ETV Bharat / bharat

137 ವರ್ಷಗಳ ಹಳೆಯ ಮನೆ.. ಗತಕಾಲದ ಕಲೆ ಸಾರುವ ಶತಮಾನದ ಗೃಹ.. - ಶತಮಾನದ ಹಳೆಯ ಮನೆ ಸುದ್ದಿ

ಈ ಮನೆಯ ಬಾಗಿಲುಗಳನ್ನು ಹಳೆಯ ತಂತ್ರಜ್ಞಾನದಿಂದ ಲಾಕ್​ ಮಾಡಲಾಗುತ್ತದೆ. ಇದರಲ್ಲಿ ಬಾಗಿದ ಕೀ ಬಳಸಲಾಗುತ್ತದೆ. ಇದನ್ನು ಸ್ಥಳೀಯ ಭಾಷೆಯಲ್ಲಿ ತಾವಾ ಎಂದು ಕರೆಯಲಾಗುತ್ತದೆ. ಅದನ್ನು ತೆರೆಯುವುದು ಅಷ್ಟು ಸುಲಭವಲ್ಲ..

ಗತಕಾಲದ ಕಲೆಯ ಸಾರುವ ಶತಮಾನದ ಗೃಹ
ಗತಕಾಲದ ಕಲೆಯ ಸಾರುವ ಶತಮಾನದ ಗೃಹ
author img

By

Published : May 25, 2021, 6:10 AM IST

ಡೆಹ್ರಾಡೂನ್‌ (ಉತ್ತರಾಖಂಡ್): ಇಟ್ಟಿಗೆ,ಸಿಮೆಂಟ್ ಮತ್ತು ಕಾಂಕ್ರೀಟ್​ನ ಎತ್ತರದ ಮನೆಗಳ ನಡುವೆ, ಉತ್ತರಾಖಂಡ್​ನ ವಿಕಾಸ್​ನಗರದ ಜಾನ್ಸರ್ ಬವಾರ್ ಪ್ರದೇಶದಲ್ಲಿ ಮರ ಮತ್ತು ಕಲ್ಲುಗಳಿಂದ ಮಾಡಿದ ಮನೆ ಎಲ್ಲರನ್ನು ತನ್ನತ್ತ ಸೆಳೆಯುತ್ತಿದೆ.

ಈ ಮನೆಯನ್ನು 1884ರಲ್ಲಿ ಡೆಹ್ರಾಡೂನ್‌ನ ವಿಕಾಸ್‌ನಗರದ ಜಾನ್ಸರ್ ಬವಾರ್ ಬುಡಕಟ್ಟು ಪ್ರದೇಶದ ನಾಗೌ ಗ್ರಾಮದಲ್ಲಿ ನಿರ್ಮಿಸಲಾಯಿತು. 137 ವರ್ಷಗಳ ಹಿಂದೆ ನಿರ್ಮಿಸಲಾದ ಈ ಮನೆ ಅದ್ಭುತ ಮರದ ಕಲೆಯಿಂದ ಕೂಡಿದೆ.

ಗತಕಾಲದ ಕಲೆಯ ಸಾರುವ ಶತಮಾನದ ಗೃಹ..

ಸುಮಾರು 137 ವರ್ಷಗಳ ಹಿಂದೆ, ಈ ಮೂರು ಅಂತಸ್ತಿನ ಕಟ್ಟಡವನ್ನು ನಿರ್ಮಿಸಲಾಯಿತು. ಆ ಸಮಯದಲ್ಲಿ ಬ್ರಿಟಿಷರು ಭಾರತವನ್ನು ಆಳುತ್ತಿದ್ದರು. ಇದರ ಅಡಿಪಾಯಕ್ಕೆ ಕಲ್ಲುಗಳನ್ನು ಬಳಸಲಾಗಿದೆ.

ಮೇಲಿನ ರಚನೆಯು ಮರದಿಂದ ಮಾಡಲ್ಪಟ್ಟಿದೆ. 100 ವರ್ಷಗಳ ಹಿಂದಿನ ಕಾಲದ ಕೆತ್ತನೆ ಮತ್ತು ಕಲೆಯನ್ನು ಗಮನಿಸಿದರೆ, ಮನೆ ಇನ್ನೂ ಅದೇ ರೀತಿಯಲ್ಲಿಯೇ ಇರುವುದು ಅಚ್ಚರಿ ಮೂಡಿಸುತ್ತಿದೆ.

