ತಿರುವನಂತಪುರಂ (ಕೇರಳ) : ಸತತ ನಾಲ್ಕು ವರ್ಷಗಳ ಕಾಲ ಅಪ್ರಾಪ್ತ ಮಗನಿಗೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪದಲ್ಲಿ ತಾಯಿಯೊಬ್ಬಳನ್ನು ಪೊಲೀಸರು ಬಂಧಿಸಿ, ಕೋರ್ಟ್ ಮುಂದೆ ಹಾಜರುಪಡಿಸಿದ್ದಾರೆ.
ತಿರುವನಂತಪುರಂನ ಕಡಕ್ಕವುರ್ ಮೂಲದ ಈ ಮಹಿಳೆಯ ವಿರುದ್ಧ ದೂರು ದಾಖಲಾಗಿದೆ. ಇದೇ ಮೊದಲ ಬಾರಿಗೆ ಕೇರಳದಲ್ಲಿ ಈ ರೀತಿಯ ಕೃತ್ಯಕ್ಕಾಗಿ ತಾಯಿಯ ವಿರುದ್ಧ ಪೋಕ್ಸೋ ಕಾಯ್ದೆಯಡಿ ದೂರು ದಾಖಲಾಗಿದೆ.
ಘಟನೆ ಬೆಳಕಿಗೆ ಬಂದಿದ್ದು ಹೀಗೆ..: ಬಾಲಕನ ತಾಯಿ ಕೇರಳದಲ್ಲಿ ವಾಸವಿದ್ದರೆ ಹಾಗೂ ತಂದೆ ವಿದೇಶದಲ್ಲಿ ವಾಸವಾಗಿದ್ದ. 2019ರ ಡಿಸೆಂಬರ್ನಲ್ಲಿ ಮಗನನ್ನು ತನ್ನೊಂದಿಗೆ ವಿದೇಶಕ್ಕೆ ಕರೆದುಕೊಂಡು ಹೋಗಿದ್ದು, ಮಗನ ವರ್ತನೆ ಸರಿಯಿಲ್ಲದ್ದನ್ನು ಕಂಡು ಕೇರಳಕ್ಕೆ ವಾಪಸ್ಸಾಗಿ ಮಕ್ಕಳ ರಕ್ಷಣಾ ಸಮಿತಿಗೆ ದೂರು ನೀಡಿ, ಸಮಾಲೋಚನೆ ನಡೆಸುವಂತೆ ಮನವಿ ಮಾಡಿದ್ದನು.
ಇದನ್ನೂ ಓದಿ: ಕೆಲಸದ ಒತ್ತಡ ತಾಳಲಾರದೆ ಆತ್ಮಹತ್ಯೆಗೆ ಯತ್ನಿಸಿದ ಸರ್ಕಾರಿ ನೌಕರ
ಸಮಾಲೋಚನೆ ವೇಳೆ ತನಗೆ ನಾಲ್ಕು ವರ್ಷಗಳಿಂದ ತಾಯಿ ತನ್ನೊಂದಿಗೆ ಯಾವ ರೀತಿ ವರ್ತಿಸುತ್ತಿದ್ದರೆಂಬುದರ ಬಗ್ಗೆ ಬಾಲಕ ಮಾಹಿತಿ ನೀಡಿದ್ದು, ಈ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.