ETV Bharat / bharat

World Bank: ಭಾರತದ ಅಸಂಘಟಿತ ಕಾರ್ಮಿಕರ ನೆರವಿಗಾಗಿ 500 ಮಿಲಿಯನ್ ಡಾಲರ್ ಸಾಲ - ಇಂಟರ್​​ನ್ಯಾಷನಲ್ ಡೆವೆಲಪ್​ಮೆಂಟ್ ಅಸೋಸಿಯೇಷನ್

ವಿಶ್ವಬ್ಯಾಂಕ್ ನೀಡಿರುವ ಸಾಲ ಕೇಂದ್ರ ಸರ್ಕಾರ ಮತ್ತು ರಾಜ್ಯಗಳು ಅಸಂಘಟಿತ ಕಾರ್ಮಿಕರಿಗಾಗಿ ಹಮ್ಮಿಕೊಂಡಿರುವ ಯೋಜನೆಗಳನ್ನು ಸಾಮರ್ಥ್ಯವನ್ನು ಬಲಿಷ್ಠಗೊಳಿಸುತ್ತದೆ ಮತ್ತು ಸಾಮಾಜಿಕ ರಕ್ಷಣಾ ವ್ಯವಸ್ಥೆಗೆ ಸಹಕರಿಸುತ್ತದೆ ಎಂದು ವಿಶ್ವಬ್ಯಾಂಕ್ ಹೇಳಿದೆ

World Bank approves $500 million to support India’s informal workers
World Bank: ಭಾರತದ ಅಸಂಘಟಿತ ಕಾರ್ಮಿಕರ ನೆರವಿಗಾಗಿ 500 ಮಿಲಿಯನ್ ಡಾಲರ್ ಸಾಲ
author img

By

Published : Jul 1, 2021, 4:07 AM IST

ವಾಷಿಂಗ್ಟನ್, ಅಮೆರಿಕ: ಭಾರತದಲ್ಲಿ ಅಸಂಘಟಿತ ಕಾರ್ಮಿಕರಾಗಿ ದುಡಿಯುತ್ತಿರುವ ಬಹುತೇಕ ಮಂದಿ ಕೋವಿಡ್​ನಿಂದ ತತ್ತರಿಸಿದ್ದು, ಅವರಿಗಾಗಿ ಸುಮಾರು 500 ಮಿಲಿಯನ್ ಡಾಲರ್ ಸಾಲ ಮಂಜೂರು ಮಾಡಿರುವುದಾಗಿ ವಿಶ್ವಬ್ಯಾಂಕ್ ಸ್ಪಷ್ಟನೆ ನೀಡಿದೆ.

ಭಾರತದ ಕರೆನ್ಸಿಯಲ್ಲಿ ವಿಶ್ವಬ್ಯಾಂಕ್ ಮಂಜೂರು ಮಾಡಿರುವ ಸಾಲ ಸುಮಾರು 3,700 ಕೋಟಿ ರೂಪಾಯಿಗಳಿಗೂ ಹೆಚ್ಚಿರಲಿದ್ದು, ಕೊರೊನಾವನ್ನು ಮತ್ತು ಮುಂಬರುವ ಸಂಕಷ್ಟನ್ನು ಎದುರಿಸಲು ಈ ಸಾಲ ಸಹಾಯ ಮಾಡಲಿದೆ.

ಈ ಸಾಲ ಕೇಂದ್ರ ಸರ್ಕಾರ ಮತ್ತು ರಾಜ್ಯಗಳು ಅಸಂಘಟಿತ ಕಾರ್ಮಿಕರಿಗಾಗಿ ಹಮ್ಮಿಕೊಂಡಿರುವ ಯೋಜನೆಗಳನ್ನು ಸಾಮರ್ಥ್ಯವನ್ನು ಬಲಿಷ್ಠಗೊಳಿಸುತ್ತದೆ ಮತ್ತು ಸಾಮಾಜಿಕ ರಕ್ಷಣಾ ವ್ಯವಸ್ಥೆಗೆ ಸಹಕರಿಸುತ್ತದೆ ಎಂದು ವಿಶ್ವಬ್ಯಾಂಕ್ ಹೇಳಿದೆ.

ಇದನ್ನೂ ಓದಿ: Darbhanga Blast Case: ಹೈದರಾಬಾದ್​​ನಲ್ಲಿ ಇಬ್ಬರು ಭಯೋತ್ಪಾದಕ ಬ್ರದರ್ಸ್​​ ಅರೆಸ್ಟ್​​

ಈಗ ಮಂಜೂರಾಗಿರುವ 500 ಮಿಲಿಯನ್ ಡಾಲರ್​ಗಳಲ್ಲಿ 112.5 ಮಿಲಿಯನ್​ ಡಾಲರ್ ಸಾಲವನ್ನು ಇಂಟರ್​​ನ್ಯಾಷನಲ್ ಡೆವೆಲಪ್​ಮೆಂಟ್ ಅಸೋಸಿಯೇಷನ್ (ಐಡಿಎ), ಪುನರ್​ನಿರ್ಮಾಣ ಮತ್ತು ಅಭಿವೃದ್ಧಿಯ ಅಂತಾರಾಷ್ಟ್ರೀಯ ಬ್ಯಾಂಕ್ (ಐಬಿಆರ್​ಡಿ) 387.5 ಮಿಲಿಯನ್ ಡಾಲರ್ ಸಾಲ ನೀಡಲಿದೆ.

ವಿಶ್ವಬ್ಯಾಂಕ್ ಬೋರ್ಡ್​ನ ಕಾರ್ಯಕಾರಿ ನಿರ್ದೇಶಕರು ಈ ನಿರ್ಧಾರ ತಗೆದುಕೊಂಡಿದ್ದು, 18 ವರ್ಷದ ಮುಕ್ತಾಯದ ಅವಧಿಯನ್ನು ಈ ಸಾಲ ಹೊಂದಿರಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.