ETV Bharat / bharat

ವರ್ಲ್ಡ್​ ಇಮ್ಯುನೈಸೇಷನ್ ವೀಕ್ 2021: ದೂರವಾದ ನಮ್ಮನ್ನು ಲಸಿಕೆಗಳು ಹತ್ತಿರವಾಗಿಸುತ್ತವೆ

author img

By

Published : Apr 26, 2021, 8:57 PM IST

ವರ್ಲ್ಡ್​ ಇಮ್ಯುನೈಸೇಷನ್ ವೀಕ್ 2021ರ ವರ್ಷವನ್ನು ‘ಲಸಿಕೆಗಳು ನಮ್ಮನ್ನು ಹತ್ತಿರವಾಗಿಸುತ್ತವೆ’ ಎಂಬ ವ್ಯಾಖ್ಯದಡಿ ಆಚರಿಸಲಾಗುತ್ತಿದೆ. ಕೋವಿಡ್ ಸೋಂಕಿನ ಸಾಮಾಜಿಕ ಅಂತರದ ಜನರನ್ನು ಒಟ್ಟುಗೂಡಿಸುವಲ್ಲಿ ವ್ಯಾಕ್ಸಿನೇಷನ್‌ನ ಮಹತ್ವ ಉತ್ತೇಜಿಸುವ ಹಾಗೂ ಜೀವನದುದ್ದಕ್ಕೂ ಎಲ್ಲರ ಆರೋಗ್ಯ ಮತ್ತು ಯೋಗಕ್ಷೇಮ ಸುಧಾರಿಸಲು ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವಂತಹ ಸಂದೇಶ ಸಾರಲಾಗುತ್ತಿದೆ.

ವರ್ಲ್ಡ್​ ಇಮ್ಯುನೈಸೇಷನ್ ವೀಕ್
ವರ್ಲ್ಡ್​ ಇಮ್ಯುನೈಸೇಷನ್ ವೀಕ್

ಪ್ರತಿ ವರ್ಷ ಏಪ್ರಿಲ್ ಕೊನೆಯ ವಾರದಲ್ಲಿ (24-30) ವಿಶ್ವ ರೋಗನಿರೋಧಕ ವಾರವಾಗಿ ಆಚರಿಸಿಕೊಂಡು ಬರಲಾಗುತ್ತದೆ. ಎಲ್ಲಾ ವಯಸ್ಸಿನ ಜನರನ್ನು ರೋಗದ ವಿರುದ್ಧ ರಕ್ಷಿಸಲು ಲಸಿಕೆಗಳ ಬಳಕೆ ಉತ್ತೇಜಿಸುವ ಉದ್ದೇಶದಿಂದ ಇಂತಹ ಕಾರ್ಯ ಕ್ರಮ ಜಗತಿನಾದ್ಯಂತೆ ನಡೆಯುತ್ತಿದೆ.

ವಿಶ್ವ ಇಮ್ಯುನೈಸೇಷನ್ ವೀಕ್ 2021ರ ವರ್ಷವನ್ನು ‘ಲಸಿಕೆಗಳು ನಮ್ಮನ್ನು ಹತ್ತಿರವಾಗಿಸುತ್ತವೆ’ ಎಂಬ ವ್ಯಾಖ್ಯದಡಿ ಆಚರಿಸಲಾಗುತ್ತಿದೆ. ಕೋವಿಡ್ ಸೋಂಕಿನ ಸಾಮಾಜಿಕ ಅಂತರದ ಜನರನ್ನು ಒಟ್ಟುಗೂಡಿಸುವಲ್ಲಿ ವ್ಯಾಕ್ಸಿನೇಷನ್‌ನ ಮಹತ್ವ ಉತ್ತೇಜಿಸುವ ಹಾಗೂ ಜೀವನದುದ್ದಕ್ಕೂ ಎಲ್ಲರ ಆರೋಗ್ಯ ಮತ್ತು ಯೋಗಕ್ಷೇಮ ಸುಧಾರಿಸಲು ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವಂತಹ ಸಂದೇಶ ಸಾರಲಾಗುತ್ತಿದೆ.

