ETV Bharat / bharat

ತಮಿಳುನಾಡು: ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, ಓರ್ವ ಕಾರ್ಮಿಕ ಸಾವು - ಕಾರ್ಮಿಕ ಸಾವು

ತಮಿಳುನಾಡಿನ ಪಟಾಕಿ ಕಾರ್ಖಾನೆಯೊಂದರಲ್ಲಿ ಸ್ಫೋಟ ಸಂಭವಿಸಿದ್ದು ಓರ್ವ ಕಾರ್ಮಿಕ ಸಾವನ್ನಪ್ಪಿದ್ದಾರೆ.

Tamil Nadu
ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ
author img

By ETV Bharat Karnataka Team

Published : Dec 15, 2023, 3:14 PM IST

ವಿರುಧ್‌ನಗರ(ತಮಿಳುನಾಡು): ಪಟಾಕಿ ತಯಾರಿಕೆಗೆ ಕಚ್ಚಾವಸ್ತು ಸಿದ್ಧಪಡಿಸುತ್ತಿದ್ದ ಸಂದರ್ಭದಲ್ಲಿ ಸ್ಫೋಟ ಸಂಭವಿಸಿ ಕಾರ್ಮಿಕ ಮೃತಪಟ್ಟಿರುವ ಘಟನೆ ತಮಿಳುನಾಡಿನಲ್ಲಿ ಇಂದು ನಡೆದಿದೆ. ವಿರುಧ್‌ನಗರದ ಸಾತೂರು ಸಮೀಪದ ಬನೈಯಾಡಿಪಟ್ಟಿ ಗ್ರಾಮದಲ್ಲಿ ಜಯಪಾಲ್​ ಮಾಲೀಕತ್ವದ ಕಾರ್ಖಾನೆಯು ಪರವಾನಗಿ ಪಡೆದು ಕಾರ್ಯನಿರ್ವಹಿಸುತ್ತಿದೆ. ಇಲ್ಲಿ 30ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಬೆಳಿಗ್ಗೆ ಕಚ್ಚಾವಸ್ತು ಸಿದ್ಧಪಡಿಸುತ್ತಿದ್ದಾಗ ಸ್ಫೋಟ ಸಂಭವಿಸಿತು. ತೀವ್ರತೆಗೆ ಕೊಠಡಿಯೊಂದು ಧ್ವಂಸಗೊಂಡಿದೆ. ಕಂಡಿಯಾಪುರದ ಕಾರ್ಮಿಕ ಷಣ್ಮುಗರಾಜ್ (36) ಎಂಬವರು ಸ್ಥಳದಲ್ಲೇ ಅಸುನೀಗಿದ್ದಾರೆ. ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ.

ಮೃತಪಟ್ಟ ಕಾರ್ಮಿಕನ ಮೃತದೇಹವನ್ನು ಅವಶೇಷಗಳಿಂದ ಹೊರತೆಗೆದು, ಸಾತೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಟ್ರ್ಯಾಕ್ಟರ್: ಮೂವರ ಸಾವು

ಇತ್ತೀಚಿನ ಘಟನೆಗಳು: ಅಕ್ಟೋಬರ್​ನಲ್ಲಿ ಶಿವಕಾಶಿಯ ಎರಡು ಪಟಾಕಿ ಕಾರ್ಖಾನೆಗಳಲ್ಲಿ ಸ್ಫೋಟ ಸಂಭವಿಸಿ ಹತ್ತು ಮಂದಿ ಪ್ರಾಣ ಕಳೆದುಕೊಂಡಿದ್ದರು. ಹದಿನೈದು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ವಿಜಯದಶಮಿ ಹಾಗೂ ದೀಪಾವಳಿಯ ಸಮಯದಲ್ಲಿ ದುರಂತ ನಡೆದಿತ್ತು. ಬೂದುಪಟ್ಟಿ ರೆಂಗಪಾಳ್ಯಂ ಪ್ರದೇಶದಲ್ಲಿರುವ ಕಾನಿಷ್ಕರ್ ಪಟಾಕಿ ಕಾರ್ಖಾನೆಯಲ್ಲಿ ಮೊದಲ ಸ್ಫೋಟ ನಡೆದು 9 ಮಂದಿ ಸಾವನ್ನಪ್ಪಿದ್ದರು. ರೆಡ್ಡಿಪಟ್ಟಿ ಪ್ರದೇಶದಲ್ಲಿರುವ ಮುತ್ತು ವಿಜಯನ್ ಒಡೆತನದ ಪಟಾಕಿ ಕಾರ್ಖಾನೆಯಲ್ಲಿ ಮತ್ತೊಂದು ಸ್ಫೋಟದಲ್ಲಿ ಓರ್ವ ಕಾರ್ಮಿಕ ಅಸುನೀಗಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.