ETV Bharat / bharat

World father's day: 'ನೀನು ಮುಗಿಲೂ, ಹೆಗಲೂ..' ಮಕ್ಕಳನ್ನು ಹೆಗಲ ಮೇಲೆ ಕುಳ್ಳಿರಿಸಿ ಪ್ರಪಂಚ ತೋರಿಸುವ ಅಪ್ಪ! - Sonora Smart Dad

ಇಂದು ವಿಶ್ವ ಅಪ್ಪಂದಿರ ದಿನ. ಈ ದಿನದ ಇತಿಹಾಸ ಅರಿಯೋಣ.

world fathers day
ವಿಶ್ವ ಅಪ್ಪಂದಿರ ದಿನ
author img

By

Published : Jun 18, 2023, 9:00 AM IST

ತನ್ನ ಮಕ್ಕಳನ್ನು ಹೆಗಲ ಮೇಲೆ ಕೂರಿಸಿಕೊಂಡು ಪ್ರಪಂಚ ತೋರಿಸುವ ಪ್ರೀತಿಯ ಅಪ್ಪನಿಗೆ ಇಂದು ವಿಶ್ವ ಅಪ್ಪಂದಿರ ದಿನದ ಶುಭಾಶಯಗಳು. ಇದು ಕೇವಲ ಅಪ್ಪನಿಗೆ ಶುಭಕೋರುವ ದಿನ ಮಾತ್ರವೇ ಅಲ್ಲ, ಅವರ ತ್ಯಾಗವನ್ನೂ ಸ್ಮರಿಸುವ ಸುದಿನ. ತಾಯಿಯ ಮಡಿಲಿನಷ್ಟೇ ವಾತ್ಸಲ್ಯ, ಮಮತೆ ತೋರುವ ಅಪ್ಪನ ಹೆಗಲು ಪ್ರತಿ ಮಗುವಿಗೂ ಸಿಂಹಾಸನವೇ. ಮಗುವಿನ ಜೀವನದಲ್ಲಿ ತಾಯಿಯೊಂದಿಗೆ, ತಂದೆಯ ಪಾತ್ರವು ಅಷ್ಟೇ ಮಹತ್ವದ್ದು. ತಂದೆಯ ತ್ಯಾಗವನ್ನು ಸ್ಮರಿಸುವ ಸಲುವಾಗಿ ಪ್ರಪಂಚದ ಒಟ್ಟು 70 ದೇಶಗಳು ಅಪ್ಪಂದಿರ ದಿನ ಆಚರಿಸುತ್ತಾರೆ.

ತಂದೆಯ ದಿನದ ಹುಟ್ಟು ಹೇಗೆ?: ಫಾದರ್ಸ್​ ಡೇ ಆಚರಣೆ ಅಮೆರಿಕದಲ್ಲಿ 1909ರಲ್ಲಿ ಮೊದಲ ಬಾರಿಗೆ ಅನಧಿಕೃತವಾಗಿ ಪ್ರಾರಂಭವಾಗಿತ್ತು. ಆದರೆ ಅಧಿಕೃತವಾಗಿ 1910ರಲ್ಲಿ ಆಚರಣೆ ಶುರುವಾಗಿದೆ. ಈ ದಿನಾಚರಣೆಯ ದಿನದ ಹಿನ್ನೆಲೆಯ ಕುರಿತು ಹಲವಾರು ತಜ್ಞರು ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಇತಿಹಾಸಕಾರರ ಪ್ರಕಾರ, ಅಪ್ಪಂದಿರ ದಿನದ ಸ್ಥಾಪಕಿ ಸೊನೊರಾ ಸ್ಮಾರ್ಟ್​ ಡಾಡ್​ ಎಂಬಾಕೆ.

