ನವದೆಹಲಿ: ಮಹಿಳೆಯರು ಬೀದಿಯಿಂದ ಕೆಲಸದ ಸ್ಥಳದವರೆಗೂ ಸುರಕ್ಷಿತವಾಗಿರಬೇಕು ಮತ್ತು ಗೌರವಿಸಲ್ಪಡಬೇಕು. ಇದನ್ನು ಖಚಿತಪಡಿಸಿಕೊಳ್ಳಲು ಆಡಳಿತ, ಪೊಲೀಸ್ ಮತ್ತು ನ್ಯಾಯಾಂಗ ವ್ಯವಸ್ಥೆ ಜತೆ ಪ್ರತಿಯೊಬ್ಬ ಪ್ರಜೆಯೂ ತಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ತಿಳಿಸಿದರು.
ದೇಶದ ಎಲ್ಲಾ ಸೈನಿಕ ಶಾಲೆಗಳಲ್ಲಿ ಈಗ ಬಾಲಕಿಯರಿಗೂ ಅವಕಾಶವಿದೆ. ಶಿಕ್ಷಣವಾಗಲಿ ಅಥವಾ ಕ್ರೀಡೆಯಾಗಲಿ ಎಲ್ಲ ಕ್ಷೇತ್ರಗಳಲ್ಲೂ ನಮ್ಮ ಹೆಣ್ಣು ಮಕ್ಕಳು ಅಭೂತಪೂರ್ವ ಪ್ರದರ್ಶನ ನೀಡುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಭಾರತದ ಹೆಣ್ಣು ಮಕ್ಕಳು ತಮ್ಮ ಸ್ಥಾನಮಾನವನ್ನು ಪಡೆಯಲು ಉತ್ಸುಕರಾಗಿದ್ದಾರೆ. ಪ್ರತಿಯೊಂದು ವೃತ್ತಿ ಮತ್ತು ಕೆಲಸದ ಕ್ಷೇತ್ರದಲ್ಲಿ ಮಹಿಳೆಯರಿಗೆ ಸಮಾನತೆ ಇರುವಂತೆ ನಾವು ನೋಡಿಕೊಳ್ಳಬೇಕು ಎಂದು ಪ್ರಧಾನಿ ಹೇಳಿದರು.
ಮಹಿಳೆಯರಿಗೆ ಸುರಕ್ಷತೆ ಒದಗಿಸಲಾಗಿದೆಯೇ ಮತ್ತು ಅವರೊಂದಿಗೆ ಗೌರವದಿಂದ ನಡೆದುಕೊಳ್ಳುತ್ತಿದ್ದೇವೆಯೇ ಅನ್ನೋದನ್ನು ಖಚಿತಪಡಿಸಿಕೊಳ್ಳಲು ದೇಶವು ಪ್ರತಿಜ್ಞೆ ಮಾಡಬೇಕು. ಬೀದಿಯಿಂದ ಕೆಲಸದ ಸ್ಥಳದವರೆಗೆ, ಎಲ್ಲೆಡೆಯೂ ಮಹಿಳೆಯರಿಗೆ ಭದ್ರತೆ, ಗೌರವದ ಭಾವನೆ ಇದೆ. ಇದಕ್ಕಾಗಿ ದೇಶದ ಆಡಳಿತ, ಪೊಲೀಸ್ ಮತ್ತು ನ್ಯಾಯಾಂಗ ವ್ಯವಸ್ಥೆ, ಪ್ರತಿಯೊಬ್ಬ ಪ್ರಜೆಯೂ ತಮ್ಮ ಜವಾಬ್ದಾರಿಯನ್ನು ನೂರಕ್ಕೆ ನೂರರಷ್ಟು ಪೂರೈಸಬೇಕು ಅನ್ನೋದನ್ನು ನಾವು ಖಚಿತಪಡಿಸಿಕೊಳ್ಳಬೇಕು ಎಂದರು.
ಇದನ್ನೂ ಓದಿ: ವಿಭಜನೆಯ ನೋವು ಇನ್ನೂ ಭಾರತದ ಎದೆಯನ್ನು ಚುಚ್ಚುತ್ತಿದೆ: ಪಿಎಂ ಮೋದಿ