ETV Bharat / bharat

ಸಮುದ್ರದ ಪಾಲಾಗಿದ್ದಾರೆ ಎಂದುಕೊಂಡು 2 ದಿನ ಶೋಧ ಕಾರ್ಯ: ಇತ್ತ, ಯುವಕನೊಂದಿಗೆ ವಿವಾಹಿತ ಮಹಿಳೆ ಪತ್ತೆ! - ಬೀಚ್​​ನಲ್ಲಿ ಕೊಚ್ಚಿಕೊಂಡು ಹೋಗಿದ್ದಾಳೆ ಎಂದು ಭಾವಿಸಲಾಗಿದ್ದ ಮಹಿಳೆ ಪತ್ತೆ

ವಿಶಾಖಪಟ್ಟಣಂನ ಆರ್.​ಕೆ.ಬೀಚ್​ನಲ್ಲಿ ಪತ್ನಿ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ಪತಿ ದೂರು ನೀಡಿದ ಕಾರಣ ಎರಡು ತಿಂಗಳಿಂದ ಸಮುದ್ರದಲ್ಲಿ ಶೋಧ ಕಾರ್ಯ ನಡೆಸುತ್ತಿದ್ದರೆ, ಇತ್ತ ಆಕೆ ಯುವಕನೊಂದಿಗೆ ಪತ್ತೆಯಾಗಿರುವ ವಿಚಿತ್ರ ಘಟನೆ ಜರುಗಿದೆ.

woman-who-vanished-in-vizag-rk-beach-found-in-nellore
ಸಮುದ್ರದ ಪಾಲಾಗಿದ್ದಾಳೆ ಎಂದುಕೊಂಡು 2 ದಿನದಿಂದ ಶೋಧ ಕಾರ್ಯ: ಇತ್ತ, ಯುವಕನೊಂದಿಗೆ ವಿವಾಹಿತ ಮಹಿಳೆ ಪತ್ತೆ!
author img

By

Published : Jul 27, 2022, 5:36 PM IST

ವಿಶಾಖಪಟ್ಟಣಂ(ಆಂದ್ರ ಪ್ರದೇಶ): ಬೀಚ್​​ನಲ್ಲಿ ಕೊಚ್ಚಿಕೊಂಡು ಹೋಗಿದ್ದಾಳೆ ಎಂದು ಭಾವಿಸಲಾಗಿದ್ದ ವಿವಾಹಿತ ಮಹಿಳೆಯೊಬ್ಬರು ಎರಡು ದಿನಗಳ ನಂತರ ಯುವಕನೊಬ್ಬನ ಜೊತೆ ಪತ್ತೆಯಾಗಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಮಹಿಳೆ ಪತ್ತೆಯಾದ ವಿಷಯ ತಿಳಿದು ಸಮುದ್ರದಲ್ಲಿ ನಡೆಸುತ್ತಿದ್ದ ಶೋಧ ಕಾರ್ಯ ಸ್ಥಗಿತಗೊಳಿಸಲಾಗಿದೆ.

ವಿಶಾಖಪಟ್ಟಣಂ ವಿಶಾಖಪಟ್ಟಣಂನ ಆರ್.​ಕೆ.ಬೀಚ್​ಗೆ ಸೋಮವಾರ ಸಾಯಿಪ್ರಿಯಾ ಎಂಬ ಮಹಿಳೆ ತನ್ನ ಪತಿ ಶ್ರೀನಿವಾಸ ರಾವ್ ಜೊತೆಗೆ ಬಂದಿದ್ದರು. ಎರಡನೇ ವಿವಾಹ ವಾರ್ಷಿಕೋತ್ಸವದ ನಿಮಿತ್ತ ಸಾಯಿಪ್ರಿಯಾ ದಂಪತಿ ಸಿಂಹಾಚಲಂಗೆ ತೆರಳಿದ್ದರು. ಅಲ್ಲಿಂದ ಆರ್.ಕೆ.ಬೀಚ್‌ಗೆ ತೆರಳಿದ್ದರು. ಆದರೆ, ಸಾಯಿಪ್ರಿಯಾ ಸಮುದ್ರದಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ಪತಿ ಶ್ರೀನಿವಾಸ ರಾವ್ ಪೊಲೀಸರಿಗೆ ದೂರು ನೀಡಿದ್ದರು.

