ಕಾಶ್ಮೀರ : ಗುಂಡು ತಾಗಿದ್ದ ಮಹಿಳೆಗೆ ಹೃದಯ ಸಂಬಂಧಿತ ಖಾಯಿಲೆ ಇದೆ ಎಂದು ಸುಳ್ಳು ಹೇಳಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲು ಯತ್ನಿಸಿದ್ದ ಘಟನೆ ಕಾಶ್ಮೀರ ಕಣಿವೆಯಲ್ಲಿ ನಡೆದಿದೆ.
ಡರ್ಗಾನಿ ಗುಂಡ್ ಪ್ರದೇಶದಲ್ಲಿ ಕಳೆದ ರಾತ್ರಿ ಗುಲಾಮ್ ನಬಿ ಎಂಬುವರ ಪತ್ನಿ ಶಕೀಲಾ ಬಾನು ಅವರಿಗೆ ಗುಂಡು ತಗುಲಿ ಗಾಯಗೊಂಡಿದ್ದರು. ಆದ್ರೆ, ಆಕೆಯ ಪತಿ ಮತ್ತು ಸಂಬಂಧಿಕರು ಈ ಘಟನೆ ಬಹಿರಂಗಪಡಿಸದೆ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಹೊಟ್ಟೆ ನೋವು, ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿರುವ ಬಗ್ಗೆ ವೈದ್ಯರಿಗೆ ತಿಳಿಸಿದ್ದಾರೆ. ಆದ್ರೆ, ಆ ಸ್ಥಳೀಯ ಆಸ್ಪತ್ರೆ ಸಿಬ್ಬಂದಿ ಶ್ರೀನಗರ ಎಸ್‌ಎಂಹೆಚ್‌ಎಸ್‌ಗೆ ಕರೆದೊಯ್ಯಲು ತಿಳಿಸಿದ್ದು, ಅಲ್ಲಿನ ಆಸ್ಪತ್ರೆ ಸಿಬ್ಬಂದಿ ಗುಂಡು ತಗುಲಿ ಆದ ಗಾಯ ಪತ್ತೆ ಮಾಡಿದ್ದಾರೆ.
ಇದನ್ನೂ ಓದಿ: ಜಮ್ಮುಕಾಶ್ಮೀರ ಹಿಮಪಾತ: ಪ್ರವಾಸಿಗರ ಮನಕ್ಕೆ ಮುದ ನೀಡುತ್ತಿದೆ 'ಗುಲ್ಮಾರ್ಗ್'
ಪೊಲೀಸರಿಗೆ ಮಾಹಿತಿ ದೊರೆತ ಕೂಡಲೇ ಪೊಲೀಸ್ ತಂಡವು ಗಾಯಗೊಂಡ ಮಹಿಳೆಯ ಮನೆ ಬಳಿ ತಲುಪಿ ಪರಿಶೀಲಿಸಿದ್ದಾರೆ. ಆ ಸಂದರ್ಭ ಸಿಕ್ಕ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣ ಸಂಬಂಧ ತನಿಖೆ ಮುಂದುವರೆಯುತ್ತಿದೆ.