ಪ್ರಸ್ತುತ ಈ ಮನೆಯ ಮಾಲೀಕರು ಹರದೇವ್ ಸಿಂಗ್ ತೋಮರ್. ಈ ವಿಶಿಷ್ಟ ಮನೆಯನ್ನು ಅವರ ತಾತ, ಮುತ್ತಾತಂದಿರ ಕಾಲದಲ್ಲಿ ನಿರ್ಮಿಸಲಾಗಿದೆ. ಈ ಸುಂದರ ಕಟ್ಟಡವನ್ನು ಅವರು ಸಂರಕ್ಷಿಸುತ್ತಿದ್ದಾರೆ.

ಈ ಕಟ್ಟಡದಲ್ಲಿ ಹೆಚ್ಚು ಗಮನ ಸೆಳೆಯುವ ಅಂಶವೆಂದರೆ ಇಲ್ಲಿರುವ ಬಾಗಿಲುಗಳು. ಇವು ತುಂಬಾ ಚಿಕ್ಕದಾಗಿವೆ. ಮತ್ತು ವಿಶೇಷವಾಗಿವೆ.

ಈ ಮನೆಯ ಬಾಗಿಲುಗಳನ್ನು ಹಳೆಯ ತಂತ್ರಜ್ಞಾನದಿಂದ ಲಾಕ್​ ಮಾಡಲಾಗುತ್ತದೆ. ಇದರಲ್ಲಿ ಬಾಗಿದ ಕೀ ಬಳಸಲಾಗುತ್ತದೆ. ಇದನ್ನು ಸ್ಥಳೀಯ ಭಾಷೆಯಲ್ಲಿ ತಾವಾ ಎಂದು ಕರೆಯಲಾಗುತ್ತದೆ. ಅದನ್ನು ತೆರೆಯುವುದು ಅಷ್ಟು ಸುಲಭವಲ್ಲ.

ಈ ಮರದ ಮನೆ ಗಟ್ಟಿಯಾಗಿದೆ ಮಾತ್ರವಲ್ಲ, ಭೂಕಂಪ ನಿರೋಧಕವೂ ಆಗಿದೆ. 137 ವರ್ಷಗಳ ನಂತರವೂ ಈ ಮನೆ ಹಾಗೆಯೇ ಇರುವುದಕ್ಕೆ ಇದೇ ಕಾರಣ.

ಮಳೆಗಾಲದ ಸಮಯದಲ್ಲಿ ಮನೆಯಲ್ಲಿ ಒಂದು ಹನಿ ನೀರು ಸಹ ಇಳಿಯದಂತೆ ಈ ಮನೆಯನ್ನು ವಿನ್ಯಾಸಗೊಳಿಸಲಾಗಿದೆ. ಆದ್ದರಿಂದ ಈ ಮನೆಯಲ್ಲಿ ಹೆಚ್ಚಿನ ಧಾನ್ಯಗಳನ್ನು ಸಂಹಗ್ರಹಿಸಿಡಬಹುದು.

ಕೆಲ ವರ್ಷಗಳ ಬಳಿಕ ಹರದೇವ್ ಅವರ ಕುಟುಂಬವು ಬೆಳೆಯಿತು ಮತ್ತು ಈ ಕಾರಣಕ್ಕಾಗಿ ಅವರು ಹಳ್ಳಿಯಲ್ಲಿ ವಾಸಿಸಲು ಹೆಚ್ಚಿನ ಮನೆಗಳನ್ನು ನಿರ್ಮಿಸಿದ್ದಾರೆ. ಆದರೆ, ಈ ಮನೆ ಅವನ ಮತ್ತು ಅವರ ಕುಟುಂಬದ ಪರಂಪರೆಯಾಗಿದೆ.

ಇದು ಅವರ ಗುರುತು ಮತ್ತು ಅವರ ಹಿರಿಯರ ನೆನಪಿನಲ್ಲಿ ಈ ಮನೆಯನ್ನು ಅವರು ಯಾವಾಗಲೂ ಸಂರಕ್ಷಿಸಲು ಬಯಸುತ್ತಾರೆ. ರಾಜ ಮಹಾರಾಜರ ಕಾಲದಲ್ಲಿ ಕೆತ್ತಿದ ಈ ಬಾಗಿಲುಗಳು ಮತ್ತು ಚೌಕಟ್ಟು ಕಲಾ ಪ್ರಪಂಚಕ್ಕೆ ಉಡುಗೊರೆಯಾಗಿದೆ. ಹಿಂದಿನ ಕಾಲದಲ್ಲಿ ಮರದ ಮಾದರಿಗಳು ಸಹ ಸಾಮಾನ್ಯವಾಗಿದ್ದವು. ಆದರೆ, ಇಂದು ಈ ಕಲೆ ಮರೆಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.