ಅಂತೆಯೇ, ಪೊಲೀಸರು, ನೌಕಾಪಡೆ ಮತ್ತು ಕೋಸ್ಟ್ ಗಾರ್ಡ್ಸ್ ಸಿಬ್ಬಂದಿ ಎರಡು ದಿನಗಳ ಕಾಲ ಸ್ಪೀಡ್ ಬೋಟ್​ಗಳು ಹಾಗೂ ನೌಕಾಪಡೆಯ ಹೆಲಿಕಾಪ್ಟರ್ ಬಳಸಿ ಶೋಧ ಕಾರ್ಯದಲ್ಲಿ ತೊಡಗಿದ್ದರು. ಎರಡು ದಿನಗಳ ಕಳೆದರೂ ಸಾಯಿ ಪ್ರಿಯಾ ಪತ್ತೆಯಾಗದ ಕಾರಣ ನಾಪತ್ತೆಯಾಗಿದ್ದಾರೆ ಅಥವಾ ಇನ್ನೇನಾದರೂ ಸಂಭವಿಸಿದೆಯೇ ಎಂಬ ಅನುಮಾನಗಳು ಕೂಡ ಹುಟ್ಟಿಕೊಂಡಿದ್ದವು. ಆದರೆ, ಇದೀಗ ವಿಚಿತ್ರ ಎಂಬಂತೆ ಸಾಯಿಪ್ರಿಯಾ ನೆಲ್ಲೂರಿನಲ್ಲಿ ಬೇರೆ ಯುವಕನೊಂದಿಗೆ ಪತ್ತೆಯಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಸಾಯಿಪ್ರಿಯಾ ಪತ್ತೆಯಾಗಿ ಸಮುದ್ರದಲ್ಲಿ ಎಲ್ಲ ರೀತಿಯಲ್ಲಿ ಹುಡುಕಾಟ ಆರಂಭಿಸಲಾಗಿತ್ತು. ಇಂದು ಆಕೆ ನೆಲ್ಲೂರಿನಲ್ಲಿ ಯುವಕನೊಬ್ಬನ ಜೊತೆ ಇದ್ದಾಳೆ ಎಂಬ ಮಾಹಿತಿ ಸಿಕ್ಕಿದೆ. ಆದರೆ, ಅವರ ಫೋಟೋಗಳು ಮತ್ತು ವಿಡಿಯೋಗಳು ಅಧಿಕೃತವಾಗಿ ನಮಗೆ ಇನ್ನೂ ಬಂದಿಲ್ಲ ಎಂದು ವಿಶಾಖಪಟ್ಟಣಂ ಉಪಮೇಯರ್ ಶ್ರೀಧರ್ ತಿಳಿಸಿದ್ದಾರೆ.

ಇನ್ನು, ಪತಿ - ಪತ್ನಿಯರ ನಡುವೆ ಕೆಲ ಕಲಹ ಇತ್ತು ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಯುವಕನ ಜೊತೆ ನೆಲ್ಲೂರಿಗೆ ಹೋಗಿದ್ದಾಳೆ ಎಂದೂ ಹೇಳಲಾಗುತ್ತಿದೆ. ಈ ಬಗ್ಗೆ ಪೊಲೀಸರು ಸಂಪೂರ್ಣ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಇದನ್ನೂ ಓದಿ: ಪೋಷಕರ ಆರ್ಥಿಕ ಸಂಕಷ್ಟಕ್ಕೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ.. ತಮಿಳುನಾಡಿನಲ್ಲಿ ಮತ್ತೊಂದು ಘಟನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.