ETV Bharat / bharat

ಅಚ್ಚರಿ..! ಒಂದೇ ಪಪ್ಪಾಯಿ ಮರ, 15 ಟಿಸಿಲು, 200 ಹಣ್ಣುಗಳು!!

ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಅಪರೂಪದ ಪಪ್ಪಾಯ ಮರವಿದ್ದು, ಸುಮಾರು 200 ಹಣ್ಣುಗಳನ್ನು ಈ ಒಂದೇ ಮರದಲ್ಲಿದ್ದು, ಜನರಲ್ಲಿ ಅಚ್ಚರಿ ಉಂಟಾಗಿದೆ.

Wonder: Papaya Tree Gets 15 Branches with 200 Fruits
ಅಚ್ಚರಿ: ಒಂದೇ ಪಪ್ಪಾಯ ಮರ, 200ಕ್ಕೂ ಹೆಚ್ಚು ಹಣ್ಣುಗಳು..!
author img

By

Published : Apr 2, 2022, 1:40 PM IST

ಪಶ್ಚಿಮ ಗೋದಾವರಿ(ಆಂಧ್ರಪ್ರದೇಶ): ಒಂದು ಪಪ್ಪಾಯ ಮರದಲ್ಲಿ ಎಷ್ಟು ಹಣ್ಣುಗಳನ್ನು ನೀವು ನೋಡಿರುತ್ತೀರಿ.. 5, 10 ಹೆಚ್ಚೆಂದರೆ 15 ನೋಡಿರಬಹುದು. ಆದರೆ ಇಲ್ಲೊಂದು ಮರದಲ್ಲಿ ಸುಮಾರು 200ಕ್ಕೂ ಹೆಚ್ಚು ಪಪ್ಪಾಯಿಗಳಿವೆ. ಇಂಥಹ ಅಪರೂಪದ ಪಪ್ಪಾಯಿ ಮರ ಇರೋದು ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಪೆರವಲಿ ಮಂಡಲದ ಖಂಡವಳ್ಳಿ ಮತ್ತು ಅನ್ನಾವರಪ್ಪಡು ನಡುವಿನ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ.

ಈ ಮರ ಇಷ್ಟೊಂದು ಹಣ್ಣುಗಳನ್ನು ಬಿಡಲು ಕಾರಣ ಅದಕ್ಕಿರುವ ಕೊಂಬೆಗಳು ಅಥವಾ ಟಿಸಿಲುಗಳು. ಸುಮಾರು 15 ಟಿಸಿಲುಗಳು ಈ ಮರಕ್ಕಿದ್ದು, ಎಲ್ಲಾ ಟಿಸಿಲುಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹಣ್ಣುಗಳಿವೆ. ಖಂಡವಳ್ಳಿ ಗ್ರಾಮದ ರೈತರ ಕೃಷಿ ಭೂಮಿಯ ಗಡಿಯಲ್ಲಿ ಈ ಮರವಿದ್ದು, ಯಾವುದೇ ಗೊಬ್ಬರವನ್ನು ಈ ಮರಕ್ಕೆ ನೀಡಿಲ್ಲ ಎಂಬುದು ಅಚ್ಚರಿಯ ಸಂಗತಿ.

ಒಂದು ಪಪ್ಪಾಯ ಮರದಲ್ಲಿ 200ಕ್ಕೂ ಹೆಚ್ಚು ಹಣ್ಣುಗಳು

ತೋಟಗಾರಿಕಾ ಅಧಿಕಾರಿಗಳ ಪ್ರಕಾರ, ಪಪ್ಪಾಯಿ ಮರವು ಆನುವಂಶಿಕ ಅಂಶಗಳಿಂದ ಹೆಚ್ಚು ಹಣ್ಣುಗಳನ್ನು ಬಿಡುವ ಸಾಧ್ಯತೆ ಇದೆ ಎಂದಿದ್ದಾರೆ. ಪಪ್ಪಾಯಿ ಮರದ ಪಕ್ಕವೇ ರೈತರು ಕೃಷಿ ಚಟುವಟಿಕೆಗಳನ್ನು ನಡೆಸುತ್ತಿದ್ದು, ತರಕಾರಿಗೆ ಒದಗಿಸಲಾದ ಪೋಷಕಾಂಶಗಳನ್ನೇ ಪಪ್ಪಾಯಿ ಮರ ಹೀರಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಆದೇನೇ ಇದ್ದರೂ, ದಾರಿಯಲ್ಲಿ ಸಾಗುವ ಜನರು ಈ ಪಪ್ಪಾಯಿ ಮರವನ್ನು ನೋಡಿ ಆಶ್ಚರ್ಯ ಪಡುತ್ತಾರೆ.

ಇದನ್ನೂ ಓದಿ: ಸರ್ಕಾರಿ ಶಾಲೆಯ ಅಡುಗೆ ಕೊಠಡಿಯಲ್ಲಿ ಗ್ಯಾಸ್​ ಲೀಕ್​ನಿಂದ ಅಗ್ನಿ ಅವಘಡ: ಅಡುಗೆ ಸಿಬ್ಬಂದಿ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.