ETV Bharat / bharat

ಪ್ರಿಯಕರನೊಂದಿಗೆ ಸರಸಕ್ಕಾಗಿ ಪತಿಯ ಕೊಲೆ; ಸರ್ಚ್​ ಹಿಸ್ಟರಿ ಬಿಚ್ಚಿಟ್ಟಿತ್ತು ಮಾಯಾಂಗಿನಿಯ ನಾಟಕ !

author img

By

Published : Jun 21, 2021, 1:08 PM IST

Updated : Jun 21, 2021, 6:01 PM IST

ಗೂಗಲ್​ ಸರ್ಚ್​ ಹಿಸ್ಟರಿ ನೀಡಿದ ಸುಳಿವಿನಿಂದ ವ್ಯಕ್ತಿಯೋರ್ವನ ಕೊಲೆಯ ಆರೋಪಿಗಳನ್ನು ಮಧ್ಯಪ್ರದೇಶದ ಪೊಲೀಸರು ಬಂಧಿಸಿದ್ದಾರೆ. ರಾಜ್ಯದ ಹರ್ಡಾ ಜಿಲ್ಲೆಯಲ್ಲಿ ಈ ಘಟನೆ ಜರುಗಿದ್ದು, ಬೆಚ್ಚಿ ಬೀಳಿಸುವಂತಿದೆ.

Google search history leads to arrest accused
ಗೂಗಲ್​ ಸರ್ಚ್​ ಹಿಸ್ಟರಿ ನೀಡಿತ್ತು ಹಂತಕರ ಸುಳಿವು

ಹರ್ಡಾ (ಮಧ್ಯಪ್ರದೇಶ): ಕುಟುಂಬವೊಂದರ ಒಡೆಯನ ಕೊಲೆ ತನಿಖೆ ಮಾಡುತ್ತಿದ್ದ ಪೊಲೀಸರಿಗೆ ಹಂತಕರ ಸುಳಿವು ಕೊಟ್ಟಿತ್ತು ಮೊಬೈಲ್​. ಗಂಡನ ಕೊಲೆಯಿಂದ ಬೆಚ್ಚಿಬಿದ್ದ ಪತ್ನಿಯೇ ಪತಿಯ ಸಾವಿನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಳು. ಆದರೆ ಹಂತಕರು ಬಿಟ್ಟಿದ್ದ ಆ ಒಂದೇ ಒಂದು ಸುಳಿವು ಇದೀಗ ಅವರನ್ನು ಕಂಬಿ ಎಣೆಸುವಂತೆ ಮಾಡಿದೆ.

ಹರ್ಡಾ ಜಿಲ್ಲೆಯ ಖೇಡಿಪುರ ಪ್ರದೇಶದಲ್ಲಿ ಜೂನ್ 18 ರಂದು ವ್ಯಕ್ತಿಯೋರ್ವನ ಕೊಲೆಯಾಗಿತ್ತು. ಆತನ ಹೆಸರು ಅಮೀರ್. ಈತ ಮಹಾರಾಷ್ಟ್ರದಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸ್​ ತನಿಖೆ ವೇಳೆ ಬಹಿರಂಗವಾಗಿದೆ. ಮೂಲತಃ ಹರ್ಡಾ ನಿವಾಸಿಯಾಗಿದ್ದ ಅಮೀರ್​ ಮಹಾರಾಷ್ಟ್ರದಲ್ಲಿ ಕೋವಿಡ್ -19 ಲಾಕ್‌ಡೌನ್ ಹೇರಿದ ನಂತರ ಮನೆಗೆ ಮರಳಿದ್ದ.

