ETV Bharat / bharat

ಪ್ರೀತಿಸಿ, ಮೋಸ ಮಾಡಿದ ಯುವಕ.. ಆ್ಯಸಿಡ್ ದಾಳಿ ನಡೆಸಿದ ಯುವತಿ - ಪ್ರಿಯಕರನ ಮೇಲೆ ಯುವತಿಯಿಂದ ಆ್ಯಸಿಡ್ ದಾಳಿ

ಪ್ರೀತಿಸಿ, ಕೆಲ ತಿಂಗಳ ಕಾಲ ಲಿವ್​ ಇನ್​​ ರಿಲೇಷನ್​​ನಲ್ಲಿ ಉಳಿದುಕೊಂಡು ತದನಂತರ ಯುವತಿ ಜೊತೆ ಮದುವೆ ಮಾಡಿಕೊಳ್ಳಲು ಹಿಂದೇಟು ಹಾಕಿರುವ ಯುವಕನ ಮೇಲೆ ಆ್ಯಸಿಡ್​ ದಾಳಿ ನಡೆಸಿರುವ ಘಟನೆ ನಡೆದಿದೆ.

Women attacked his lover
Women attacked his lover
author img

By

Published : Dec 4, 2021, 7:53 PM IST

ಕೊಯಮತ್ತೂರು (ತಮಿಳುನಾಡು): ಮದುವೆಯಾಗುವುದಾಗಿ ನಂಬಿಸಿ ಲಿವ್ ಇನ್ ರಿಲೇಷನ್​​​ನಲ್ಲಿ ಉಳಿದಿದ್ದ ಯುವಕನ ಮೇಲೆ ಯುವತಿ ಆ್ಯಸಿಡ್​ ದಾಳಿ ನಡೆಸಿದ್ದಾಳೆ. ತಮಿಳುನಾಡಿನ ಕೊಯಮತ್ತೂರಿನಲ್ಲಿ ಈ ಘಟನೆ ನಡೆದಿದ್ದು, ಇಬ್ಬರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಯಂತಿ(27) ಹಾಗೂ ರಾಕೇಶ್​​(30) ಕಳೆದ ಕೆಲ ತಿಂಗಳಿಂದ ಕೊಯಮತ್ತೂರಿನ ಅಪಾರ್ಟ್​​​​​ಮೆಂಟ್​​​ನಲ್ಲಿ ಲಿವ್​​ ಇನ್​ ರಿಲೇಷನ್​​​ನಲ್ಲಿ ಉಳಿದಿದ್ದರು. ಆದರೆ, ಕೆಲ ದಿನಗಳ ಹಿಂದೆ ರಾಕೇಶ್​​​ ತಮ್ಮ ಸ್ವಃತ ಊರು ಕೇರಳಕ್ಕೆ ಭೇಟಿ ನೀಡಿದ್ದರು. ಈ ವೇಳೆ, ಬೇರೆ ಯುವತಿ ಜೊತೆ ಮದುವೆ ಮಾಡಿಕೊಂಡಿದ್ದಾಗಿ ತಿಳಿದು ಬಂದಿದ್ದು, ಇದರ ಬಗ್ಗೆ ಯಾವುದೇ ರೀತಿಯ ಸ್ಪಷ್ಟತೆ ಇಲ್ಲ.

ವಾಪಸ್​​ ಕೊಯಮತ್ತೂರಿಗೆ ಬಂದಿದ್ದ ರಾಕೇಶ್​​​​, ಜಯಂತಿ ಜೊತೆಗಿನ ಸಂಬಂಧ ಮುರಿದುಕೊಳ್ಳಲು ಮುಂದಾಗಿದ್ದಾನೆ. ಜೊತೆಗೆ ತಾನು ಬೇರೆ ಮದುವೆ ಮಾಡಿಕೊಂಡಿದ್ದಾಗಿ ತಿಳಿಸಿದ್ದಾನೆ. ಇದರಿಂದ ಆಕ್ರೋಶಗೊಂಡಿರುವ ಯುವತಿ ಆತನ ಮೇಲೆ ಆ್ಯಸಿಡ್​​ನಿಂದ ದಾಳಿ ನಡೆಸಿದ್ದಾಳೆ. ಇದರ ಬೆನ್ನಲ್ಲೇ ನಿದ್ರೆ ಮಾತ್ರೆ ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾಳೆ. ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಸ್ಥಳಕ್ಕಾಗಮಿಸಿದ್ದು, ಇಬ್ಬರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಇದನ್ನೂ ಓದಿರಿ: ಶಿವರಾಮ್​​ ಅಣ್ಣನ ಸಾವಿನ ಸುದ್ದಿ ಕೇಳಿ ಅತೀವ ನೋವಾಗಿದೆ: ಕುಂಬ್ಳೆ ಭಾವುಕ ಟ್ವೀಟ್

ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಜಯಂತಿ ವಿರುದ್ಧ ಸೆಕ್ಷನ್​​ 323,324 ಹಾಗೂ 326(A) ಅಡಿ ಪ್ರಕರಣ ದಾಖಲಾಗಿದ್ದು, ಜಯಂತಿ ವಿರುದ್ಧ ಸೆಕ್ಷನ್​​​ 417,420 ಅಡಿ ದೂರು ದಾಖಲಾಗಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.