ಲಸಿಕೆ
ಲಸಿಕೆ

'ಲಸಿಕೆಗಳು ನಮ್ಮನ್ನು ಹತ್ತಿರವಾಗಿಸಿವೆ ಹಾಗೂ ಮತ್ತೆ ನಮ್ಮನ್ನು ಸಮೀಪಕ್ಕೆ ಕರೆ ತರಲಿವೆ'

200 ವರ್ಷಗಳಿಂದ ಲಸಿಕೆಗಳು ಜೀವಗಳಿಗೆ ಅಪಾಯಕಾರಿ ಹಾಗೂ ನಮ್ಮ ಬೆಳವಣಿಗೆಗೆ ಅಡಿಯಾದ ಕಾಯಿಲೆಗಳಿಂದ ನಮ್ಮನ್ನು ರಕ್ಷಿಸಿವೆ. ಅವುಗಳ ಸಹಾಯದಿಂದಾಗಿ ಸಿಡುಬು ಮತ್ತು ಪೋಲಿಯೊದಂತಹ ರೋಗಗಳನ್ನು ಗೆದ್ದಿದ್ದೇವೆ. ಈ ರೋಗಗಳು ನೂರಾರು ಮಿಲಿಯನ್ ಜೀವಗಳನ್ನು ಬಲಿತೆಗೆದುಕೊಂಡಿವೆ. ಲಸಿಕೆಗಳು ಸಾವನ್ನೂ ದೂರ ತಳ್ಳಿ ನಾವು ಒಟ್ಟಿಗೆ ಬಾಳುವ ಪ್ರಪಂಚದ ಹಾದಿಯಲ್ಲಿ ಮುನ್ನಡೆಯಲು ನೆರವಾಗಿವೆ.

ಲಸಿಕೆಗಳು ಸದಾ ಮುಂದುವರಿಯುತ್ತಲೇ ಇರುತ್ತವೆ. ಟಿಬಿ ಮತ್ತು ಗರ್ಭಕಂಠಕದ ಕ್ಯಾನ್ಸರ್​ನಿಂದ ಮುಕ್ತವಾದ ಜಗತ್ತಿಗೆ ನಮ್ಮನ್ನು ಹತ್ತಿರ ತರಲಿವೆ. ದಡಾರದಂತಹ ಬಾಲ್ಯದ ಕಾಯಿಲೆಗಳಿಂದ ಬಳಲುತ್ತಿದ್ದವರನ್ನು ಕಾಪಾಡಲಿವೆ. ಹೂಡಿಕೆ ಮತ್ತು ನವಿನ ಸಂಶೋಧನೆಯು ಲಸಿಕೆ ಅಭಿವೃದ್ಧಿಗೆ ಅದ್ಭುತವಾದ ವಿಧಾನಗಳನ್ನು ಶಕ್ತಗೊಳಿಸುತ್ತಿದೆ. ಇದು ರೋಗನಿರೋಧಕ ವಿಜ್ಞಾನವನ್ನು ಶಾಶ್ವತವಾಗಿ ಬದಲಾಯಿಸುತ್ತಿದೆ. ಆರೋಗ್ಯಕರ ಭವಿಷ್ಯದತ್ತ ನಮ್ಮನ್ನು ಹತ್ತಿರಕ್ಕೆ ತರುತ್ತದೆ.