ಗಂಡ ಮನೆಗೆ ಬಂದರೆ ಖುಷಿ ಪಡಬೇಕು. ಆದರೆ ಪತಿ ಮನೆಯಲ್ಲಿರುವುದೇ ಪತ್ನಿ ತಬಸ್ಸುಮ್​ಗೆ ಸಹಿಸಲಾಗಲಿಲ್ಲ. ಹಣಕಾಸಿನ ತೊಂದರೆಯಿಂದ ಬಳಲುತ್ತಿದ್ದ ತಬಸ್ಸುಮ್ ಸಹಾಯಕ್ಕಾಗಿ ಇರ್ಫಾನ್ ಎಂಬ ಇನ್ನೊಬ್ಬ ವ್ಯಕ್ತಿಯನ್ನು ಅವಲಂಬಿಸುತ್ತಿದ್ದಳು. ಅದು ಕೇವಲ ದುಡ್ಡು ಕಾಸಿನ ಸಂಬಂಧವಾಗಿ ಉಳಿದಿರಲಿಲ್ಲ, ಬದಲಿಗೆ ಇಬ್ಬರ ನಡುವೆ ಲವ್ವಿಡವ್ವಿ ಶುರುವಾಗಿತ್ತು.

ಗಂಡನ ಹತ್ಯೆಗೆ ಸಂಚು!

ದೂರದೂರಿನಲ್ಲಿರುವ ಪತಿ ಅಮೀರ್​ಗೆ ಈ ವಿಚಾರ ತಿಳಿದಿರಲಿಲ್ಲ. ಅಮೀರ್​ ಇಲ್ಲದ ಸಮಯದಲ್ಲಿ ಹಾಯಾಗಿದ್ದ ತಬಸ್ಸುಮ್​-ಇರ್ಫಾನ್​ಗೆ ಆತ ಮನೆಗೆ ಬಂದಿದ್ದೇ ತಲೆನೋವಾಗಿ ಪರಿಣಮಿಸಿತ್ತು. ಇದೇ ಕಾರಣಕ್ಕೆ ಗಂಡನ ಹತ್ಯೆಗೆ ಕತ್ತಿ ಮಸೆಯಲು ಶುರು ಮಾಡಿದ್ದಾಳೆ. ಇದಕ್ಕೆಂದು ಹಲವು ಉಪಾಯಗಳನ್ನು ಹುಡುಕಿದ್ದಾಳೆ. ತನ್ನ ಇನಿಯನ ಜತೆ ಸೇರಿ ಭರ್ಜರಿ ಸಂಚನ್ನು ಹೆಣೆದಿದ್ದಾಳೆ.

ಪೊಲೀಸರ ಪ್ರಕಾರ, ಅಮೀರ್ ಆಸ್ತಮಾದಿಂದ ಬಳಲುತ್ತಿದ್ದ. ಅದಕ್ಕೆ ನಿಯಮಿತವಾಗಿ ಔಷಧಿ ತೆಗೆದುಕೊಳ್ಳುತ್ತಿದ್ದ. ಇದನ್ನು ಅರಿತಿದ್ದ ತಬಸ್ಸುಮ್ ಪತಿ ಅಮೀರ್ ತೆಗೆದುಕೊಳ್ಳುತ್ತಿದ್ದ ಅಸ್ತಮಾ ಔಷಧಿಯನ್ನು ಬದಲಾಯಿಸಿದ್ದಾಳೆ. ಇದರಿಂದಾಗಿ ಅಮೀರ್​ ಪ್ರಜ್ಞೆ ತಪ್ಪಿದ್ದಾನೆ.

ಸುತ್ತಿಗೆಯಿಂದ ಹೊಡೆದು ಕೊಲೆ!

ನಂತರ, ರಾತ್ರಿಯ ಸಮಯದಲ್ಲಿ ತಬಸ್ಸುಮ್ ಪ್ರಿಯಕರ ಇರ್ಫಾನ್​ ಮನೆಗೆ ಬಂದಿದ್ದಾನೆ. ಇಬ್ಬರು ಸೇರಿ ಅಮೀರ್​ನ ಕೈ-ಕಾಲುಗಳನ್ನು ಸ್ಕಾರ್ಫ್​ನಿಂದ ಕಟ್ಟಿಹಾಕಿ ಸುತ್ತಿಗೆಯಿಂದ ಹಲ್ಲೆ ಮಾಡಿ, ಕೊಲೆ ಮಾಡಿದ್ದಾರೆ. ತನಿಖೆಯನ್ನು ದಾರಿ ತಪ್ಪಿಸಲು, ಪತಿಯ ಪ್ರಾಣ ಹೋದ ಬಳಿಕ ತಬಸ್ಸುಮ್​ ಸ್ವತಃ ತಾನೇ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.

