ETV Bharat / bharat

ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡನೆ: ಪಟಾಕಿ ಸಿಡಿಸಿ, ಸಿಹಿಹಂಚಿ ದೇಶಾದ್ಯಂತ ಮಹಿಳೆಯರ ಸಂಭ್ರಮ - Reservation Bill tabled in Lok Sabha

ಮಹಿಳೆಯರಿಗೆ ರಾಜಕೀಯ ಮೀಸಲಾತಿ ನೀಡುವ ಮಸೂದೆಯನ್ನು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿದ್ದು, ದೇಶಾದ್ಯಂತ ಸಂಭ್ರಮಕ್ಕೆ ಕಾರಣವಾಗಿದೆ.

ದೇಶಾದ್ಯಂತ ಮಹಿಳೆಯರ ಸಂಭ್ರಮ
ದೇಶಾದ್ಯಂತ ಮಹಿಳೆಯರ ಸಂಭ್ರಮ
author img

By ETV Bharat Karnataka Team

Published : Sep 19, 2023, 5:56 PM IST

ಪಟಾಕಿ ಸಿಡಿಸಿ, ಸಿಹಿಹಂಚಿ ದೇಶಾದ್ಯಂತ ಮಹಿಳೆಯರ ಸಂಭ್ರಮ

ನವದೆಹಲಿ: ಹೊಸ ಸಂಸತ್​ ಭವನ ಪ್ರವೇಶಿಸಿದ ಮೊದಲ ದಿನವೇ ಪ್ರಥಮ ಮಸೂದೆಯಾಗಿ ಮಹಿಳಾ ಮೀಸಲಾತಿ ವಿಧೇಯಕವನ್ನು ಕೇಂದ್ರ ಸರ್ಕಾರ ಮಂಗಳವಾರ ಮಂಡಿಸಿದ್ದು, ಐತಿಹಾಸಿಕ ಮುನ್ನುಡಿ ಬರೆದಿದೆ. ಇದು ದೇಶಾದ್ಯಂತ ಹರ್ಷ ತಂದಿದೆ. ಬಿಜೆಪಿ ಕಾರ್ಯಕರ್ತರು ಸೇರಿದಂತೆ ವಿವಿಧ ಪಕ್ಷಗಳ ನಾಯಕಿಯರು ಮತ್ತು ಕಾರ್ಯಕರ್ತರು ಪಟಾಕಿ ಹಚ್ಚಿ, ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು. ಸರ್ಕಾರದ ಈ ನಡೆಗೆ ಸರ್ವಪಕ್ಷಗಳು ಶ್ಲಾಘನೆ ವ್ಯಕ್ತಪಡಿಸಿವೆ.

27 ವರ್ಷಗಳಿಂದ ಕಾಗದದಲ್ಲೇ ಉಳಿದಿದ್ದ ಮಸೂದೆಯು ಈಗ ಸಂಸತ್ತಿನಲ್ಲಿ ಚರ್ಚೆಗೆ ಬಂದಿದೆ. ಕಾನೂನು ಸಚಿವ ಅರ್ಜುನ್​ ರಾಮ್​ ಮೇಘವಾಲ್​ ಅವರು ವಿಧೇಯಕವನ್ನು ಮಂಡಿಸಲಾಗುವುದು ಎಂದು ಸದನಕ್ಕೆ ತಿಳಿಸಿದರು. ಇದಾದ ಬಳಿಕ ನಡೆದ ಅಲ್ಪ ಚರ್ಚೆಯಲ್ಲಿ ಮಸೂದೆಯ ಮಾಹಿತಿಯನ್ನು ನೀಡಲು ವಿಪಕ್ಷದವರು ಕೋರಿದರು. ಸದನವನ್ನು ಡಿಜಿಟಲೀಕರಣ ಮಾಡಿದ ಕಾರಣ ವೆಬ್​ಸೈಟ್​ನಲ್ಲಿ ಅದರ ಮಾಹಿತಿ ಅಳವಡಿಸಲಾಗಿದೆ ಎಂದು ಸರ್ಕಾರ ತಿಳಿಸಿತು. ಇದಾದ ಬಳಿಕ ಉಭಯ ಸದನಗಳನ್ನು ನಾಳೆಗೆ ಮುಂಡೂಡಲಾಯಿತು.

ಮಹಿಳೆಯರ ಸಂಭ್ರಮಾಚರಣೆ: ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ವಿಧೇಯಕವನ್ನು ಮಂಡನೆ ಮಾಡಿದ ಸುದ್ದಿ ಹರಡಿದ ಬಳಿಕ ತೆಲಂಗಾಣ, ಮಹಾರಾಷ್ಟ್ರ, ದೆಹಲಿ, ಬಿಹಾರ ಸೇರಿದಂತೆ ನಾನಾ ರಾಜ್ಯಗಳಲ್ಲಿ ಮಹಿಳೆಯರು ಸಂಭ್ರಮಾಚರಣೆ ನಡೆಸಿದರು. ರಸ್ತೆಗಳಲ್ಲಿ ಪಟಾಕಿ ಸಿಡಿಸಿ, ಸಿಹಿಹಂಚಿ ಸಂತಸ ವ್ಯಕ್ತಪಡಿಸಿದರು.

