ETV Bharat / bharat

ವಿಶ್ವದ ಅತಿ ಉದ್ದದ ಎಲ್​ಪಿಜಿ ಪೈಪ್​ಲೈನ್ ಯೋಜನೆಗೆ ಚಾಲನೆ - ಭಾರತ್ ಪೆಟ್ರೋಲಿಯಂ

ನಿರ್ಮಾಣವಾಗುತ್ತಿರುವ ಅನಿಲ ಪೈಪ್‌ಲೈನ್ 3 ರಾಜ್ಯಗಳಲ್ಲಿ ಒಟ್ಟು 22 ಅನಿಲ ಮರುಪೂರಣ ಘಟಕಗಳಿಗೆ ಅನಿಲವನ್ನು ಪೂರೈಸಲಿದೆ.

work-on-world-longest-lpg-gas-pipeline-project-started-in-varanasi
ವಿಶ್ವದ ಅತಿ ಉದ್ದದ ಎಲ್​ಪಿಜಿ ಪೈಪ್​ಲೈನ್​​ಗೆ ಯೋಜನೆಗೆ ಚಾಲನೆ
author img

By

Published : May 18, 2021, 3:34 AM IST

Updated : May 18, 2021, 8:17 AM IST

ವಾರಣಾಸಿ: ಕೇಂದ್ರ ಸರ್ಕಾರದ ಯೋಜನೆಯಡಿ ವಿಶ್ವದ ಅತಿ ಉದ್ದದ ಅನಿಲ ಪೈಪ್‌ಲೈನ್ ಹಾಕುವ ಕೆಲಸ ವಾರಣಾಸಿಯ ಬಳಿಯ ರಮಾಯಿಪಟ್ಟಿ ಗ್ರಾಮದಲ್ಲಿ ಪ್ರಾರಂಭವಾಗಿದೆ.

ಗುಜರಾತ್‌ನ ಕಾಂಡ್ಲಾ ಬಂದರಿನಿಂದ ಗೋರಖ್‌ಪುರದವರೆಗಿನ ಈ ಅನಿಲ ಪೈಪ್‌ಲೈನ್ 2,805 ಕಿಲೋಮೀಟರ್ ಉದ್ದವಾಗಿದ್ದು, ವಿಶ್ವದ ಅತಿ ಉದ್ದದ ಅನಿಲ ಪೈಪ್‌ಲೈನ್ ಎಂದು ಹೇಳಲಾಗುತ್ತದೆ. ಭೂಮಿ ಪೂಜೆ ಸೋಮವಾರ ಪೂರ್ಣಗೊಂಡಿದ್ದು, ಸಿಬ್ಬಂದಿಯಿಂದ ಗ್ಯಾಸ್ ಪೈಪ್‌ಲೈನ್ ಹಾಕುವ ಕೆಲಸವೂ ಪ್ರಾರಂಭವಾಗಿದೆ.

ಈ ಅನಿಲ ಪೈಪ್‌ಲೈನ್ ಯೋಜನೆಯಿಂದ ಉತ್ತರ ಪ್ರದೇಶ ಮಾತ್ರವಲ್ಲ, ಮಧ್ಯಪ್ರದೇಶ ಮತ್ತು ಗುಜರಾತ್ ಕೂಡ ಪ್ರಯೋಜನ ಪಡೆಯಲಿವೆ. ಈ ಯೋಜನೆಯಲ್ಲಿ ಮೂರು ದೊಡ್ಡ ತೈಲ ಮತ್ತು ಅನಿಲ ಕಂಪನಿಗಳು ಒಟ್ಟಾಗಿ 10,000 ಕೋಟಿ ರೂ. ಬಂಡವಾಳ ಹೂಡಿಕೆ ಮಾಡುತ್ತಿವೆ.

ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಂಪನಿಗಳು ಬಂಡವಾಳ ಹೂಡಿಕೆ ಮಾಡಿದ್ದು, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಗರಿಷ್ಠ ಶೇಕಡಾ 50ರಷ್ಟು ಪಾಲನ್ನು ಹೊಂದಿದೆ. ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಶೇಕಡಾ 25ರಷ್ಟು ಪಾಲನ್ನು ಹೊಂದಿವೆ.

ಇದನ್ನೂ ಓದಿ : ಹೆಲ್ಪ್​ಲೈನ್​ಗೆ ಅಶ್ಲೀಲ ವಿಡಿಯೋ, ಫೋಟೋ ಕಳಿಸಿದ್ದವನಿಗೆ ಪೊಲೀಸರ ಹುಡುಕಾಟ

ಈ ಯೋಜನೆ 2024 ರ ಮೊದಲು ಪೂರ್ಣಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಯೋಜನೆಯ ದೊಡ್ಡ ಲಾಭ ನೇರವಾಗಿ ಉತ್ತರ ಪ್ರದೇಶಕ್ಕೆ ಹೋಗುತ್ತದೆ. ಮೂಲಗಳಿಂದ ಪಡೆದ ಮಾಹಿತಿಯ ಪ್ರಕಾರ, ಉತ್ತರ ಪ್ರದೇಶದ 18 ಜಿಲ್ಲೆಗಳು ವಿಶ್ವದ ಅತಿ ಉದ್ದದ ಎಲ್‌ಪಿಜಿ ಪೈಪ್‌ಲೈನ್ ಯೋಜನೆಯಿಂದ ನೇರವಾಗಿ ಪ್ರಯೋಜನ ಪಡೆಯಲಿವೆ. ಉತ್ತರ ಪ್ರದೇಶದ ಲಲಿತಪುರ, ಝಾನ್ಸಿ, ಜಲಾನ್, ಕಾನ್ಪುರ್, ಉನ್ನಾವೊ, ರಾಯ್​ ಬರೇಲಿ, ಪ್ರತಾಪಗಡ, ಪ್ರಯಾಗ್ ರಾಜ್, ವಾರಣಾಸಿ, ಘಾಜಿಪುರ, ಅಜಮ್‌ಗಡ, ಗೋರಖ್‌ಪುರ್ ಜಿಲ್ಲೆಗಳ ಮೂಲಕ ಹಾದು ಹೋಗಲಿದೆ.

ಈ ಅನಿಲ ಪೈಪ್‌ಲೈನ್ 3 ರಾಜ್ಯಗಳಲ್ಲಿ ಒಟ್ಟು 22 ಅನಿಲ ಮರುಪೂರಣ ಘಟಕಗಳಿಗೆ ಅನಿಲವನ್ನು ಪೂರೈಸಲಿದೆ. ಇವುಗಳಲ್ಲಿ ಗುಜರಾತ್‌ನಲ್ಲಿ 3 ಗ್ಯಾಸ್ ರೀಫಿಲ್ಲಿಂಗ್ ಪ್ಲಾಂಟ್‌ಗಳು, ಮಧ್ಯಪ್ರದೇಶದಲ್ಲಿ 6 ರೀಫಿಲ್ಲಿಂಗ್ ಪ್ಲಾಂಟ್‌ಗಳು, ಉತ್ತರ ಪ್ರದೇಶದ 13 ಗ್ಯಾಸ್ ರೀಫಿಲ್ಲಿಂಗ್ ಪ್ಲಾಂಟ್‌ಗಳು ಸೇರಿವೆ.

2024ಕ್ಕಿಂತ ಮೊದಲು ಕಾಮಗಾರಿ ಪೂರ್ಣಗೊಳ್ಳಲಿದೆ. ಯೋಜನೆ ಪೂರ್ಣಗೊಂಡ ನಂತರ ದೇಶದಲ್ಲಿ ಒಟ್ಟು 34 ಕೋಟಿ ಜನರಿಗೆ ಅನುಕೂಲವಾಗಲಿದೆ ಎನ್ನಲಾಗಿದೆ.

Last Updated : May 18, 2021, 8:17 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.