ಕುರುಕ್ಷೇತ್ರ: ಕಾಂಗ್ರೆಸ್ನ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯಲ್ಲಿ ಇಂದು ಮಹಿಳಾ ಮಣಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹೆಜ್ಜೆ ಹಾಕಲಿದ್ದು, ಈ ದಿನದ ಯಾತ್ರೆ ಮಹಿಳೆಯರ ಬೆಂಬಲಕ್ಕೆ ಸಾಕ್ಷಿಯಾಗಲಿದೆ ಎಂದು ಪಕ್ಷದ ಸಂಸದೆ ಜ್ಯೋತಿಮಣಿ ಟ್ವಿಟರ್ನಲ್ಲಿ ತಿಳಿಸಿದ್ದಾರೆ. ಈ ವಿಚಾರವಾಗಿ ನಿನ್ನೆ ಟ್ವೀಟ್ ಮಾಡಿರುವ ಅವರು, ಭಾರತ್ ಜೋಡೋ ಯಾತ್ರೆಯಲ್ಲಿ ಮಹಿಳೆಯರು ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಲಿದ್ದಾರೆ. ರಾಹುಲ್ ಗಾಂಧಿ, ಮಹಿಳಾ ಸಬಲೀಕರಣವನ್ನು ಎದುರು ನೋಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಪಕ್ಷದ ಹಿರಿಯ ನಾಯಕ ಜೈ ರಾಮ್ ರಮೇಶ್ ಕೂಡ ಈ ಟ್ವೀಟ್ ಅನ್ನು ರಿಟ್ವೀಟ್ ಮಾಡಿದ್ದಾರೆ.
-
Tomorrow is an all women walk in #BharatJodoYatra . one of the most exciting day.@RahulGandhi is very passionate and committed on women empowerment
— Jothimani (@jothims) January 8, 2023 " class="align-text-top noRightClick twitterSection" data="
looking forward! pic.twitter.com/ZfLkqxeB6I
">Tomorrow is an all women walk in #BharatJodoYatra . one of the most exciting day.@RahulGandhi is very passionate and committed on women empowerment
— Jothimani (@jothims) January 8, 2023
looking forward! pic.twitter.com/ZfLkqxeB6ITomorrow is an all women walk in #BharatJodoYatra . one of the most exciting day.@RahulGandhi is very passionate and committed on women empowerment
— Jothimani (@jothims) January 8, 2023
looking forward! pic.twitter.com/ZfLkqxeB6I
ಕಳೆದ ತಿಂಗಳು ಡಿಸೆಂಬರ್ನಲ್ಲಿ ಯಾತ್ರೆ ರಾಜಸ್ಥಾನದ ಸವಾಯಿ ಮಾಧೋಪುರ್ ಜಿಲ್ಲೆಯ ಪೀಪುಲ್ವಾಡಾದಲ್ಲಿ ಸಾಗುತ್ತಿದ್ದಾಗ ಮಹಿಳಾ ಸಶಕ್ತಿಕರಣ ದಿವಸ್ ಅಂಗವಾಗಿ ರಾಹುಲ್ ಗಾಂಧಿ ಮಹಿಳೆಯರ ಜೊತೆ ಭಾರತ್ ಜೋಡೋ ಯಾತ್ರೆ ನಡೆಸುವ ಮೂಲಕ ಆ ದಿನ ಆಚರಿಸಿದ್ದರು. ಇದೇ ರೀತಿಯ ಘಟನೆ ನವೆಂಬರ್ನಲ್ಲೂ ನಡೆದಿತ್ತು. ನವೆಂಬರ್ 19ರಂದು ಇಂದಿರಾ ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಭಾರತ್ ಜೋಡೋ ಯಾತ್ರೆಯಲ್ಲಿ ಕಾಂಗ್ರೆಸ್ ನಾಯಕನ ಜೊತೆ ಮಹಿಳೆಯರು ಹೆಜ್ಜೆ ಹಾಕಿದ್ದರು.
