ಚಿನ್ಸುರಾ(ಪಶ್ಚಿಮ ಬಂಗಾಳ): ಶ್ಯಾಮ್ಬಬುರ್ ಘಾಟ್ ಪ್ರದೇಶದಲ್ಲಿ ಶನಿವಾರ ಮನೆಯೊಂದರ ಬೀರುವಿನಲ್ಲಿ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಭಾರತಿ ಧಾರ್(62) ಎಂದು ಮೃತರು.
ಭಾರತಿ ಧಾರ್ ತಮ್ಮ ಪತಿ ಕಾಶಿನಾಥ್ ಧಾರ್ ಅವರೊಂದಿಗೆ ಶ್ಯಾಮ್ಬಬುರ್ ಘಾಟ್ ಬಳಿ ತಗಡಿನ ಮನೆಯಲ್ಲಿ ವಾಸಿಸುತ್ತಿದ್ದರು. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿ ಕಾಶಿನಾಥ್ ಪತ್ನಿಯನ್ನು ಕೊಂದು ಬೀರುವಿನಲ್ಲಿ ಬಚ್ಚಿಟ್ಟಿದ್ದ ಎನ್ನಾಲಾಗ್ತಿದೆ.
ಮೃತ ಭಾರತಿ ಮನೆಗೆಲಸ ಮಾಡಿಕೊಂಡು ಸಂಸಾರ ನಡೆಸುತ್ತಿದ್ದರು. ಕಾಶಿನಾಥ್ ದಿನನಿತ್ಯ ಮದ್ಯ ಸೇವನೆಗಾಗಿ ಹೆಂಡತಿ ಹತ್ತಿರ ಹಣಕ್ಕಾಗಿ ಪೀಡುಸುತ್ತಿದ್ದ. ಇದಕ್ಕಾಗಿ ಮನೆಯಲ್ಲಿ ಗಲಾಟೆ ನಡೆದಿದೆ ಎಂದು ಹೇಳಲಾಗಿದೆ. ಗುರುವಾರ ಬೆಳಗ್ಗೆ ಅಕ್ಕಪಕ್ಕ ಮನೆಯವರಿಗೆ ಭಾರತಿ ಕೊನೆಯದಾಗಿ ಕಾಣಿಸಿಕೊಂಡಿದ್ದರಂತೆ.
ಭಾರತಿ ಅವರ ಮಗ ವಿಶ್ವನಾಥ್ ಬಟ್ಟೆ ಹುಡುಕಲು ಬೀರು ತೆರೆದಾಗ ತಾಯಿಯ ಶವ ಕೊಳೆತ ಸ್ಥಿತಿಯಲ್ಲಿತ್ತು ಎಂದು ತಿಳಿಸಿದ್ದಾರೆ. ನಂತರ ಪೊಲೀಸರು ಅಪರಾಧ ಸ್ಥಳಕ್ಕೆ ಧಾವಿಸಿ, ಪ್ರಕರಣ ದಾಖಲಿಸಿಕೊಂಡು, ದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ಮೃತದೇಹ ಕೊಳೆತಿರುವುದರಿಂದ ಕೋಲ್ಕತ್ತಾಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.
‘‘ತಾಯಿ ಚಿಕ್ಕಮ್ಮನ ಮನೆಗೆ ಹೋಗಿದ್ದಾಳೆಂದು ತಿಳಿದಿದ್ದೆ. ಆದರೆ ಎರಡು ದಿನ ಕಳೆದರೂ ಆಕೆ ಅಲ್ಲಿಗೆ ಹೋಗದೇ ಇರುವುದು ಕಂಡು ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅವರ ಫೋಟೋ ಹಾಕಿದ್ದೆ. ಶನಿವಾರ ಬೆಳಗ್ಗೆ ಬಟ್ಟೆ ಹುಡುಕಾಡುತ್ತಿದ್ದಾಗ, ದೇಹ ಬೀರುವಿನಿಂದ ಬಿದ್ದಿತು, ಇದಕ್ಕೆ ಕಾರಣವೇನು?" ಅವಳಿಗೆ ಏನಾಯಿತು ಎಂದು ನನಗೆ ತಿಳಿಯದಾಗಿದೆ’’ ಎಂದು ಮಹಿಳೆಯ ಪುತ್ರ ವಿಶ್ವನಾಥ ಧಾರ್ ಹೇಳಿದರು.
ಇದನ್ನೂ ಓದಿ: ಶಾಕಿಂಗ್: 3 ವರ್ಷದ ಬಾಲಕಿ ಮೇಲೆ 13 ವರ್ಷದ ಬಾಲಕನಿಂದ ಅತ್ಯಾಚಾರ