ಮುಂಬೈ: ನಾನು ನಿನ್ನನ್ನು ಮದುವೆಯಾಗುತ್ತೇನೆ. ಈ ಇಳಿಯ ವಸ್ಸಿನಲ್ಲಿ ನಾನು ನಿನ್ನೊಂದಿಗೆ ಇರುತ್ತೇನೆ. ಇದು ಆ ದೇವರ ಆಣೆ ಎಂದು ಮುದ್ದು - ಮುದ್ದಾಗಿ ಮಾತನಾಡಿದ ಮಹಿಳೆಯ ಮಾತಿಗೆ ಮಾರು ಹೋದ 72 ವರ್ಷದ ಅಜ್ಜನೊಬ್ಬ ಕೋಟಿಗೂ ಹೆಚ್ಚು ಹಣ ಕಳೆದುಕೊಂಡಿರುವ ಘಟನೆ ಅಂಧೇರಿಯಲ್ಲಿ ನಡೆದಿದೆ.
ಮಲಾಡ್ ಪ್ರದೇಶದಲ್ಲಿ ವಾಸಿಸುವ 73 ವರ್ಷದ ಜೆರಾನ್ ಡಿಸೋಜಾ 2010 ರಲ್ಲಿ ತನ್ನ ಆಸ್ತಿಯನ್ನು ಮಾರಿದರು. ಬಂದ ಹಣದಲ್ಲಿ 2 ಕೋಟಿಯನ್ನು ಖಾಸಗಿ ಬ್ಯಾಂಕಿನಲ್ಲಿ ಫಿಕ್ಸಡ್ ಡಿಪಾಸಿಟ್ ಮಾಡಿದ್ದರು.
ಆ ಅಜ್ಜ ಡಿಪಾಸಿಟ್ನಿಂದ ದೊಡ್ಡ ಮೊತ್ತದ ಬಡ್ಡಿಯನ್ನು 2019ರಲ್ಲಿ ಹಿಂತೆಗೆದುಕೊಂಡಿದ್ದರು. ಆ ಹಣದ ಮೇಲೆ ಬ್ಯಾಂಕಿನಲ್ಲಿ ಕೆಲಸ ಮಾಡುವ ಶಾಲಿನಿಯ ಕಣ್ಣು ಬಿದ್ದಿತ್ತು. ಆ ಹಣವನ್ನು ಲಪಟಾಯಿಸುವ ಉದ್ದೇಶದಿಂದ ಶಾಲನಿ ಜೆರಾನ್ನೊಂದಿಗೆ ಪರಿಚಯ ಬೆಳಸಿಕೊಂಡರು. ಮದುವೆಯಾಗುವುದಾಗಿ ಮುದ್ದು - ಮುದ್ದಾದ ಮಾತುಗಳನ್ನಾಡಿದರು. ಇಬ್ಬರು ಲವರ್ಗಳಂತೆ ರೆಸ್ಟೋರೆಂಟ್‌ಗಳಿಗೆ ಮತ್ತು ಔಟಿಂಗ್ಗೆ ಹೋದರು.
ಕೆಲವು ದಿನಗಳ ಬಳಿಕ ಉದ್ಯಮವನ್ನು ಪ್ರಾರಂಭಿಸುತ್ತಿರುವುದಾಗಿ ಜೆರಾನ್ಗೆ ಹೇಳಿದಳು. ಆ ಉದ್ಯಮದಲ್ಲಿ ಹೂಡಿಕೆ ಮಾಡಲು ಶಾಲಿನಿ ಗೆರನ್‌ಗೆ ಹೇಳಿದ್ದಾಳೆ. ಬಾವಿ ಪತ್ನಿಯೆಂದು ಜೆರಾನ್ 2020ರ ಡಿಸೆಂಬರ್‌ನಲ್ಲಿ ರೂ. 1.3 ಕೋಟಿ ಹಣ ಶಾಲಿನಿ ಅಕೌಂಟ್ಗೆ ಹಾಕಿದ್ದಾನೆ. ನಗದು ಖಾತೆಗೆ ಬಿದ್ದ ನಂತರ ಶಾಲಿನಿ ಕೈ ಎತ್ತಿದ್ದಾಳೆ.
ಶಾಲಿನಿ ತನ್ನ ಫೋನ್ ಸ್ವಿಚ್ ಆಫ್ ಮಾಡಿದ್ದಾಳೆ. ಆಕೆಯನ್ನು ಭೇಟಿ ಮಾಡಲು ಜೆರಾನ್ ಅನೇಕ ಬಾರಿ ಪ್ರಯತ್ನಿಸಿದ್ರೂ ಸಾಧ್ಯವಾಗಿಲ್ಲ. ಇದರಿಂದ ಮೋಸ ಹೋಗಿದ್ದೇನೆ ಎಂದು ತಿಳಿದ ಸಂತ್ರಸ್ತ ಅಜ್ಜ ಕಳೆದ ಡಿಸೆಂಬರ್‌ನಲ್ಲಿ ಪೊಲೀಸರಿಗೆ ದೂರು ನೀಡಿದ್ದರು. ವಿವರಗಳನ್ನು ಪರಿಶೀಲಿಸಿದ ನಂತರ ಅಜ್ಜನಿಗೆ ವಂಚನೆ ನಡೆದಿರುವುದು ದೃಢಪಟ್ಟಿದೆ. ಅಂಧೇರಿ ಪೊಲೀಸರು ಹೊಸ ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗಾಗಿ ಜಾಲ ಬೀಸಿದ್ದಾರೆ.