ಲೂಧಿಯಾನ(ಪಂಜಾಬ್): ಇತ್ತೀಚೆಗಷ್ಟೇ ಪಂಜಾಬ್ ಸರ್ಕಾರ 2023ರ ಬಜೆಟ್ ಮಂಡಿಸಿದೆ. ಅದರಲ್ಲಿ ಹಲವು ಪ್ರಸ್ತಾವನೆಗನ್ನು ಈಡೇರಿಸಲಾಗಿದ್ದರೂ ಮಹಿಳೆಯರಿಗೆ ತಿಂಗಳಿಗೆ ಒಂದು ಸಾವಿರ ರೂಪಾಯಿ ಪಿಂಚಣಿ ನೀಡುವಲ್ಲಿ ವಿಫಲವಾಗಿದೆ. ಸರ್ಕಾರದ ವೈಫಲ್ಯದ ವಿರುದ್ಧ ಮಹಿಳೆಯರು ಪ್ರತಿಭಟನೆ ನಡೆಸಿದ್ದಾರೆ. ಸರ್ಕಾರ ಮಹಿಳೆಯರಿಗೆ ನೀಡಿರುವ ಭರವಸೆಗಳನ್ನು ಈಡೇರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ನೀಡಿದ ಭರವಸೆ ಈಡೇರಿಸದ ಸರ್ಕಾರ: ಮಹಿಳೆಯರಿಗೆ ತಿಂಗಳಿಗೆ ಸಾವಿರಾರು ರೂಪಾಯಿ ಪಿಂಚಣಿ ನೀಡುವ ಪ್ರಸ್ತಾವನೆ ಭರವಸೆಯಾಗಿಯೇ ಉಳಿದಿದೆ. ಉಳಿದ ಸರ್ಕಾರಗಳಂತೆ ಆಮ್ ಆದ್ಮಿ ಸರ್ಕಾರ ಕೂಡ ಮಹಿಳೆಯನ್ನು ದಾಳವಾಗಿ ಬಳಸಿಕೊಂಡಿದೆ ಎಂದು ಆರೋಪಿಸಿದ್ದಾರೆ. ಆಮ್ ಆದ್ಮಿ ಪಕ್ಷಕ್ಕೆ ಮಹಿಳೆಯರೇ ಹೆಚ್ಚಾಗಿ ಮತ ಹಾಕಿದ್ದಾರೆ. ಆದರೆ, ಸರ್ಕಾರ ನೀಡಿದ ಭರವಸೆ ಇನ್ನೂ ಈಡೇರಿಲ್ಲ. ಮಹಿಳೆಯರ ಖಾತೆಗೆ ಇನ್ನೂ ಹಣ ಜಮಾ ಆಗಿಲ್ಲ ಎಂದು ಪ್ರತಿಭಟನಾ ನಿರತ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳವಳ ವ್ಯಕ್ತಪಡಿಸಿದ ಶಿಕ್ಷಕರು: ಮತ್ತೊಂದೆಡೆ, ಪಂಜಾಬ್‌ನ ಐದು ವಿಶ್ವವಿದ್ಯಾಲಯಗಳಿಗೆ ಸರ್ಕಾರ ಬಜೆಟ್‌ನಲ್ಲಿ 998 ಕೋಟಿ ರೂಪಾಯಿಗಳನ್ನು ಮೀಸಲಿರಿಸಿದೆ. ಆದರೆ, ಇದು ಹಿಂದಿನ ವರ್ಷಗಳ ಬಜೆಟ್‌ಗಿಂತ ಕಡಿಮೆಯಾಗಿದೆ. ಈ ಬಗ್ಗೆ ಶಿಕ್ಷಕರು ಕಳವಳ ವ್ಯಕ್ತಪಡಿಸಿದ್ದಾರೆ. ಸರ್ಕಾರ ಇತ್ತ ಗಮನ ಹರಿಸಬೇಕು. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವುದು ಆಮ್ ಆದ್ಮಿ ಪಕ್ಷದ ಮುಖ್ಯ ಗುರಿಯಾಗಿದೆ. ಆದರೆ, ಬಜೆಟ್ ನಲ್ಲಿ ವಿಶ್ವವಿದ್ಯಾಲಯಗಳ ಅನುದಾನವನ್ನು ಮತ್ತಷ್ಟು ಕಡಿಮೆ ಮಾಡಿರುವುದು ಶಿಕ್ಷಣದ ಬಗ್ಗೆ ಸರ್ಕಾರದ ಉದ್ದೇಶ ಎಷ್ಟು ಉತ್ತಮವಾಗಿದೆ ಎಂಬುದನ್ನು ತೋರಿಸುತ್ತದೆ ಎಂದು ಕಿಡಿ ಕಾರಿದ್ದಾರೆ. ಸರ್ಕಾರ ವಿವಿಗಳ ಅನುದಾನವನ್ನು ಹಿಂದಿನ ವರ್ಷಗಳಿಗಿಂತ ಕಡಿಮೆ ಮಾಡಿರುವುದು ಆತಂಕಕಾರಿ ಸಂಗತಿ. ವಿದ್ಯಾರ್ಥಿಗಳಿಗೆ ಶಿಕ್ಷಣ ಬಹಳ ಮುಖ್ಯ. ಆದರೆ ಬಜೆಟ್‌ನಲ್ಲಿ ವಿಶ್ವವಿದ್ಯಾಲಯಗಳಿಗೆ ಅನುದಾನವನ್ನು ಮತ್ತಷ್ಟು ಕಡಿಮೆ ಮಾಡಿದೆ ಎಂದು ಎಂದು ಶಿಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ಧಾರೆ.
