ದಾಹೋಡ್(ಗುಜರಾತ್): ಮಹಿಳಾ ಸಬಲೀಕರಣದ ಬಗ್ಗೆ ದೇಶದಲ್ಲಿ ಮೇಲಿಂದ ಮೇಲೆ ಮಾತುಕತೆ ನಡೆಯುತ್ತಲೇ ಇರುತ್ತದೆ. ಆದರೆ ಅವರ ಮೇಲಿನ ದೌರ್ಜನ್ಯ, ಕಿರುಕುಳದಂತಹ ಪ್ರಕರಣಗಳು ಮಾತ್ರ ನಿಲ್ಲುತ್ತಿಲ್ಲ. ಸದ್ಯ ಅಂತಹದೊಂದು ಘಟನೆ ಗುಜರಾತ್ನ ದಾಹೋಡ್ದಲ್ಲಿ ನಡೆದಿದೆ.
ದಾಹೋಡ್ ಜಿಲ್ಲೆಯ ಖಜುರಿ ಗ್ರಾಮದ ವಿವಾಹಿತೆ ತಾನು ಪ್ರೀತಿಸಿದ್ದ ಯುವಕನೊಂದಿಗೆ ಓಡಿ ಹೋಗಿದ್ದಳು. ಆಕೆಯನ್ನ ಹಿಡಿಯಲು ಯಶಸ್ವಿಯಾಗಿರುವ ಪತಿ ಹಾಗೂ ಅಳಿಯಂದಿರು ಅಮಾನವೀಯ ರೀತಿಯಲ್ಲಿ ಥಳಿಸಿದ್ದಾರೆ. ಜತೆಗೆ ಆಕೆ ಹಾಕಿಕೊಂಡಿದ್ದ ಬಟ್ಟೆ ಹರಿದು ಹಾಕಿದ್ದಾರೆ. ಇದಾದ ಬಳಿಕ ಗಂಡನನ್ನ ಹೆಗಲ ಮೇಲೆ ಹೊತ್ತುಕೊಂಡು ಸಂಪೂರ್ಣ ಊರು ಸುತ್ತು ಹಾಕುವಂತೆ ಶಿಕ್ಷೆ ವಿಧಿಸಿದ್ದಾರೆ. ಈ ವೇಳೆ ಅನೇಕರು ಆಕೆಗೆ ಹಿಂಸೆ ನೀಡಿದ್ದಾರೆ.
ಇದನ್ನೂ ಓದಿರಿ: ಗರ್ಲ್ಫ್ರೆಂಡ್ ಭೇಟಿಯಾಗಲು ತೆರಳಿದ್ದವನಿಗೆ ಥಳಿತ... ಪ್ರೀತಿಗೆ ಕರಗಿ ಮದುವೆ ಮಾಡಿಸಿದ ಕುಟುಂಬ!
ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಪೊಲೀಸರು 19 ಜನರ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಸಂತ್ರಸ್ತ ಮಹಿಳೆಯ ವಿಚಾರಣೆ ನಡೆಸಲಾಗಿದ್ದು, ಈಗಾಗಲೇ ಆರು ಮಂದಿಯ ಬಂಧನ ಸಹ ಮಾಡಿದ್ದಾರೆ. ಪ್ರಮುಖವಾಗಿ ಗಂಡ, ಅಳಿಯಂದಿರು ಮೃಗಿಯ ರೀತಿಯಲ್ಲಿ ವರ್ತಿಸಿದ್ದಾರೆಂದು ಆಕೆ ತಿಳಿಸಿದ್ದಾಳೆ.