ರಾಜಕೀಯ ನಾಯಕಿಯರ ಅಭಿಮತವಿದು: ಮಸೂದೆಯ ಬಗ್ಗೆ ಸಂತಸ ಹಂಚಿಕೊಂಡ ಬಿಆರ್​ಎಸ್​​ ನಾಯಕಿ ಕೆ ಕವಿತಾ ಅವರು, ಮೀಸಲಾತಿ ಮಸೂದೆ ಮಂಡನೆಯಾಗಿರುವುದು ಸಂತೋಷ ತಂದಿದೆ. ಲೋಕಸಭೆಯಲ್ಲಿ ಅಂಗೀಕಾರಗೊಂಡು ರಾಜ್ಯಸಭೆಗೆ ಬರಲಿದೆ. ಆದಷ್ಟು ಬೇಗ ಚರ್ಚೆ ನಡೆಸಿ ಇದೇ ಅಧಿವೇಶನದಲ್ಲಿಯೇ ಅಂಗೀಕಾರ ಸಿಗಲಿ. ಆಡಳಿತಾರೂಢ ಸರ್ಕಾರ ಈ ಬಗ್ಗೆ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದು ಶ್ಲಾಘನೀಯ ವಿಚಾರವಾಗಿದೆ ಎಂದರು.

ಜಮ್ಮು ಕಾಶ್ಮೀರ ಮುಖ್ಯಮಂತ್ರಿ, ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ, ಎನ್‌ಡಿಎ ಸರ್ಕಾರ 10 ವರ್ಷಗಳನ್ನು ಪೂರೈಸಲಿದೆ. ಅವರು ಇದನ್ನು ಮೊದಲೇ ಮಾಡಿದ್ದರೆ 2024 ರ ಚುನಾವಣೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಅವಕಾಶವನ್ನು ಪಡೆಯುತ್ತಿದ್ದರು. ತಡವಾಗಿಯಾದರೂ ಮೀಸಲಾತಿ ನೀಡಲು ಮುಂದಾಗಿದ್ದಾರೆ. ಇದು ಒಳ್ಳೆಯ ನಡೆಯಾಗಿದ್ದು, ದೇಶದ ಪ್ರಗತಿಯಲ್ಲಿ ಮಹತ್ವದ ಹೆಜ್ಜೆಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮಹಿಳೆಯರ ಸುದೀರ್ಘ ಹೋರಾಟಕ್ಕೆ ಮನ್ನಣೆ ನೀಡಿದ ಪ್ರಧಾನಿ ಮೋದಿಯವರಿಗೆ ಧನ್ಯವಾದ. ಮಸೂದೆಯು ಮಹಿಳೆಯರ ನಾಯಕತ್ವವನ್ನು ಹೆಚ್ಚಿಸಲಿದೆ. ವಿರೋಧ ಪಕ್ಷಗಳಿಗೆ ಇದು ರಾಜಕೀಯ ಗಿಮಿಕ್ ಎಂದಾಗಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೂ ಮಹಿಳೆಯರಿಗೆ ಮೀಸಲಾತಿ ನೀಡಲಿಲ್ಲ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಟೀಕಿಸಿದರು.

ಮೀಸಲಾತಿ ಮಸೂದೆ ಮಂಡಿಸುವ ಬಗ್ಗೆ ಬಿಜೆಪಿ 2014 ರ ಚುನಾವಣೆಗೂ ಮೊದಲು ಭರವಸೆ ನೀಡಿತ್ತು. ಈಗ ಮಸೂದೆಯನ್ನು ತಂದಿದ್ದಾರೆ. ಜನಗಣತಿ, ಕ್ಷೇತ್ರಗಳ ಮರುವಿಂಗಡಣೆ, ಡಿಲಿಮಿಟೇಶನ್ ನಡೆಯುವವರೆಗೆ ಮಹಿಳೆಯರಿಗೆ ಇದರ ಲಾಭ ಸಿಗುವುದಿಲ್ಲ. 2024 ರ ಲೋಕಸಭೆ ಚುನಾವಣೆಯಲ್ಲಿ 1/3 ಮೀಸಲಾತಿ ಇರುವುದಿಲ್ಲ. ಸರ್ಕಾರದ ವಿಳಂಬದಿಂದಾಗಿ ಮಹಿಳೆಯರ ಅಸಮಾನತೆ ಇನ್ನಷ್ಟು ದಿನ ಮುಂದುವರಿಯಲಿದೆ ಎಂದು ಸಿಪಿಐ(ಎಂ) ನಾಯಕಿ ಬೃಂದಾ ಕಾರಟ್ ಅಸಮಾಧಾನ ವ್ಯಕ್ತಪಡಿಸಿದರು.

ಸಿಹಿ ಹಂಚಿದ ಕೇಂದ್ರ ಸಚಿವ: ಲೋಕಸಭೆಯಲ್ಲಿ ಮಸೂದೆ ಮಂಡನೆಯಾದ ಬಳಿಕ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಸಂಸತ್ತಿನಲ್ಲಿ ವಿಶೇಷ ಮಹಿಳಾ ಆಹ್ವಾನಿತರಿಗೆ ಸಿಹಿ ಹಂಚಿ ಸಂಭ್ರಮದಲ್ಲಿ ಪಾಲ್ಗೊಂಡರು. ಆಹ್ವಾನಿತ ಮಹಿಳೆಯರು ಮಸೂದೆ ಮಂಡಿಸಿದ್ದಕ್ಕೆ ಹರ್ಷ ವ್ಯಕ್ತಪಡಿಸಿದರು.

ಇದನ್ನೂ ಓದಿ: Women's reservation bill: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡಿಸಿದ ಕೇಂದ್ರ ಸರ್ಕಾರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.