ETV Bharat / bharat

ಅಚ್ಚರಿಯಾದರೂ ಸತ್ಯ: 34 ಬಾರಿ ವಿಷಸರ್ಪ ಕಡಿದರೂ ಬದುಕುಳಿದ ಗಟ್ಟಿಜೀವ ಇದು! - ಮಹಿಳೆಗೆ ಹಾವು ಕಡಿತ

ಕೆಲವೊಮ್ಮೆ ಇವರ ಕೈಗಳಿಗೆ ಮತ್ತೆ ಕೆಲವೊಮ್ಮೆ ಕಾಲುಗಳಿಗೆ ಹಾವು ಕಚ್ಚಿದೆಯಂತೆ. ಹೊಲದಲ್ಲಿ ಕೆಲಸ ಮಾಡುವಾಗ ಅನೇಕ ಬಾರಿ ಕಚ್ಚಿಸಿಕೊಂಡಿದ್ದಾರಂತೆ ಈ ಮಹಿಳೆ. ಹೀಗೆ, ಬರೋಬ್ಬರಿ 34 ಬಾರಿ ಹಾವಿನಿಂದ ಕಚ್ಚಿಸಿಕೊಂಡಿರುವಾಕೆ ಈಗ ಆಸ್ಪತ್ರೆಗೆ ಹೋಗುವುದನ್ನೇ ಬಿಟ್ಟುಬಿಟ್ಟಿದ್ದಾರೆ.

woman-who-survived-from-snake-bite
34 ಬಾರಿ ವಿಷಸರ್ಪ ಕಡಿದರೂ ಬದುಕುಳಿದ ಗಟ್ಟಿಜೀವ
author img

By

Published : Jul 5, 2021, 6:01 AM IST

ಚಿತ್ತೋರ್​ಗಢ (ರಾಜಸ್ಥಾನ): ಹಾವುಗಳೆಂದರೆ ಮಾರುದ್ದ ಓಡಿ ಹೋಗುವ ಜನರು ಮೊದಲು ತಮ್ಮ ಜೀವ ಉಳಿಸಿಕೊಳ್ಳಲು ನೋಡುತ್ತಾರೆ. ಅಲ್ಲದೆ ವಿಷಕಾರಿ ಹಾವುಗಳು ಕಚ್ಚಿದಾಗ ಆಸ್ಪತ್ರೆಗೆ ತೆರಳಲು ಸಹ ಸಮಯ ಇಲ್ಲದೆ ತಕ್ಷಣವೇ ಸಾವು ಬಂದೊದಗುತ್ತದೆ. ಆದರೆ ಚಿತ್ತೋರ್​ಗಢದ ಈ ಮಹಿಳೆಗೆ 34 ಬಾರಿ ಹಾವು ಕಡಿದರೂ ಇಂದಿಗೂ ಆರೋಗ್ಯವಾಗಿದ್ದಾರೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹಳ್ಳಿಯ ಶಾಖೆಯಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿರುವ 45 ವರ್ಷದ ಬ್ರಜಬಾಲಾ ತಿವಾರಿಗೆ ಹಾವುಗಳು ಹಿಂದೆಬಿದ್ದು ಕಚ್ಚುತ್ತಿದ್ದವಂತೆ. ಅದು ಒಂದೆರಡು ಬಾರಿ ಅಲ್ಲ ಬರೋಬ್ಬರಿ 34 ಬಾರಿ ಕಚ್ಚಿಸಿಕೊಂಡಿದ್ದಾರೆ. ಒಮ್ಮೆ ಹಾವು ಕಚ್ಚಿದಾಗ ಆಕಯೆ ಪತಿ ಕೃಷ್ಣ ದತ್ ತಿವಾರಿ ಸೇರಿದಂತೆ ಕುಟುಂಬ ಸದಸ್ಯರು ಭಯಭೀತರಾಗಿದ್ದು ತಕ್ಷಣ ಅವರನ್ನು ಚಿತ್ತೋರ್‌ಗಢ ಜಿಲ್ಲಾ ಆಸ್ಪತ್ರೆಗೆ ಕರೆತರಲಾಗಿತ್ತು. ಬಳಿಕ ಕೆಲ ದಿನಗಳಲ್ಲೇ ಬ್ರಜಬಾಲಾ ಚೇತರಿಸಿಕೊಂಡಿದ್ದರು.

ಮಹಿಳೆಯ ಹಿಂದೆ ಬಿದ್ದು ಕಾಡುತ್ತಿವೆ ವಿಷ ಸರ್ಪಗಳು

ಇದಾದ ಬಳಿಕ ಹಲವು ಬಾರಿ ಹಾವು ಕಡಿದಿದೆ. ಮನೆಯಲ್ಲಿದ್ದಾಗ, ಜಮೀನಿಗೆ ಹೋದಾಗ, ಮಲಗಿದ್ದಾಗಲೂ ಹಾವುಗಳು ಕಚ್ಚಿವೆ. 2000ಕ್ಕೂ ಮೊದಲು ಅವರಿಗೆ ಹಾವು ಕಡಿದಾಗ ಕುಟುಂಬ ಸದಸ್ಯರ ಜೊತೆ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ 2000ದಿಂದೀಚೆಗೆ ಹಾವು ಕಡಿದಾಗ ಆಸ್ಪತ್ರೆಗೆ ತೆರಳದೆ ಮನೆಯಲ್ಲಿಯೇ ಔಷಧಿ ಬಳಸಿ ಗುಣಮುಖರಾಗುತ್ತಿದ್ದಾರಂತೆ.

ಅಚ್ಚರಿ ಎಂದರೆ ಆಕೆಯ ಹಾಸಿಗೆಯ ಕೆಳಗೆ ಹಾವೊಂದು ಸೇರಿಕೊಂಡು ಕಚ್ಚಿ ಬೆಳಗ್ಗೆ ಅಲ್ಲಿಂದ ಮರಳಿತ್ತಂತೆ. ಅಲ್ಲದೆ ಬ್ರಜಬಾಲಾ ತನ್ನ ಮಕ್ಕಳ ನಡುವೆ ಮಲಗಿದ್ದರೂ ಹಾವು ಅವಳನ್ನೇ ಕಚ್ಚುತ್ತಿದ್ದವು. ಆದರೆ ಹಾವುಗಳ ಈ ದ್ವೇಷಕ್ಕೆ ಕಾರಣ ಏನೆಂಬುದು ಕುಟುಂಬಸ್ಥರಿಗೆ ತಿಳಿದಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.