ಲಸಿಕೆ
ಲಸಿಕೆ

ಭಾರತದಲ್ಲಿ ಯುನಿವರ್ಸಲ್ ಇಮ್ಯುನೈಸೇಷನ್ ಪ್ರೋಗ್ರಾಂ: ಭಾರತದಲ್ಲಿ ರೋಗನಿರೋಧಕ ಕಾರ್ಯಕ್ರಮವನ್ನು 1978ರಲ್ಲಿ ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ‘ಯುನಿವರ್ಸಲ್​ ಪ್ರೋಗ್ರಾಂ ಆಫ್ ಇಮ್ಯುನೈಸೇಷನ್’ (ಇಪಿಐ) ಪರಿಚಯಿಸಿತು. 1985ರಲ್ಲಿ ಈ ಕಾರ್ಯಕ್ರಮವನ್ನು ‘ಯುನಿವರ್ಸಲ್ ಇಮ್ಯುನೈಸೇಷನ್ ಪ್ರೋಗ್ರಾಂ’ (ಯುಐಪಿ) ಎಂದು ಮಾರ್ಪಡಿಸಿತು. 1989-90ರ ವೇಳೆಗೆ ದೇಶದ ಎಲ್ಲ ಜಿಲ್ಲೆಗಳನ್ನು ಒಳಗೊಳ್ಳಲು ಹಂತಹಂತವಾಗಿ ಜಾರಿಗೆ ತರಲು ವಿಶ್ವದ ಅತಿದೊಡ್ಡ ಆರೋಗ್ಯ ಕಾರ್ಯಕ್ರಮಗಳಲ್ಲಿ ಇದು ಕೂಡ ಒಂದಾಗಿದೆ.

ಲಸಿಕೆ
ಲಸಿಕೆ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಭಾರತ ಸರ್ಕಾರ ಯುನಿವರ್ಸಲ್ ಇಮ್ಯುನೈಸೇನ್ ಕಾರ್ಯಕ್ರಮದ ಮೂಲಕ ಶಿಶುಗಳು, ಮಕ್ಕಳು ಮತ್ತು ಗರ್ಭಿಣಿ ಮಹಿಳೆಯರಿಗೆ ಹಲವು ಲಸಿಕೆಗಳನ್ನು ಒದಗಿಸುತ್ತದೆ.

ರೋಗ ನಿರೋಧಕತೆ: ರೋಗನಿರೋಧಕತೆಯು ವ್ಯಕ್ತಿಯನ್ನು ಸಾಂಕ್ರಾಮಿಕ ಕಾಯಿಲೆ ವಿರುದ್ಧ ಹೋರಾಡಲು ಪ್ರತಿ ಕಾಯಗಳನ್ನು ಸೃಷ್ಟಿಸುವ ಪ್ರಕ್ರಿಯೆಯಾಗಿದೆ. ಸಾಮಾನ್ಯವಾಗಿ ಇದನ್ನು ಲಸಿಕೆ ನೀಡಿಕೆ ಮೂಲಕ ಅಭಿವೃದ್ಧಿಪಡಿಸಲಾಗುತ್ತದೆ. ಲಸಿಕೆ ಹಾಕಿಸಿಕೊಂಡ ನಂತರ ಸೋಂಕು ಅಥವಾ ರೋಗದಿಂದ ವ್ಯಕ್ತಿಯನ್ನು ರಕ್ಷಿಸಲು ದೇಹವು ತಾನೇ ರೋಗನಿರೋಧಕ ಶಕ್ತಿ ಉತ್ತೇಜಿಸಿಕೊಳ್ಳುತ್ತದೆ.

ಮಿಷನ್ ಇಂದ್ರಧನುಷ್: ಮಿಷನ್ ಇಂದ್ರಧನುಷ್ (ಎಂಐ) 2014ರ ಡಿಸೆಂಬರ್‌ನಲ್ಲಿ ಪ್ರಾರಂಭಿಸಲಾಯಿತು. ಮಕ್ಕಳಿಗೆ ಸಂಪೂರ್ಣ ರೋಗನಿರೋಧಕ ವ್ಯಾಪ್ತಿಯನ್ನು ಶೇ 90ಕ್ಕೆ ಹೆಚ್ಚಿಸುವ ಗುರಿ ಹೊಂದಿದೆ.