ನಿನ್ನೆ ಮಾಜಿ ರಕ್ಷಣಾ ಅಧಿಕಾರಿಗಳು ಭಾಗಿ: ಭಾನುವಾರದ ಯಾತ್ರೆಯಲ್ಲಿ ಮಾಜಿ ಸೇನಾ ಮುಖ್ಯಸ್ಥ ಜನರಲ್ ದೀಪಕ್ ಕಪೂರ್ ಮತ್ತು ಇತರ ನಿವೃತ್ತ ಉನ್ನತ ರಕ್ಷಣಾ ಅಧಿಕಾರಿಗಳು ಭಾಗಿಯಾಗಿದ್ದರು. ಲೆಫ್ಟಿನೆಂಟ್ ಜನರಲ್ ಆರ್.ಕೆ.ಹೂಡಾ, ಲೆಫ್ಟಿನೆಂಟ್ ಜನರಲ್ ವಿ.ಕೆ.ನರುಲಾ, ಏರ್ ಮಾರ್ಷಲ್ ಪಿ.ಎಸ್.ಭಂಗು, ಮೇಜರ್ ಜನರಲ್ ಸತ್ಬೀರ್ ಸಿಂಗ್ ಚೌಧರಿ, ಮೇಜರ್ ಜನರಲ್ ಧರ್ಮೇಂದರ್ ಸಿಂಗ್, ಕರ್ನಲ್ ಜಿತೇಂದರ್ ಗಿಲ್, ಕರ್ನಲ್ ಪುಷ್ಪೇಂದರ್ ಸಿಂಗ್, ಲೆಫ್ಟಿನೆಂಟ್ ಜನರಲ್ ಡಿಡಿಎಸ್ ಸಂಧು, ಮೇಜರ್ ಜನರಲ್ ಬಿಷಂಬರ್ ದಯಾಳ್ ಮತ್ತು ಕರ್ನಲ್ ರೋಹಿತ್ ಚೌಧರಿ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿದ್ದರು. ಇದಕ್ಕೂ ಮುನ್ನ, ಭಾರಿ ಚಳಿ ಮತ್ತು ಮಂಜು ಕವಿದ ವಾತಾವರಣದಲ್ಲೇ ಅನೇಕ ಬೆಂಬಲಿಗರು ಶರ್ಟ್‌ರಹಿತವಾಗಿ ಡ್ಯಾನ್ಸ್ ಮಾಡುವ ಮೂಲಕ ರಾಹುಲ್ ಗಾಂಧಿ ಯಾತ್ರೆಗೆ ಬೆಂಬಲ ವ್ಯಕ್ತಪಡಿಸಿದ್ದರು.
ಈ ತಿಂಗಳಾಂತ್ಯಕ್ಕೆ ಪಾದಯಾತ್ರೆ ಮುಕ್ತಾಯ: ಇದೀಗ ಭಾರತ್ ಜೋಡೋ ಯಾತ್ರೆ ಹರಿಯಾಣದಲ್ಲಿ ಸಾಗುತ್ತಿದ್ದು, ಪಂಜಾಬ್ ಮತ್ತು ಹಿಮಾಚಲ ಪ್ರದೇಶದ ಮೂಲಕ ಜನವರಿ 20ರಂದು ಜಮ್ಮು ಮತ್ತು ಕಾಶ್ಮೀರ ತಲುಪಲಿದೆ. ಜಮ್ಮು ಮತ್ತು ಕಾಶ್ಮೀರದಂತಹ ಸೂಕ್ಷ್ಮ ಪ್ರದೇಶವನ್ನು ತಲುಪುವ ಹಿನ್ನೆಲೆಯಲ್ಲಿ ಉನ್ನತ ಕಾಂಗ್ರೆಸ್ ನಾಯಕರು ಜಮ್ಮು ಮತ್ತು ಕಾಶ್ಮೀರ ಹಾಗೂ ಪಂಜಾಬ್ ಸರ್ಕಾರಗಳೊಂದಿಗೆ ಭದ್ರತೆಯಲ್ಲಿ ಯಾವುದೇ ಲೋಪ ಉಂಟಾಗದಂತೆ ನೋಡಿಕೊಳ್ಳಲು ಅಲ್ಲಿನ ಆಡಳಿತದ ಜೊತೆ ಚರ್ಚೆ ನಡೆಸಲಿದ್ದಾರೆ.
ಕಳೆದ ಸೆಪ್ಟೆಂಬರ್ 7ರಂದು ಕನ್ಯಾಕುಮಾರಿಯಿಂದ ಆರಂಭವಾದ ಭಾರತ್ ಜೋಡೋ ಪಾದಯಾತ್ರೆ ಜನವರಿ 30ರಂದು ಕಾಶ್ಮೀರದಲ್ಲಿ ರಾಷ್ಟ್ರಧ್ವಜ ಹಾರಿಸುವ ಮೂಲಕ ಅಂತ್ಯಗೊಳ್ಳಲಿದೆ. ಕಣಿವೆ ರಾಜ್ಯದಲ್ಲಿ ಭಾರತ್ ಜೋಡೋ ಯಾತ್ರೆಯಲ್ಲಿ ಇಲ್ಲಿನ ಪ್ರಮುಖ ರಾಜಕೀಯ ನಾಯಕರಾದ ನ್ಯಾಷನಲ್ ಕಾನ್ಫರೆನ್ಸ್ನ ಫಾರುಖ್ ಅಬ್ದುಲ್ಲಾ ಮತ್ತು ಒಮರ್ ಅಬ್ದುಲ್ಲಾ, ಪಿಡಿಪಿಯ ಮೆಹಾಬೂಬ್ ಮುಫ್ತಿ, ಸಿಪಿಐ (ಎಂ)ನ ಮೊಹದ್ ಯೂಸಫ್ ತರಿಗಾಮಿ ಕೂಡ ರಾಹುಲ್ ಗಾಂಧಿ ಯಾತ್ರೆಯಲ್ಲಿ ಹೆಜ್ಜೆ ಹಾಕಲಿದ್ದಾರೆ.
ಇದನ್ನೂ ಓದಿ: ಉತ್ತರ ಭಾರತದಲ್ಲಿ ದಾಖಲೆಯ ಚಳಿ, ದಟ್ಟ ಮಂಜಿಗೆ ಜನಜೀವನ ಅಸ್ತವ್ಯಸ್ತ