ತರುವಾಯ, ಪೊಲೀಸ್ ತಂಡ ಘಟನಾ ಸ್ಥಳಕ್ಕೆ ಬಂದು ತನಿಖೆಯನ್ನು ಪ್ರಾರಂಭಿಸಿದೆ. ಆರಂಭದಲ್ಲಿ, ಕೊಲೆಗೆ ಕಾರಣ ದರೋಡೆ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಆದರೆ ತನಿಖಾಧಿಕಾರಿಗಳು, ಘಟನಾ ಸ್ಥಳದಲ್ಲಿದ್ದ ಪುರಾವೆಗಳನ್ನು ಪರಿಶೀಲಿಸಿದಾಗ ಗಂಡನ ಕೊಲೆಯಲ್ಲಿ ಹೆಂಡತಿಯ ಪಾತ್ರ ಇರಬಹುದೆಂಬ ಅನುಮಾನ ಹುಟ್ಟಿಕೊಂಡಿದೆ.

ಮೊಬೈಲ್​ ಕಾಲ್​ ಹಿಸ್ಟರಿಯಿಂದ ಕಳಚಿತ್ತು ಮುಖವಾಡ!

ಆದ್ದರಿಂದ ಪೊಲೀಸರು ಸೈಬರ್ ಸೆಲ್‌ನಿಂದ ತಬಸ್ಸುಮ್‌ನ ಮೊಬೈಲ್​ ಕರೆಯ ವಿವರಗಳನ್ನು ಪಡೆದುಕೊಂಡಿದ್ದಾರೆ. ಅವಳ ಕಾಲ್​ ಹಿಸ್ಟರಿಯನ್ನು ಗಮನಿಸಿದಾಗ, ತಬಸ್ಸುಮ್ ಮತ್ತು ಇರ್ಫಾನ್ ನಡುವೆ ಅನೇಕ ಫೋನ್ ಕರೆಗಳು ನಡೆದಿರುವುದು ಗೊತ್ತಾಗಿದೆ. ಇದು ಅವರ ಅನುಮಾನಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ.

ತನಿಖಾಧಿಕಾರಿಗಳು, ನಂತರ ಆಕೆಯ ಇಂಟರ್ನೆಟ್ ಹುಡುಕಾಟ ಇತಿಹಾಸವನ್ನು ಪರಿಶೀಲಿಸಿದ್ದಾರೆ. ಆಕೆ ಅಂತರ್ಜಾಲದಲ್ಲಿ ಕೊಲ್ಲುವ ವಿಧಾನಗಳು ಮತ್ತು ದೇಹವನ್ನು ಹೇಗೆ ವಿಲೇವಾರಿ ಮಾಡುವುದು ಎಂದು ಹುಡುಕಿರುವ ವಿಚಾರ ಬಯಲಾಗಿದೆ. ಹೀಗೆ ಹುಡುಕಾಟ ನಡೆಸಿದಾಗ ಬಂದ ಕೊಲೆಯ ವಿಧಾನವನ್ನೇ ತಬಸ್ಸುಮ್ ತನ್ನ ಗಂಡನ ಕೊಲೆಗೆ ಬಳಸಿದ್ದಾಳೆ. ಇದನ್ನು ಅನುಸರಿಸಿ, ತಬಸ್ಸುಮ್​ನನ್ನು ವಿಚಾರಣೆಗೊಳಪಡಿಸಿದಾಗ, ಇರ್ಫಾನ್ ಸಹಾಯದಿಂದ ಅವಳು ಅಮೀರ್​ನನ್ನು ಕೊಂದಿದ್ದಾಳೆ ಎಂಬ ಭಯಾನಕ ಸತ್ಯ ಬಹಿರಂಗವಾಗಿದೆ.

ಅಪರಾಧದಲ್ಲಿ ಬಳಸಿದ ಅಸ್ತ್ರ, ರಕ್ತದ ಬಟ್ಟೆಗಳು, ಮೊಬೈಲ್ ಫೋನ್ ಮತ್ತು ಕಟ್ಟಿಹಾಕಲು ಬಳಸಿದ ಬಟ್ಟೆಯನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆ ಮುಂದುವರೆಸಿದ್ದಾರೆ.

Last Updated : Jun 21, 2021, 6:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.