ಈಕೆ 1882ರಲ್ಲಿ ಜನಿಸಿದಳು. ಇವರ ತಂದೆ ಅಮೆರಿಕನ್​ ಅಂತರ್ಯುದ್ದದಲ್ಲಿ ಪಾಲ್ಗೊಂಡ ವಿಲಿಯಂ ಜಾಕ್ಸನ್​ ಸ್ಮಾರ್ಟ್​. ಸೊನೊರಾ ತನ್ನ 16ನೇ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಳ್ಳುತ್ತಾಳೆ. ಹೀಗಾಗಿ ಕುಟುಂಬದ ಜವಾಬ್ದಾರಿ ಹೊತ್ತುಕೊಂಡು ತಂದೆಯಂದಿಗೆ ಐವರು ಸಹೋದರರನ್ನು ಸಾಕುತ್ತಾಳೆ. ಒಂದು ದಿನ ಚರ್ಚ್​ನಲ್ಲಿ ತಾಯಂದಿರ ದಿನದ ಧರ್ಮೋಪದೇಶ ಕೇಳುತ್ತಿದ್ದಾಗ, ಯಾಕೆ ಯಾರೂ ಕೂಡಾ ತಂದೆಯ ದಿನವನ್ನು ಆಚರಿಸುವುದಿಲ್ಲ ಎಂಬ ಪ್ರಶ್ನೆ ಆಕೆಯಲ್ಲಿ ಮೂಡುತ್ತದೆ. ಇದರಿಂದ ಪ್ರಪಂಚದಾದ್ಯಂತ ತಂದೆಯರನ್ನು ಗೌರವಿಸಲೇಬೇಕು ಎಂಬ ಉದ್ದೇಶದಿಂದ ತನ್ನ ತಂದೆಯ ಜನ್ಮದಿನವಾದ ಜೂನ್​ 5 ಅನ್ನು ಅಪ್ಪಂದಿರ ದಿನವನ್ನಾಗಿ ಆಚರಿಸಲು ಮುಂದಾಗುತ್ತಾಳೆ. ಇದರ ಜೊತೆಗೆ, ಅಂದಿನ ಸರ್ಕಾರವನ್ನೂ ಆಕೆ ಮನವೊಲಿಸುತ್ತಾಳೆ. ಕ್ರಮೇಣ ಈ ಆಚರಣೆ ಅಮೆರಿಕದ ತುಂಬೆಲ್ಲ ಹರಡಿಕೊಂಡಿತು.

ಆಗಿನ ಅಮೆರಿಕ ಅಧ್ಯಕ್ಷರು 1924ರಲ್ಲಿ ಜೂನ್​ 5 ರ ದಿನವನ್ನು ವಿಶ್ವಾದ್ಯಂತ ತಂದೆಯ ದಿನವೆಂದು ಘೋಷಿಸಿದರು. ತದ ನಂತರ 1966ರಲ್ಲಿ ಜೂನ್​ 5ರ ದಿನದ ಬದಲಾಗಿ ಜೂನ್​ ತಿಂಗಳ ಮೂರನೇ ಭಾನುವಾರದ ದಿನವನ್ನು ತಂದೆಯ ದಿನದ ಆಚರಣೆಯನ್ನಾಗಿ ಬದಲಾಯಿಸಲಾಯಿತು. 2023 ಅಂದ್ರೆ ಈ ವರ್ಷದ ಥೀಮ್​ 'ನಮ್ಮ ಜೀವನದ ಶ್ರೇಷ್ಠ ವೀರರನ್ನು ಸ್ಮರಣೆ' ಎಂಬುದಾಗಿದೆ. ಈ ಥೀಮ್​ ನಮ್ಮ ಜೀವನದಲ್ಲಿ ತಂದೆಯ ಪಾತ್ರ ಮತ್ತವರ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ. ಇದರ ಜೊತೆಗೆ ಪ್ರತಿ ತಂದೆಗೆ ಅವರ ಪಾತ್ರವನ್ನು ಮನದಟ್ಟು ಮಾಡುವ ಉದ್ದೇಶವನ್ನೂ ಹೊಂದಿದೆ.

ವಿಪರ್ಯಾಸವೆಂದರೆ, ಈಗ ಜಗತ್ತು ಬದಲಾಗಿದೆ. ಕೈ ಹಿಡಿದು ಬೆಳೆಸಿದ ತಂದೆ-ತಾಯಿಯ ಪ್ರೀತಿಯನ್ನು ಮರೆತು ಮಕ್ಕಳು ದೊಡ್ಡವರಾಗುತ್ತಿದ್ದಂತೆ ವೃದ್ಧಾಪ್ಯದಲ್ಲಿ ಕೈ ಬಿಡುತ್ತಿದ್ದಾರೆ. ನಮ್ಮ ಜೀವನದ ಪ್ರತಿ ಹೆಜ್ಜೆಗೂ ಬೆನ್ನೆಲುಬಾಗಿ ನಿಂತ ತಂದೆಯ ವಾತ್ಸಲ್ಯವನ್ನು, ನಾವು ಸೋತಾಗ ನಮ್ಮನ್ನು ಕೈ ಹಿಡಿದು ಮೇಲೆಬ್ಬಿಸಿದ ನಮ್ಮ ಅಪ್ಪನನ್ನು ಅವರ ಕೊನೆಗಾಲದಲ್ಲಿ ಕೈ ಬಿಡದೇ, ಅವರ ಇಳಿ ವಯಸ್ಸಿನಲ್ಲಿಯೂ ಆರೈಕೆ ಮಾಡೋಣ. ಮತ್ತೊಮ್ಮೆ ಎಲ್ಲ ಮಕ್ಕಳ ಮೊದಲ ಹೀರೋ ಆಗಿರುವ ತಂದೆಗೆ ವಿಶ್ವ ಅಪ್ಪಂದಿರ ದಿನದ ಶುಭಾಶಯಗಳು!.

ಇದನ್ನೂ ಓದಿ: 'International Day for Countering Hate Speech 2023': ಇತಿಹಾಸ, ಮಹತ್ವವೇನು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.