ಸಾಂಗ್ಲಿ(ಮಹಾರಾಷ್ಟ್ರ): ಗ್ರಾಮೀಣ ಭಾಗಗಳಲ್ಲಿ ಎತ್ತುಗಳು ಇಂದಿಗೂ ರೈತರ ಜೀವನಾಡಿ. ಉಳಿಮೆ ಮಾಡುವುದು, ಇತರ ಅಗತ್ಯ ವಸ್ತುಗಳನ್ನ ಚಕ್ಕಡಿಗಳ ಮೂಲಕ ಸಾಗಣೆ ಮಾಡಲು ಅವುಗಳನ್ನ ಬಳಕೆ ಮಾಡಲಾಗ್ತದೆ. ಕೆಲವೊಂದು ಸಂದರ್ಭಗಳಲ್ಲಿ ಬಂಡಿಗಳಲ್ಲಿ ಹೆಚ್ಚಿನ ಭಾರ ಹಾಕುವುದರಿಂದ ಅವುಗಳ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ.
ಇಂತಹ ಸಂದರ್ಭಗಳಲ್ಲಿ ಕುತ್ತಿಗೆ ಭಾಗಕ್ಕೆ ನೋವಾಗುವುದು, ಒತ್ತಡ ತಡೆಯಲು ಆಗದೇ ಕಾಲು ಮುರಿದಿರುವ ಅನೇಕ ಘಟನೆಗಳು ನಮ್ಮ ಮುಂದಿವೆ. ಎತ್ತುಗಳ ಮೇಲಿನ ಭಾರ ಕಡಿಮೆ ಮಾಡಲು ವಿದ್ಯಾರ್ಥಿಗಳು ಹೊಸದೊಂದು ಸಂಶೋಧನೆ ಅಭಿವೃದ್ಧಿ ಮಾಡಿದ್ದಾರೆ.
ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಈ ಸಂಶೋಧನೆ ಈಗಾಗಲೇ ಜಾರಿಯಲ್ಲಿದೆ. ಇಸ್ಲಾಂಪುರದ ರಾಜಾರಾಂಬಾಪು ಇಂಜಿನಿಯರಿಂಗ್ ಕಾಲೇಜ್ನ ವಿದ್ಯಾರ್ಥಿಗಳು ಸಾರಥಿ ಎಂಬ ವಿಶೇಷ ಎತ್ತಿನ ಗಾಡಿ ನಿರ್ಮಾಣ ಮಾಡಿದ್ದು, ಅದಕ್ಕೆ ರೋಲಿಂಗ್ ಸಪೋರ್ಟ್ ನೀಡಿದ್ದಾರೆ. ಇದರಿಂದ ಎತ್ತುಗಳ ಭಾಗಕ್ಕೆ ಬೀಳುವ ಬಾರದ ಪ್ರಮಾಣ ಕಡಿಮೆಯಾಗುತ್ತದೆ.
ಮಹಾರಾಷ್ಟ್ರ, ಕರ್ನಾಟಕದಲ್ಲಿ ಕಬ್ಬು ಸಾಗಿಸಲು ಹೆಚ್ಚಾಗಿ ಎತ್ತುಗಳ ಮೊರೆ ಹೋಗುತ್ತಾರೆ. ಈ ವೇಳೆ, ಚಕ್ಕಡಿಗಳಲ್ಲಿ ಹೆಚ್ಚಿನ ಭಾರ ಹಾಕುವುದರಿಂದ ಎತ್ತುಗಳಿಗೆ ಇನ್ನಿಲ್ಲದ ತೊಂದರೆಯಾಗುತ್ತದೆ. ಇದೀಗ ಅವುಗಳ ಮೇಲೆ ಬೀಳುವ ಭಾರ ತಪ್ಪಿಸಲು ವಿದ್ಯಾರ್ಥಿಗಳು ನೂತನ ಚಕ್ಕಡಿ ನಿರ್ಮಿಸಿದ್ದು, ಅದಕ್ಕೆ ರೋಲಿಂಗ್ ಸಪೋರ್ಟರ್ ನಿರ್ಮಿಸಿದ್ದಾರೆ.
ಎತ್ತಿನ ಗಾಡಿ ನೊಗಕ್ಕೆ ರಾಡ್ ಸಪೋರ್ಟ್ ನೀಡಿ ಅದಕ್ಕೆ ಚಕ್ರ ಹಾಕಿದ್ದಾರೆ. ಇದರಿಂದ ಎತ್ತುಗಳ ಕುತ್ತಿಗೆ ಭಾಗಕ್ಕೆ ಬೀಳುತ್ತಿದ್ದ ಭಾರ ಇದೀಗ ರೋಲಿಂಗ್ ಸಪೋರ್ಟ್ಗೆ ಬೀಳುತ್ತದೆ. ಇದರಿಂದ ಎತ್ತುಗಳು ಸರಳವಾಗಿ ಭಾರ ಹೊತ್ತುಕೊಂಡು ಮುಂದೆ ಸಾಗುತ್ತವೆ. ರಾಜಾರಂಬಾಪು ಎಂಜಿನಿಯರಿಂಗ್ ಕಾಲೇಜ್ನ ವಿದ್ಯಾರ್ಥಿಗಳಾದ ಸೌರಭ್, ಆಕಾಶ್, ನಿಖಿಲ್, ಆಕಾಶ್, ಓಂಕಾರ ಈ ಯೋಜನೆಯ ರೂವಾರಿಗಳಾಗಿದ್ದು, ಸದ್ಯ ಸಾಂಗ್ಲಿಯಲ್ಲಿ ಇದರ ಬಳಕೆ ಯಾಗುತ್ತಿದೆ.
-
बैलों का लोड कम करने के लिए बैलगाड़ी पर लगाया गया रोलिंग स्पोर्ट.
— Awanish Sharan (@AwanishSharan) July 14, 2022 " class="align-text-top noRightClick twitterSection" data="
फ़ोटो: साभार pic.twitter.com/icjwYkd0Ko
">बैलों का लोड कम करने के लिए बैलगाड़ी पर लगाया गया रोलिंग स्पोर्ट.
— Awanish Sharan (@AwanishSharan) July 14, 2022
फ़ोटो: साभार pic.twitter.com/icjwYkd0Koबैलों का लोड कम करने के लिए बैलगाड़ी पर लगाया गया रोलिंग स्पोर्ट.
— Awanish Sharan (@AwanishSharan) July 14, 2022
फ़ोटो: साभार pic.twitter.com/icjwYkd0Ko
ಇದನ್ನೂ ಓದಿರಿ: ತುಂಬಿ ಹರಿಯುತ್ತಿರುವ ಕಾವೇರಿ: ಮನೆ ಛಾವಣಿ ಮೇಲೆ ನಿಂತಿದ್ದ 72ರ ಅಜ್ಜಿ, 11 ತಿಂಗಳ ಮಗುವಿನ ರಕ್ಷಣೆ
ಕಳೆದ ಎರಡು ದಿನಗಳ ಹಿಂದೆ ಐಎಎಸ್ ಅಧಿಕಾರಿ ಅಶ್ವಿನಿ ಶರಣ್ ಸಹ ಈ ಚಕ್ಕಡಿಯ ಫೋಟೋ ತಮ್ಮ ಟ್ವೀಟರ್ ಅಕೌಂಟ್ನಲ್ಲಿ ಶೇರ್ ಮಾಡಿಕೊಂಡಿದ್ದು, ವಿದ್ಯಾರ್ಥಿಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.