ಹಾಸ್ಯಗಾರನಿಂದ ವಿನೂತನ ಪ್ರತಿಭಟನೆ: ಮಹಿಳೆಯರಿಗೆ ಒಂದು ಸಾವಿರ ರೂ. ರೂಪಾಯಿ ಪಿಂಚಣಿ ಭರವಸೆ ಈಡೇರಿಸದ ಸರ್ಕಾರವನ್ನು ನಿದ್ದೆಯಿಂದ ಎಬ್ಬಿಸಲು ಸಮಾಜ ಸೇವಕರೊಬ್ಬರು ಇತ್ತೀಚೆಗೆ ವಿನೂತನ ರೀತಿಯಲ್ಲಿ ಪ್ರತಿಭಟನೆ ಮಾಡಿದ್ದರು. ಆಮ್ ಆದ್ಮಿ ಪಕ್ಷವು ಪಂಜಾಬ್ನಲ್ಲಿ ಅಧಿಕಾರಕ್ಕೆ ಬರುವ ಮುನ್ನ ಜನರಿಗೆ ಹಲವು ಭರವಸೆಗಳನ್ನು ನೀಡಿತ್ತು. ಈ ಪೈಕಿ ಮಹಿಳೆಯರಿಗೆ ಒಂದು ಸಾವಿರ ರೂ. ರೂಪಾಯಿ ಪಿಂಚಣಿ ನೀಡುವ ಭರವಸೆಯೂ ಒಂದಾಗಿದೆ. ಆದರೆ, ಅಧಿಕಾರಕ್ಕೆ ಬಂದು ಹಲವು ತಿಂಗಳು ಕಳೆದರೂ ಆಮ್ ಆದ್ಮಿ ಪಕ್ಷ ಈ ಭರವಸೆ ಈಡೇರಿಸಿಲ್ಲ. ಹೀಗಾಗಿಯೇ ಹಾಸ್ಯಗಾರ ಮತ್ತು ಸಮಾಜ ಸೇವಕ ಟಿಟು ಬನಿಯಾ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ಮಾಡಿ ಸರ್ಕಾರಕ್ಕೆ ಚಾಟಿ ಬೀಸಿದ್ದರು.
ಆಮ್ ಆದ್ಮಿ ಪಕ್ಷದ ಸರ್ಕಾರ ಮಹಿಳೆಯರಿಗೆ ನೀಡಿದ ಭರವಸೆಯನ್ನು ಇನ್ನೂ ಈಡೇರಿಸಿಲ್ಲ. ಒಂದು ಸಾವಿರ ರೂಪಾಯಿ ಹಣವನ್ನು ಮಹಿಳೆಯರ ಖಾತೆಗೆ ಹಾಕಿಲ್ಲ. ಆದರೆ, ಶಾಸಕರ ಪತ್ನಿಯರಿಗೆ ಒಂದು ಸಾವಿರ ರೂಪಾಯಿ ಪಿಂಚಣಿ ನೀಡಲು ಸಿದ್ಧವಾಗಿದೆ. ಹಾಗಾಗಿ ಪಿಂಚಣಿ ಪಡೆಯಬೇಕಾದರೆ ಶಾಸಕರ ಸಂಬಂಧಿಕರೆಂಬ ಗುರುತಿನ ಚೀಟಿ ತರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಟಿಟು ಬನಿಯಾ ಸರ್ಕಾರದ ಮಾಡಿದ್ದ ಘೋಷಣೆ ಪತ್ರಗಳನ್ನು ಪ್ರದರ್ಶಿಸುತ್ತಾ ಟೀಕಿಸಿದ್ದರು.
ಇದನ್ನೂ ಓದಿ: ಮಹಿಳೆಯರ ಪಿಂಚಣಿ ಭರವಸೆ ಈಡೇರಿಸದ ಸರ್ಕಾರ: ಹಾಸ್ಯಗಾರನಿಂದ ವಿನೂತನ ಪ್ರತಿಭಟನೆ