುದು, ಹಣಕಾಸಿನ ಹರಿವನ್ನು ಅಸ್ಥಿರಗೊಳಿಸಬಹುದು ಮತ್ತು ಹಣಕಾಸಿನ ಸಂಪನ್ಮೂಲಗಳನ್ನು ಒತ್ತಡಕ್ಕೆ ಸಿಲುಕಿಸಬಹುದು ಎಂದು ಅದು ಎಚ್ಚರಿಸಿದೆ. ಆ ಹಿನ್ನೆಲೆಯಲ್ಲಿ ಸಮಗ್ರ ನಿಯಂತ್ರಕ ಮತ್ತು ಮೇಲ್ವಿಚಾರಣಾ ಕ್ರಮಗಳನ್ನು ಕೈಗೊಳ್ಳುವಂತೆ ವರದಿ ತಿಳಿಸಿದೆ. ಇದು ಸ್ಥೂಲ ಆರ್ಥಿಕ ಮತ್ತು ಹಣಕಾಸು ಸ್ಥಿರತೆಯ ಅಪಾಯಗಳನ್ನು ಪರಿಹರಿಸಲು ಮೂಲಾಧಾರವಾಗಿರಬೇಕು. ಕ್ರಿಪ್ಟೊಗಳಿಂದ ಎದುರಾಗಬಹುದಾದ ಅಪಾಯಗಳು ಸ್ಪಷ್ಟವಾಗಿದ್ದು, ಅವುಗಳ ನಿಯಂತ್ರಣಕ್ಕೆ ಸೂಕ್ತ ನೀತಿಗಳನ್ನು ಹೊಂದುವುದು ಅಗತ್ಯ ಎಂದು ಅದು ಹೇಳಿದೆ.

ಇದನ್ನೂ ಓದಿ : ಕರಗಲಿವೆ ಹಿಮನದಿಗಳು, ಏರಿಕೆಯಾಗಲಿದೆ ಸಮುದ್ರ ಮಟ್ಟ: ವಿಶ್ವಕ್ಕೆ ವಿಜ್ಞಾನಿಗಳ ಎಚ್ಚರಿಕೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.