ಯುಐಪಿ ಅಡಿಯಲ್ಲಿ ವ್ಯಾಕ್ಸಿನೇಷನ್ ಮೂಲಕ ರಕ್ಷಿಸಲ್ಪಟ್ಟ ರೋಗಗಳು

1. ಡಿಫ್ತಿರಿಯಾ

2. ಪೆರ್ಟುಸಿಸ್

3. ಟೆಟನಸ್

4. ಪೋಲಿಯೊ

5. ಕ್ಷಯ

6. ದಡಾರ

7. ಹೆಪಟೈಟಿಸ್ ಬಿ

8. ಜಪಾನೀಸ್ ಎನ್ಸೆಫಾಲಿಟಿಸ್ (ಮೆದುಳಿನ ಜ್ವರ)

9. ಹೆಮೋಫಿಲಸ್ ಇನ್​ಫ್ಲ್ಯಯೆನ್ಸನಿಂದ ಉಂಟಾಗುವ ಮೆನಿಂಜೈಟಿಸ್ ಮತ್ತು ನ್ಯುಮೋನಿಯಾ

ಕೊರೊನಾ ವೈರಸ್ ವಿರುದ್ಧ ರೋಗನಿರೋಧಕ ಶಕ್ತಿ: ಕೊರೊನಾ ವೈರಸ್ ಹಬ್ಬುತ್ತಿರುವುದರಿಂದ ಇಡೀ ಜಗತ್ತು ಸಾಂಕ್ರಾಮಿಕ ರೋಗದ ವಿರುದ್ಧ ಸೆಣಸಾಡುತ್ತಿದೆ. ರೋಗ ನಿರೋಧಕತೆಯು ಸಾಂಕ್ರಾಮಿಕ ರೋಗವನ್ನು ನಿಭಾಯಿಸುವ ಒಂದು ಮಾರ್ಗವಾಗಿದೆ. ಸಾಂಕ್ರಾಮಿಕ ರೋಗದ ಒಂದು ವರ್ಷದೊಳಗೆ ಹಲವು ರಾಷ್ಟ್ರಗಳು ವೈರಸ್ ವಿರುದ್ಧ ಅನೇಕ ಲಸಿಕೆಗಳನ್ನು ಅಭಿವೃದ್ಧಿಪಡಿಸಿವೆ. ರೋಗನಿರೋಧಕ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ. ಈ ತನಕ ಕೆಲವು ಲಸಿಕೆಗಳನ್ನು ಅನೇಕ ದೇಶಗಳಲ್ಲಿ ಜನರಿಗೆ ನೀಡಲಾಗುತ್ತಿದೆ.

ಸಿಡಿಎಸ್​​ಸಿಒ ಅನುಮೋದಿಸಿದ ಎರಡು ಲಸಿಕೆಗಳಿಂದಾಗಿ ಭಾರತವು 2021ರ ಜನವರಿ 16ರಿಂದ ವಿಶ್ವದ ಅತಿದೊಡ್ಡ ರೋಗನಿರೋಧಕ ಕಾರ್ಯಕ್ರಮ ಪ್ರಾರಂಭಿಸಿದೆ. ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ (ಕೋವಿಶೀಲ್ಡ್) ಮತ್ತು ಭಾರತೀಯ ನಿರ್ಮಿತ (ಕೊವಾಕ್ಸಿನ್) ಪ್ರಮುಖ ಲಸಿಕೆಯಾಗಿವೆ.

ಭಾರತದಲ್ಲಿ ತುರ್ತು ಬಳಕೆಗೆ ರಷ್ಯನ್ ನಿರ್ಮಿತ ಸ್ಪುಟ್ನಿಕ್ ವಿ ಲಸಿಕೆಗೆ ಅನುಮೋದನೆ ನೀಡಲಾಗಿದೆ. ಆರೋಗ್ಯ ಸಚಿವಾಲಯದ ಪ್ರಕಾರ ಏಪ್ರಿಲ್ 23ರ ತನಕ 13,54,78,420 ಲಸಿಕೆ ಡೋಸ್ ನೀಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.